ಚೀನಾ ಆ್ಯಪ್‌ ಆಯ್ತು, ಈಗ ಚೀನೀ ಭಾಷೆಗೂ ಕೇಂದ್ರ ಕೊಕ್‌

ಗಲ್ವಾನ್‌ ಗಡಿ ಕ್ಯಾತೆ ಬೆನ್ನಲ್ಲೇ ಚೀನೀ ಆ್ಯಪ್‌, ಚೀನಾ ಟೀವಿ ಆಮದು, ಚೀನಾ ಕಂಪನಿಗಳಿಗೆ ಭಾರತೀಯ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿಷೇಧ ಹೇರಿದ ಭಾರತ ಸರ್ಕಾರ, ಇದೀಗ ಚೀನಾಕ್ಕೆ ಇನ್ನೊಂದು ಶಾಕ್‌ ನೀಡಿದೆ.

mandarin dropped from language list in national education policy 2020

ನವದೆಲಿ(ಆ.02): ಗಲ್ವಾನ್‌ ಗಡಿ ಕ್ಯಾತೆ ಬೆನ್ನಲ್ಲೇ ಚೀನೀ ಆ್ಯಪ್‌, ಚೀನಾ ಟೀವಿ ಆಮದು, ಚೀನಾ ಕಂಪನಿಗಳಿಗೆ ಭಾರತೀಯ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿಷೇಧ ಹೇರಿದ ಭಾರತ ಸರ್ಕಾರ, ಇದೀಗ ಚೀನಾಕ್ಕೆ ಇನ್ನೊಂದು ಶಾಕ್‌ ನೀಡಿದೆ.

ಕಳೆದ ಬುಧವಾರವಷ್ಟೇ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಪಡೆಯಲ್ಪಟ್ಟನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ವಿದೇಶಿ ಭಾಷೆಗಳ ಕಲಿಕೆ ವಿಭಾಗದಿಂದ ಚೀನಾದ ಮ್ಯಾಂಡರಿನ್‌ ಭಾಷೆಯನ್ನು ಕೈಬಿಡಲಾಗಿದೆ.

TikTok ಖರೀದಿಗೆ ಮೈಕ್ರೋಸಾಫ್ಟ್‌ ಯತ್ನ, ಬ್ಯಾನ್‌ ಮಾಡ್ತೀನಿ, ಖರೀದಿಗೆ ಬಿಡಲ್ಲ ಎಂದ ಟ್ರಂಪ್‌

2019ರಲ್ಲಿ ಬಿಡುಗಡೆ ಮಾಡಲಾಗಿದ್ದ ಶಿಕ್ಷಣ ನೀತಿಯ ಕರಡಿನಲ್ಲಿ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ಫ್ರೆಂಚ್‌, ಜರ್ಮನ್‌, ಸ್ಪಾ್ಯನಿಷ್‌, ಚೀನೀ ಹಾಗೂ ಜಪಾನ್‌ ಭಾಷೆಗಳ ಕಲಿಕೆಗೆ ಅವಕಾಶವಿತ್ತು. ಆದರೆ, ಇದೀಗ ನೂತನ ಶಿಕ್ಷಣ ನೀತಿಯಲ್ಲಿ ವಿದೇಶಿ ಭಾಷೆಗಳ ಪಟ್ಟಿಯಲ್ಲಿ ಮ್ಯಾಂಡರಿನ್‌ ಕೈಬಿಡಲಾಗಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಚೀನಾ ಭಾಷೆ ಕಲಿಕೆ ನಿಧಾನವಾಗಿ ಜನಪ್ರಿಯವಾಗುತ್ತಿತ್ತು. ಅಷ್ಟರಲ್ಲೇ ಕೇಂದ್ರ ಸರ್ಕಾರ ಮ್ಯಾಂಡರಿನ್‌ ಅನ್ನು ವಿದ್ಯಾರ್ಥಿಗಳ ಕಲಿಕಾಪಟ್ಟಿಯಿಂದ ಹೊರಗಿಡುವ ಮೂಲಕ ನೆರೆ ದೇಶಕ್ಕೆ ಸಾಂಸ್ಕೃತಿಕವಾಗಿ ಪೆಟ್ಟು ನೀಡಿದೆ.

Latest Videos
Follow Us:
Download App:
  • android
  • ios