ನವದೆಹಲಿ(ಡಿ.03): ಪ್ರಧಾನಿ ಮೋದಿ ಭೇಟಿ ಮಾಡಿಸುವಂತೆ ಒತ್ತಾಯಿಸಿ ವ್ಯಕ್ತಿಯೋರ್ವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರು ಅಡ್ಡಗಟ್ಟಿದ ಘಟನೆ ನಡೆದಿದೆ.

ಅಧಿವೇಶನದಲ್ಲಿ ಭಾಗವಹಿಸಲು ರಾಜನಾಥ್ ಸಿಂಗ್ ಸಂಸತ್ತಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಕಾರಿಗೆ ಅಡ್ಡ ಬಂದ ವ್ಯಕ್ತಿ, ತಾನು ಮೋದಿ ಅವರ ಅಭಿಮಾನಿಯಾಗಿದ್ದು ಅವರನ್ನು ಭೇಟಿ ಮಾಡಿಸುವಂತೆ ಮನವಿ ಮಾಡಿದ್ದಾನೆ.

ರಾಜನಾಥ್ ಕಾರಿಗೆ ಏಕಾಏಕಿ ವ್ಯಕ್ತಿ ಅಡ್ಡಬಂದ  ಕಾರಣ ಗಾಬರಿಗೊಂಡ ಭದ್ರತಾ ಸಿಬ್ಬಂದಿ, ಕೂಡಲೇ ಕಾರಿನಿಂದ ಕೆಳಗಿಳಿದು ಆತನನ್ನು ವಶಕ್ಕೆ ಪಡೆದಿದ್ದಾರೆ.

ರಫೆಲ್‌ಗೆ ಆಯುಧ ಪೂಜೆ: ಪಾಕ್ ಇಡಂಗಿಲ್ಲ ಇನ್ಮೇಲೆ ಕಳ್ಳ ಹೆಜ್ಜೆ!

ರಾಜನಾಥ್ ಸಿಂಗ್ ಕಾರಿಗೆ ಅಡ್ಡಬಂದ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ