Asianet Suvarna News Asianet Suvarna News

ಕಾಶ್ಮೀರದಲ್ಲಿ ನಾಪತ್ತೆ ಆಗಿದ್ದ ಯೋಧ ಜಾವೇದ್‌ ವಾನಿ ಪತ್ತೆ

ಕಾಶ್ಮೀರದಲ್ಲಿ ರಜೆಯ ಮೇಲೆ ಮನೆಗೆ ತೆರಳಿದಾಗ ನಾಪತ್ತೆ ಆಗಿದ್ದ ಸೇನೆಯ ಯೋಧ ಗುರುವಾರ ಪತ್ತೆ ಆಗಿದ್ದಾರೆ. ‘ಯೋಧ ಜಾವೇದ್‌ ಅಹ್ಮದ್‌ ವಾನಿಯನ್ನು ಕುಲ್ಗಾಂ ಪೊಲೀಸರು ರಕ್ಷಿಸಿದ್ದಾರೆ.

Missing Kashmiri soldier Javed Wani was found in Kashmir akb
Author
First Published Aug 4, 2023, 11:52 AM IST | Last Updated Aug 4, 2023, 11:52 AM IST

ಶ್ರೀನಗರ: ಕಾಶ್ಮೀರದಲ್ಲಿ ರಜೆಯ ಮೇಲೆ ಮನೆಗೆ ತೆರಳಿದಾಗ ನಾಪತ್ತೆ ಆಗಿದ್ದ ಸೇನೆಯ ಯೋಧ ಗುರುವಾರ ಪತ್ತೆ ಆಗಿದ್ದಾರೆ. ‘ಯೋಧ ಜಾವೇದ್‌ ಅಹ್ಮದ್‌ ವಾನಿಯನ್ನು ಕುಲ್ಗಾಂ ಪೊಲೀಸರು ರಕ್ಷಿಸಿದ್ದಾರೆ. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಮುಂದಿನ ವಿಚಾರಣೆ ನಡೆಸಲಾಗುತ್ತದೆ’ ಎಂದು ಜಮ್ಮು-ಕಾಶ್ಮೀರ ಪೊಲೀಸರು ಹೇಳಿದ್ದಾರೆ. ಲಡಾಖ್‌ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಕುಲ್ಗಾಂನ ವಾನಿ, ರಜೆ ಮೇಲೆ ತೆರಳಿದಾಗ ಶನಿವಾರ ಸಂಜೆಯಿಂದ ನಾಪತ್ತೆ ಆಗಿದ್ದರು. ಅವರಿಲ್ಲದೇ ಕಾರು ಪತ್ತೆ ಆಗಿತ್ತು ಹಾಗೂ ಉಗ್ರರು ಅಪಹರಿಸಿರಬಹುದು ಅಥವಾ ಹತ್ಯೆ ಆಗಿರಬಹುದು ಎಂಬ ಶಂಕೆ ಉಂಟಾಗಿತ್ತು.

ಕುಲ್ಗಾಮ್ ಜಿಲ್ಲೆಯ ಅಚಾತಲ್ ಪ್ರದೇಶದ 25 ವರ್ಷದ ಭಾರತೀಯ ಸೇನಾ ಯೋಧ ಜಾವೇದ್ ಅಹ್ಮದ್ ವಾನಿ ರಜೆಯ ಮೇಲೆ ಮನೆಗೆ ಬಂದಿದ್ದರು. ಹೀಗೆ ಮನೆಗೆ ಬಂದವರು ಕಾಶ್ಮೀರದ ಚೋವಲ್ಗಾಮ್‌ನಲ್ಲಿ ಶಾಪಿಂಗ್ ಮಾಡಲು ತೆರಳಿದ್ದು,  ನಂತರ ನಾಪತ್ತೆಯಾಗಿದ್ದರು.  ಅವರ ವಾಹನ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಅವರು ನಾಪತ್ತೆಯಾಗಿದ್ದಾರೆ ಎಂದು ಕುಟುಂಬದವರು ಜುಲೈ 30 ರಂದು ಆತಂಕ ವ್ಯಕ್ತಪಡಿಸಿದ್ದರು. 

ಕಾಶ್ಮೀರದಲ್ಲಿ ನಾಪತ್ತೆಯಾದ 25 ವರ್ಷದ ಯೋಧ: ಕಾರಿನಲ್ಲಿ ರಕ್ತದ ಕಲೆ ಪತ್ತೆ; ಉಗ್ರರಿಂದ ಕಿಡ್ನ್ಯಾಪ್‌?

ಲೇಹ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅವರು ಶನಿವಾರ (ಜುಲೈ 29) ಸಂಜೆ 6.30ರ ಸುಮಾರಿಗೆ ಮಾರುಕಟ್ಟೆಯಿಂದ ಕೆಲ ವಸ್ತುಗಳನ್ನು ಖರೀದಿಸಿಲು ಶಾಪಿಂಗ್‌ಗೆ ಹೋಗಿದ್ದರು. ಆಲ್ಟೋ ಕಾರನ್ನು ಓಡಿಸುತ್ತಿದ್ದು ರಾತ್ರಿ 9 ಗಂಟೆಯಾದರೂ ವಾಪಸ್‌ ಬಾರದೇ ಇದ್ದಾಗ ಕುಟುಂಬದವರು ಹುಡುಕಾಡಿದ್ದಾರೆ. ಹತ್ತಿರದ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರನ್ನು ಅವರ ಕುಟುಂಬ ಸದಸ್ಯರು ಹುಡುಕಲು ಪ್ರಾರಂಭಿಸಿದರು. ಶೋಧ ಕಾರ್ಯದ ವೇಳೆ ಪರಾನ್ಹಾಲ್ ಗ್ರಾಮದ ಮಾರುಕಟ್ಟೆಯ ಬಳಿ ಕಾರು ಪತ್ತೆಯಾಗಿದ್ದು, ವರದಿಗಳ ಪ್ರಕಾರ ಅದರಲ್ಲಿ ರಕ್ತದ ಕಲೆಗಳಿತ್ತು. ಶೋಧ ಕಾರ್ಯಾಚರಣೆಯ ವೇಳೆ ಅವರ ಕಾರಿನಲ್ಲಿ ಅವರ ಪಾದರಕ್ಷೆಗಳು ಮತ್ತು ರಕ್ತದ ಕುರುಹುಗಳು ಪತ್ತೆಯಾಗಿವೆ. ಕಾರಿನ ಬಾಗಿಲು ತೆರೆದಿತ್ತು ಎಂದೂ ವರದಿಯಾಗಿತ್ತು. ಹೀಗಾಗಿ ಯೋಧನನ್ನು ಉಗ್ರರು ಅಪಹರಿಸಿ ಹತ್ಯೆ ಮಾಡಿರಬಹುದು ಎಂಬ ಆತಂಕ ಮನೆ ಮಾಡಿತ್ತು. 

Latest Videos
Follow Us:
Download App:
  • android
  • ios