ಲಕ್ನೋ (ಅ. 04):  ಮಂಗ ತನ್ನ ಕೈಯಲ್ಲಿ ಹಿಡಿದುಕೊಂಡಿದ್ದನ್ನು ಅಷ್ಟುಸುಲಭವಾಗಿ ಬಿಡುವುದಿಲ್ಲ. ಆದರೆ, ಮಂಗನ ಕೈತಪ್ಪಿ ಬಿದ್ದ ಕಲ್ಲು ತಗುಲಿ ನಾಲ್ಕು ತಿಂಗಳ ಮಗುವೊಂದು ಸಾವನ್ನಪ್ಪಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮುಜಫರಾಬಾದ್‌ನಲ್ಲಿ ಶನಿವಾರ ನಡೆದಿದೆ.

ಮಗು ಪೋಷಕರ ಜೊತೆ ಮನೆಯ ಅಂಗಳದಲ್ಲಿ ಆಟವಾಡುತ್ತಿತ್ತು. ಮನೆಯ ಮೇಲೆ ಮಂಗ ಬಂದಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಟೆರೆಸ್‌ ಮೇಲೆ ಹಾರುತ್ತಿದ್ದ ಮಂಗ ಅಲ್ಲಿದ್ದ ಕಲ್ಲೊಂದನ್ನು ಕೆಳಕ್ಕೆ ಬೀಳಿಸುತ್ತಿತ್ತು. ಆದರೆ, ಆ ಕಲ್ಲು ನೇರವಾಗಿ ಮಗುವಿನ ಮೇಲೆಯೇ ಬಿದ್ದಿದ್ದರಿಂದ ಮಗು ತೀವ್ರ ಗಾಯಗೊಂಡಿತ್ತು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.