ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ವಿರುದ್ಧ ಅಣ್ಣಾಮಲೈ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದಾರೆ. ಇದು ಇಬ್ಬರ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.

ಚೆನ್ನೈ: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ಕರ್ನಾಟಕ ಕೇಡರ್‌ ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಮತ್ತು ಇತರ ಪಕ್ಷದ ನಾಯಕರು ಕಪ್ಪು ಬಟ್ಟೆ ಧರಿಸಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆ ಕುರಿತ ಸಭೆಗೆ ಡಿಕೆ ಶಿವಕುಮಾರ್ ಆಗಮಿಸಿದ ವೇಳೆ ಈ ಪ್ರಸಂಗ ನಡೆದಿದ್ದು, ಇದು ಉಭಯ ನಾಯಕರ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.‘ನಾನು ತಿಹಾರಕ್ಕೆ ಹೋದಾಗಲೇ ಹೆದರಲಿಲ್ಲ, ಅಣ್ಣಾಮಲೈಗೆ ಹೆದರ್ತೀನಾ? ನನ್ನ ವಿರುದ್ಧ ಪ್ರತಿಭಟಿಸಿದ ಅಣ್ಣಾಮಲೈಗೆ ಶುಭಾಶಯ’ ಎಂದು ವ್ಯಂಗ್ಯಭರಿತವಾಗಿ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಇದಕ್ಕೆ ವ್ಯಂಗ್ಯವಾಗೇ ತಿರುಗೇಟು ನೀಡಿರುವ ಅಣ್ಣಾಮಲೈ, ‘ಸಿದ್ದು ಕೆಳಗಿಳಿಸಲು ಯತ್ನಿಸುತ್ತಿರುವ ಡಿಕೆಶಿ ಯತ್ನಕ್ಕೆ ಶುಭವಾಗಲಿ’ ಎಂದಿದ್ದಾರೆ.

ಶನಿವಾರ ಬೆಳಗ್ಗೆ ಬಿಜೆಪಿ ಪ್ರತಿಭಟನೆ ಬಗ್ಗೆ ಚೆನ್ನೈಗೆ ಬಂದಿಳಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಿಕೆ ಶಿವಕುಮಾರ್, ‘ಬಿಜೆಪಿ ಕಪ್ಪು ಬಾವುಟ ಪ್ರತಿಭಟನೆಯನ್ನು ನಾನು ಸ್ವಾಗತಿಸುತ್ತೇನೆ. ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಿದಾಗಲೂ ನನಗೆ ಭಯವಾಗಲಿಲ್ಲ. ನನಗೆ ಈ ಬಿಜೆಪಿ ನಾಯಕನ (ಅಣ್ಣಾಮಲೈ) ಬಗ್ಗೆ ಹೆದರುವೆನಾ? ಈ ಅಧಿಕಾರಿ ನಮ್ಮ ಅಣ್ಣಾಮಲೈ ರಾಜ್ಯದಲ್ಲಿ ಕೆಲಸ ಮಾಡಿದರು. ಅವರು ನಮಗೆ ಸೇವೆ ಸಲ್ಲಿಸಿದರು. ಅವರಿಗೆ ನಮ್ಮ ಶಕ್ತಿ ತಿಳಿದಿದೆ. ಅವರು ತಮ್ಮ ಕೆಲಸವನ್ನು ಮಾಡಲಿ. ಅಣ್ಣಾಮಲೈಗೆ ನನ್ನ ಶುಭಾಶಯಗಳು’ ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯದಲ್ಲಿ ಸರ್ಕಾರದಿಂದಲೇ ಸ್ಮಾರ್ಟ್‌ ದಂಧೆ, 'ಮೀಟರ್‌' ಹೆಸರಲ್ಲಿ ಜನರಿಂದ ಹಣ ಲೂಟಿ ಮಾಡ್ತಿರೋದು ಹೇಗೆ?

Scroll to load tweet…

ಬಳಿಕ ಟ್ವೀಟರ್‌ನಲ್ಲಿ ತಿರುಗೇಟು ನೀಡಿದ ಅಣ್ಣಾಮಲೈ, ‘ಹೌದು, ನಾನು ಪೊಲೀಸ್ ಅಧಿಕಾರಿಯಾಗಿ ಕರ್ನಾಟಕದ ಜನರಿಗೆ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದೇನೆ. ಗಮನಾರ್ಹ ಉಲ್ಲೇಖಕ್ಕಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು ಅಲ್ಲದೆ, ಈ ಬಡವನಿಗೆ ಶುಭ ಹಾರೈಸಿದ್ದಕ್ಕಾಗಿ ಧನ್ಯವಾದಗಳು ಮತ್ತು ಸಿದ್ದರಾಮಯ್ಯ ಅವರನ್ನು ಅವರ ಕುರ್ಚಿಯಿಂದ ಕೆಳಗಿಳಿಸಿ ಕರ್ನಾಟಕದ ಮುಖ್ಯಮಂತ್ರಿಯಾಗುವ ನಿಮ್ಮ ನಿರಂತರ ಪ್ರಯತ್ನಗಳಿಗೆ ನನ್ನ ಶುಭಾಶಯಗಳು’ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಹನಿಟ್ರ್ಯಾಪ್ ಪ್ರಕರಣ: ಯಾರೇ ಆಗಿದ್ದರೂ ಸುಮ್ಮನೆ ಬಿಡೋಲ್ಲ, ಮಟ್ಠಹಾಕುತ್ತೇವೆ, ಸಿಎಂ ಖಡಕ್ ವಾರ್ನಿಂಗ್!

Scroll to load tweet…
Scroll to load tweet…