ಮಣಿಪುರ ಹಿಂಸಾಚಾರ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಣಿಪುರದಲ್ಲಿ ಭಾರತದ ಕಲ್ಪನೆಯನ್ನು ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಕೊಲೆ ಮಾಡಿದೆ ಎಂದು ಶನಿವಾರ ಹೇಳಿದ್ದಾರೆ.
ವಯನಾಡ್: ಮಣಿಪುರ ಹಿಂಸಾಚಾರ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಣಿಪುರದಲ್ಲಿ ಭಾರತದ ಕಲ್ಪನೆಯನ್ನು ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಕೊಲೆ ಮಾಡಿದೆ ಎಂದು ಶನಿವಾರ ಹೇಳಿದ್ದಾರೆ.
ಸಂಸದ ಸ್ಥಾನ ಮರಳಿ ದೊರೆತ ಬಳಿಕ ಮೊದಲ ಬಾರಿ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ ರಾಹುಲ್ (Rahul Gandhi) ಅವರಿಗೆ ಭರ್ಜರಿ ಸ್ವಾಗತ ಕೋರಿದ ಸ್ಥಳೀಯ ಆಡಳಿತ ಕಲ್ಪೆಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ಅವರು (ಮೋದಿ) 2 ಗಂಟೆ 13 ನಿಮಿಷಗಳ ಕಾಲ ಭಾಷಣ ಮಾಡಿದರು. ಅವರು ನಕ್ಕರು, ಜೋಕ್ ಮಾಡಿದರು, ಮತ್ತೆ ನಕ್ಕರು. ಅವರ ಮಂತ್ರಿಮಂಡಲವೂ ಇದೇ ಮಾಡಿತು. ಅವರು ಸಾಕಷ್ಟು ಮನರಂಜನೆಯನ್ನು ಅನುಭವಿಸಿದರು. ಕಾಂಗ್ರೆಸ್ ಬಗ್ಗೆ, ನನ್ನ ಬಗ್ಗೆ, ಹೊಸ ಮೈತ್ರಿಕೂಟದ ಬಗ್ಗೆ ಸಾಕಷ್ಟು ಮಾತನಾಡಿದರು. ಆದರೆ ಮಣಿಪುರದ (Manipur) ಬಗ್ಗೆ 2 ನಿಮಿಷ ಮಾತನಾಡಿದರು. ಈ ಮೂಲಕ ಭಾರತದ ಕಲ್ಪನೆಯ ಕಗ್ಗೊಲೆ ಮಾಡಿದರು’ಎಂದು ಹೇಳಿದ್ದಾರೆ.
ತೋಡಾ ಸಮುದಾಯದ ಜತೆ ಸಂವಾದ:
ಇದೇ ವೇಳೆ ರಾಹುಲ್ ಗಾಂಧಿ ಅವರು ತಮಿಳುನಾಡಿದ ತೋಡಾ ಸಮುದಾಯವನ್ನು (toda comunity) ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಅವರೊಂದಿಗೆ ನೃತ್ಯ ಮಾಡಿ ಅವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
