ಬಿಹಾರ[ಮಾ.25]: ಮಕ್ಕಳು ಅತ್ತರೆ ಅವರನ್ನು ಸಮಾಧಾನ ಮಾಡುವುದೊಂದೇ ಗತಿ. ಆದರೆ, ಅಳುತ್ತಿದ್ದ ಮಗನ ಬಾಯಿ ಮುಚ್ಚಿಸಲು ಬಿಹಾರದ ಛಪ್ರಾ ಜಿಲ್ಲೆಯ ಮಹಿಳೆಯಬ್ಬಳು ಬಾಯಿಗೆ ಗಮ್‌ ಅಂಟಿಸಿದ ವಿಚಿತ್ರ ಪ್ರಸಂಗ ನಡೆದಿದೆ.

ಕೆಲಸ ಮುಗಿಸಿಕೊಂಡು ತಂದೆ ಮನೆಗೆ ಬಂದಾಗ ಮಗು ಸುಮ್ಮನೆ ಕುಳಿತಿತ್ತು. ಏನಿರಬಹುದು ಎಂದು ಪರಿಶೀಲಿಸಿದರೆ ಮಗನ ಬಾಯಿಯಿಂದ ನೊರೆ ಬರುತ್ತಿತ್ತು. ಬಳಿಕ ಮಗುವಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಪಾಯದಿಂದ ಪಾರಾಗಿದೆ.

ಮುಗುವಿನ ಬಾಯಿಗೆ ಗಮ್‌ ಅಂಟಿಸಿದ್ದು ಏಕೆ ಎಂದು ಪತ್ನಿ ಶೋಭಾಳನ್ನು ಪತಿ ಪ್ರಶ್ನಿಸಿದಾಗ, ಯಾವಾಗ ನೋಡಿದರೂ ಬಾಲಕ ಅಳುತ್ತಲೇ ಇರುತ್ತಾನೆ. ಹೀಗಾಗಿ ಬಾಯಿ ಮುಚ್ಚಿಸಲು ಗಮ್‌ ಅಂಟಿಸಿದೆ ಎಂದು ಆಕೆ ಹೇಳಿದ್ದಾಳೆ.