ಜೈಪುರ(ಅ.03): ಕಳೆದ ಕೆಲ ಸಮಯದಿಂದ ಬೆಡಳಕಿಗೆ ಬರುತ್ತಿರುವ ಘಟನೆಗಳಿಂದ ದೇಶದಲ್ಲಿ ಹೆಣ್ಮಕ್ಕಳಿಗೆ ರಕ್ಷಣೆ ಎಲ್ಲಿದೆ? ಎಂಬ ಬಹುದೊಡ್ಡ ಸವಾಲು ಎದುರಾಗಿದೆ. ಮಹಿಳೆಯರ ಹಾಗೂ ಹೆಣ್ಮಕ್ಕಳ ಸುರಕ್ಷತೆಯನ್ನು ದೇಶದ ಬಹುತೇಕ ಕಡೆ ಸರ್ಕಾರ ಲಘುವಾಗಿ ಪರಿಗಣಿಸಿದೆ ಎಂಬುವುದನ್ನು ಇದು ಸ್ಪಷ್ಟವಾಗಿ ಬಿಂಬಿಸುತ್ತದೆ.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿ ಮೇಲೆ ನಡೆದ ರಾಕ್ಷಸೀ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ  ನಡುವೆಯೇ ರಾಜಸ್ಥಾನದ ಸಿರೋಹಿ ಜಿಲ್ಲಡಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಸೆ.  25 ರಂದು ಬಾಲಕಿ ಸ್ನಾನಕ್ಕೆಂದು ತನ್ನ ಮನೆಯಿಂದ ಹೊರಗೆ ತೆರಳಿದ್ದಳು. ಈ ವೇಳೆ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದಾರೆನ್ನಲಾಗಿದೆ. ಕಳೆದ ಮೂರು ದಿನಗಳಲ್ಲಿ ರಾಜಸ್ಥಾನದಲ್ಲಿ ಇಂತಹುದೇ 16 ಪ್ರಕರಣಗಳು ವರದಿಯಾಗಿವೆ. 

"

ಇನ್ನು ಸಿರೋಹಿಯಲ್ಇ ಬಾಲಕಿ ತನ್ನ ಸಹೋದರನೊಂದಿಗೆ ಸ್ನಾಕ್ಕೆಂದು ತೆರಳಿದ್ದಳು. ಸಹೋದರ ತನ್ನ ತಂಗಿಯನ್ನು ಸ್ನಾನ ಮಾಡುವ ಸ್ಥಳದಲ್ಲಿ ಬಿಟ್ಟು ದೂರ ಹೋಗಿದ್ದ. ಈ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದ ರಕ್ಕಸರು ಬಾಲಕಿಯನ್ನು ಅತ್ಯಾಚಾರಗೈದಿದ್ದಾರೆ. ಇನ್ನು ಬಾಲಕಿ ತಮ್ಮ ಗುರುತು ಬಹಿರಂಗಪಡಿಸಬಹುದೆಂಬ ಭಯದಲ್ಲಿ ಬಾಲಕಿಯನ್ನು ಕೊಲೆ ಮಾಡಿದ್ದಾರೆ. 

ಈ ಪ್ರಕರಣ ನಡೆದು ಏಳು ದಿನಗಳಾಗಿದ್ದರೂ ಪೊಲೀಸರು ಮಾತ್ರ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಇನ್ನು ಸ್ಥಳೀಯರು ಆರೋಪಿ ಕಾಡಿನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದಿದ್ದಾರೆ. ಹೀಗಿದ್ದರೂ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.