ಜೂನ್ 1ರಂದು ಕೇರಳಕ್ಕೆ ಮುಂಗಾರು ಪ್ರವೇಶ ಸಾಧ್ಯತೆ
ಭಾರತದ ರೈತರು ಹಾಗೂ ಜನರ ಜೀವನಾಡಿ ಎಂದು ಎನ್ನಿಸಿಕೊಂಡಿರುವ ಮುಂಗಾರು ಕೇರಳಕ್ಕೆ ಜೂನ್ 1ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಹೇಳಿದೆ.
ನವದೆಹಲಿ(ಮೇ 29): ಭಾರತದ ರೈತರು ಹಾಗೂ ಜನರ ಜೀವನಾಡಿ ಎಂದು ಎನ್ನಿಸಿಕೊಂಡಿರುವ ಮುಂಗಾರು ಕೇರಳಕ್ಕೆ ಜೂನ್ 1ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಹೇಳಿದೆ.
ಈ ಮುನ್ನ ಮೇ 15ರಂದು ಬಿಡುಗಡೆ ಮಾಡಿದ್ದ ಮುನ್ಸೂಚನೆ ವೇಳೆ ಜೂನ್ 5ರ ಸುಮಾರಿಗೆ ಕೇರಳಕ್ಕೆ ಮುಂಗಾರು ಆಗಮನ ಆಗಬಹುದು. ವಾಡಿಕೆಗಿಂತ 4 ದಿನ ವಿಳಂಬ ಆಗಮನ ಆಗಬಹುದು ಎಂದು ಇಲಾಖೆ ಮುನ್ಸೂಚನೆ ನೀಡಿತ್ತು.
ರಾಮಮಂದಿರಕ್ಕೆ ಪಾಕ್ ತಕರಾರು: ಭಾರತದ ಭರ್ಜರಿ ತಿರುಗೇಟು
‘ಆದರೆ ಬಂಗಾಳಕೊಲ್ಲಿಯಲ್ಲಿ ಉಂಟಾಗಬಹುದಾದ ಚಂಡಮಾರುತವು ಮುಂಗಾರಿನ ವೇಗವನ್ನು ತೀವ್ರಗೊಳಿಸಲು ನೆರವಾಗುವ ಸಾಧ್ಯತೆ ಇದೆ. ಮೇ 31ರಿಂದ ಜೂನ್ 4ರ ಮಧ್ಯೆ, ಕೇಂದ್ರ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಬಹುದು. ಇದು ಜೂನ್ 1ಕ್ಕೇ ಮುಂಗಾರು ಅಗಮನಕ್ಕೆ ನೆರವಾಗಬಹುದು’ ಎಂದು ಹವಾಮಾನ ಇಲಾಖೆ ಹೇಳಿದೆ. ಈ ವರ್ಷ ಅಂದುಕೊಂಡಂತೆ ಉತ್ತಮ ಮಳೆ ಬೀಳಬಹುದು ಎಂದು ಈಗಾಗಲೇ ಅದು ಅಂದಾಜಿಸಿದೆ.