ಕೇರಳ ‘ಸಿಎಂ ಆಕಾಂಕ್ಷಿ’ ಮೆಟ್ರೋ ಶ್ರೀಧರನ್‌ಗೆ ಬಿಜೆಪಿ ಟಿಕೆಟ್‌| ಪಾಲಕ್ಕಾಡ್‌ನಿಂದ ಮೆಟ್ರೋಮ್ಯಾನ್‌ ಕಣಕ್ಕೆ

ತಿರುವನಂತಪುರ(ಮಾ.15): ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ‘ಹೈಪ್ರೊಫೈಲ್‌’ ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಿಸಿದೆ. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ‘ಮೆಟ್ರೋ’ ಶ್ರೀಧರನ್‌ ಅವರು ಪಾಲಕ್ಕಾಡ್‌ನಿಂದ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್‌ ಅವರು ಕಾಸರಗೋಡಿನ ಮಂಜೇಶ್ವರ ಹಾಗು ಪಟ್ಟಣಂತಿಟ್ಟಜಿಲ್ಲೆಯ ಕೊಣ್ಣಿಯಿಂದ (2 ಕ್ಷೇತ್ರ)ದಲ್ಲಿ ಟಿಕೆಟ್‌ ಗಿಟ್ಟಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಧಮಾಡೋಂ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿರುದ್ಧ ಹಿರಿಯ ನಾಯಕ ಸು.ಕೆ. ಪದ್ಮನಾಭನ್‌ ಕಣಕ್ಕಿಳಿಯಲಿದ್ದಾರೆ.

ನಟ ಸುರೇಶ್‌ ಗೋಪಿ ತ್ರಿಶ್ಶೂರಿನಿಂದ, ಮಾಜಿ ಕೇಂದ್ರ ಸಚಿವ ಕೆ.ಜೆ. ಅಲ್ಫೋನ್ಸ್‌ ಕಂಜಿರಪಳ್ಳಿಯಿಂದ, ನಿವೃತ್ತ ಡಿಜಿಪಿ ಡಾ| ಜೇಕಬ್‌ ಥಾಮಸ್‌ ಇರಿಂಞಲಕುಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲಿರುವ ಪ್ರಮುಖರು.