ನವದೆಹಲಿ(ಮೇ.30): ಕೊರೋನಾ ಶಂಕಿತರ ಗಂಟಲು ದ್ರವ ಮಾದರಿಯನ್ನು ಕೋತಿಗಳ ಗುಂಪೊಂದು ಹೊತ್ತೊಯ್ದಿರುವ ವಿಚಿತ್ರ ಘಟನೆ ಶುಕ್ರವಾರ ಉತ್ತರ ಪ್ರದೇಶದ ಮೇರಠ್‌ ವೈದ್ಯ ಕಾಲೇಜು ಆವರಣದಲ್ಲಿ ನಡೆದಿದೆ.

ಕೊರೋನಾ ಶಂಕಿತರ ಗಂಟಲು ದ್ರವ ಪರೀಕ್ಷೆಗೆಂದು ಸ್ಯಾಂಪಲ್ಸ್‌ ಹಿಡಿದು ಬರುತ್ತಿದ್ದ ಪ್ರಯೋಗಾಲಯ ಸಿಬ್ಬಂದಿ ಮೇಲೆ ದಾಳಿ ಮಾಡಿದ ಕೋತಿಗಳ ಗುಂಪು, ಮೂವರು ಶಂಕಿತರ ಸ್ಯಾಂಪಲ್‌ ಕಿಟ್‌ಗಳನ್ನು ಹೊತ್ತೊಯ್ದಿದೆ. ಈ ಕಪಿಚೇಷ್ಟೆ ವಿಡಿಯೋ ವೈರಲ್‌ ಆಗಿದ್ದು, ಕೋತಿಯೊಂದು ಮರದ ಮೇಲೆ ಕುಳಿತು ಮಾದರಿ ಸಂಗ್ರಹಿಸಿದ ಕಿಟ್‌ಅನ್ನು ಅಗಿಯುವ ದೃಶ್ಯವಿದೆ.

ಘಟನೆ ಸಂಬಂಧ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಮಂಗಗಳನ್ನು ಇನ್ನೂ ಸೆರೆಹಿಡಿದಿಲ್ಲರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ವೈದ್ಯರು ಮತ್ತೊಮ್ಮೆ ಶಂಕಿತರ ಗಂಟಲು ದ್ರವವನ್ನು ಪಡೆದಿದ್ದಾರೆ.