ನವದೆಹಲಿ(ಫೆ.03): ಗಣರಾಜ್ಯೋತ್ಸವ ದಿನದಂದು ರೈತರ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ದಾಳಿಯನ್ನು ಕೇಂದ್ರ ಗೃಹ ಸಚಿವಾಲಯ ಸಂಸತ್ತಿನಲ್ಲಿ ಸಮರ್ಥಿಸಿಕೊಂಡಿದೆ.

ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ಜಿ. ಕೃಷ್ಣನ್‌ ರೆಡ್ಡಿ, ರೈತರ ಗಲಭೆಯನ್ನು ನಿಯಂತ್ರಿಸದೇ ಪೊಲೀಸರಿಗೆ ಬೇರೆ ಆಯ್ಕೆ ಇರಲಿಲ್ಲ. ರೈತರ ಪ್ರತಿಭಟನೆಯನ್ನು ಚದುರಿಸಲು ಅಶ್ರುವಾಯು, ಜಲಫಿರಂಗಿ ಹಾಗೂ ಸಣ್ಣ ಪ್ರಮಾಣದ ಬಲ ಪ್ರಯೋಗವನ್ನು ಮಾಡಲಾಯಿತು. ಪ್ರತಿಭಟನೆಯ ವೇಳೆ ಯಾವುದೇ ರೀತಿಯ ಸಾಮಾಜಿಕ ಅಂತರ ಪಾಲನೆ ಆಗಿಲ್ಲ. ಕೊರೋನಾ ನಿಯಂತ್ರಣದ ಹೊರತಾಗಿಯೂ ಮಾಸ್ಕ್‌ ಧರಿಸದೇ ಭಾರೀ ಸಂಖ್ಯೆಯ ಜನಜಂಗುಳಿ ಸೇರಿತ್ತು ಎಂದು ಸಚಿವರು ತಿಳಿಸಿದ್ದಾರೆ.

ಇದೇ ವೇಳೆ ನೂತನ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಮೂರು ತಿಂಗಳಿನಿಂದ ಹೋರಾಟ ನಡೆಸುತ್ತಿರುವ ರೈತರ ವಿರುದ್ಧ ದೆಹಲಿ ಪೊಲಿಸರು ರೈತರ ವಿರುದ್ಧ 39 ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ.