12 ವರ್ಷ ಬಳಿಕ ಪತ್ನಿಯನ್ನು ಬಾಯ್‌ಫ್ರೆಂಡ್‌ಗೆ ಮದುವೆ ಮಾಡಿಸಿದ ಗಂಡ, ಕಾರಣ ಅಫೇರ್ ಅಲ್ಲ!
12 ವರ್ಷ ಸಂಸಾರ ನಡೆಸಿದ್ದಾನೆ. 3 ಮಕ್ಕಳ ಇವೆ. ಆದರೆ 12 ವರ್ಷದ ಬಳಿಕ ಪತ್ನಿಯನ್ನು ಆಕೆಯ ಬಾಯ್‌ಫ್ರೆಂಡ್‌ಗೆ ಮದುವೆ ಮಾಡಿಸಿದ ವಿಚಿತ್ರ ಘಟನೆ ನಡೆದಿದೆ. ಇದಕ್ಕೆ ಲವ್ ಅಫೇರ್ ಮಾತ್ರ ಕಾರಣವಲ್ಲ.
ಬಿಹಾರ(ಡಿ.20) ಒಬ್ಬನ ಜೊತೆ ಪ್ರೀತಿ, ಮತ್ತೊಬ್ಬನ ಜೊತೆ ಮದುವೆ. ಕೆಲವೆ ದಿನಗಳಲ್ಲಿ ಗಂಡನಿಗೆ ಗೊತ್ತಾಗಿ ಪತ್ನಿಯನ್ನೇ ಪ್ರೀತಿಸಿದವನ ಕೈಗೆ ನೀಡಿ ಮದುವೆ ಮಾಡಿದ ಹಲವು ಘಟನೆಗಳು ಇವೆ. ಆದರೆ ಇದು ಈ ಪ್ರಕರಣಳಿಂದ ಭಿನ್ನ ಹಾಗೂ ವಿಚಿತ್ರ. ಕಾರಣ ಈತ ಪತ್ನಿ ಜೊತೆ 12 ವರ್ಷ ಸಂಸಾರ ಮಾಡಿದ್ದಾನೆ. ಇವರಿಗೆ ಮೂವರು ಮಕ್ಕಳು ಇದ್ದಾರೆ. ಆದರೆ 12 ವರ್ಷದ ಬಳಿಕ ಹಳೇ ಬಾಯ್‌ಫ್ರೆಂಡ್‌ಗೆ ಪತ್ನಿಯನ್ನು ಮದುವೆ ಮಾಡಿಸಿದ ಘಟನೆ ಬಿಹಾರದ ಸಹಸ್ರದಲ್ಲಿ ನಡೆದಿದೆ. 12 ವರ್ಷ ಹುಟ್ಟಿಕೊಂಡ ಲವ್ ಇದಲ್ಲ, ಮದುವೆಗೂ ಮೊದಲೇ ಇದ್ದ ಲವ್. ಆದರೆ ಪತಿ ತನ್ನ ಪತ್ನಿಯ ಲವ್ ಅಫೇರ್‌ನಿಂದ ಬಾಯ್‌ಫ್ರೆಂಡ್ ಜೊತೆ ಮದುವೆ ಮಾಡಿಸಿಲ್ಲ. ಇದರ ಕಾರಣ ಈ ಘಟನೆಯ ಟ್ವಿಸ್ಟ್.
ಸಹಸ್ರದ ಅನಿಲ್ ಅನ್ನೋ ವ್ಯಕ್ತಿ 12 ವರ್ಷಗಳ ಹಿಂದೆ ಜ್ಯೋತಿ ರಾಣಿ ಮದುವೆಯಾಗಿದ್ದಾನೆ. ಕಳೆದ 12 ವರ್ಷಗಳಿಂದ ಸಂಸಾರ ನಡೆಸಿದ್ದಾನೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಶಾಲೆಗೆ ಹೋಗುತ್ತಿದ್ದಾರೆ. ಇವರ ಸಂಸಾರ ಹೆಚ್ಚಿನ ಸಮಸ್ಯೆಗಳಿಲ್ಲ, ಸರಳ ಹಾಗೂ ಚೊಕ್ಕವಾಗಿ ಸಾಗುತ್ತಿತ್ತು. ಪತ್ನಿ ಗೃಹಿಣಿಯಾಗಿದ್ದರೆ, ಪತಿ ಕೆಲಸಕ್ಕೆ ಹೋಗಿ ಪತ್ನಿ ಮಕ್ಕಳನ್ನು ಸಾಕಿ ಸಲಹಿದ್ದ.
ಹನಿಮೂನ್ ವಿಚಾರದಲ್ಲಿ ಮಗಳ ಗಂಡನ ಜೊತೆ ತಂದೆಯ ಗಲಾಟೆ, ಬಳಿಕ ನಡೆದಿದ್ದೇ ದುರಂತ!
12 ವರ್ಷದ ಬಳಿಕ ಅನಿಲ್‌ಗೆ ತನ್ನ ಪತ್ನಿ ಜ್ಯೋತಿ ರಾಣಿಗೆ ಲವ್ ಅಫೇರ್ ಇದೆ ಅನ್ನೋದು ಗೊತ್ತಾಗಿದೆ. ಇತ್ತೀಚೆಗೆ ಹುಟ್ಟಿಕೊಂಡ ಪ್ರೀತಿ ಇರಬಹುದು, ಬುದ್ದಿ ಹೇಳಿದರೆ ಎಲ್ಲವೂ ಸರಿಯಾಗುತ್ತದೆ ಎಂದು ಅನಿಲ್ ತಾಳ್ಮೆಯಿಂದ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಲು ತಯಾರಿ ಮಾಡಿದ್ದಾನೆ. ಆದರೆ ಅನಿಲ್‌ಗೆ ಅಚ್ಚರಿ ಕಾದಿತ್ತು. ಕಾರಣ ಈ ಪ್ರೀತಿ ಇತ್ತೀಚೆಗೆ ಹುಟ್ಟಿಕೊಂಡ ಪ್ರೀತಿಯಲ್ಲ. ಇದು ಮದುವೆಗೂ ಮುನ್ನ ಇದ್ದ ಪ್ರತಿ ಅನ್ನೋದು ಗೊತ್ತಾಗಿದೆ. ಆದರೂ ಅನಿಲ್, ಮಾಜಿ ಗೆಳೆಯ ಕೆಲ ವರ್ಷಗಳ ಬಳಿಕ ಸಂಪರ್ಕಕ್ಕೆ ಸಿಕ್ಕಿರುತ್ತಾನೆ. ಪರ್ವಾಗಿಲ್ಲ ಎಲ್ಲಾ ಮರೆತು ಮಕ್ಕಳಿಗಾಗಿ ಸಂಸಾರ ಮುಂದುವರಿಸೋಣ ಅನ್ನೋ ಅಭಿಪ್ರಾಯಕ್ಕೆ ಬಂದಿದ್ದಾನೆ.
ಇದರ ನಡುವೆ ಕಳೆದ 12 ವರ್ಷಗಳಿಂದಲೂ ಜ್ಯೋತಿ ರಾಣಿ ಹಾಗೂ ಆಕೆಯ ಗೆಳೆಯ ಬ್ರೇಜೇಶ್ ಕದ್ದು ಮುಚ್ಚಿ ಭೇಟಿಯಾಗುತ್ತಿದ್ದರು. ಇದು ಪತಿ ಅನಿಲ್‌ಗೆ ಗೊತ್ತೇ ಆಗಿರಲಿಲ್ಲ. ಅಫೇರ್ ವಿಚಾರ ಗೊತ್ತಾದ ಬಳಿಕ ಇತ್ತೀಚೆಗೆ ಈ ಜೋಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದ ಪತಿ ಅನಿಲ್ ಮುಂದೇನು ಅನ್ನೋ ಗೊಂದಲದಲ್ಲಿದ್ದಾಗ, ಬರಸಿಡಲು ಎರಗಿದೆ. ಕಾರಣ ಅನಿಲ್ ಹಾಗೂ ಜ್ಯೋತಿ ರಾಣಿ ದಂಪತಿಯ ಮೂವರು ಮಕ್ಕಳ ಪೈಕಿ ಇಬ್ಬರು ಮಕ್ಕಳ ತಂದೆ ಬ್ರಿಜೇಷ್ ಅನ್ನೋದು ಗೊತ್ತಾಗಿದೆ.
ಇಷ್ಟು ದಿನ ಪ್ರೀತಿಯಿಂದ ಸಾಕಿದ, ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳಲು ನಿರ್ಧರಿಸಿದ ಅನಿಲ್‌ಗೆ ಈ ವಿಚಾರ ಬರಸಿಡಿಲಿನಂತೆ ಬಡಿದಿದೆ. ಆದರೆ ರಂಪಾಟ ಮಾಡದ ಅನಿಲ್, ಇಬ್ಬರಿಗೂ ಮದುವೆ ಮಾಡಿಸಲು ಮುಂದಾಗಿದ್ದಾನೆ. ರೆಡ್ ಹ್ಯಾಂಡ್ ಆಗಿ ಸಿಕ್ಕ ಇಬ್ಬರನ್ನು ಹಿಡಿದು ಮದುವೆ ಮಾಡಿಸಿದ್ದಾನೆ. ಇಬ್ಬರು ತಮ್ಮ ಸಂಬಂಧ ಒಪ್ಪಿಕೊಂಡಿದ್ದಾರೆ. ಜೊತೆಗೆ ನಡೆದ ಘಟನೆಗಳನ್ನು ಬಾಯ್ಬಿಟ್ಟಿದ್ದಾರೆ. ಇಬ್ಬರಿಗೂ ಮದುವೆ ಮಾಡಿಸಿದ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ಪತಿ ಅನಿಲ್ ನಡುಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿರ್ಧಾರ ಸರಿಯಾಗಿದೆ ಎಂದಿದ್ದಾರೆ. ಇಲ್ಲಿಗೆ ಟ್ವಿಸ್ಟ್ ಮುಗಿದಿಲ್ಲ. 12 ವರ್ಷದ ಹಿಂದೆ ಅನಿಲ್ ಹಾಗೂ ಜ್ಯೋತಿ ರಾಣಿ ಪ್ರೀತಿಸಿ ಮದುವೆಯಾಗಿದ್ದರು.