ಕೋಲ್ಕತಾ(ಫೆ.03): ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೃತ್ಯ ಮಾಡಿದ್ದು, ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಅಲಿಪುರ ಜಿಲ್ಲೆಯ ಫಲಕತಾ ಎಂಬಲ್ಲಿ ಮಂಗಳವಾರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಿಎಂ ಬ್ಯಾನರ್ಜಿ ಭಾಗಿಯಾಗಿದ್ದರು. ಈ ವೇಳೆ ಬಂಗಾಳದ ಬುಡಕಟ್ಟು ವಾದ್ಯ ಡೊಳ್ಳು ಬಡಿತಕ್ಕೆ ಇತರ ನೃತ್ಯಗಾರರ ಜೊತೆ ದೀದಿ ನೃತ್ಯ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ ಅವರು ನೃತ್ಯ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಕಾರ್ಯಕ್ರಮಗಳಲ್ಲಿ ನೃತ್ಯ ಮಾಡಿದ್ದಷ್ಟೇ ಅಲ್ಲದೆ ಸಂಗೀತ ವಾದ್ಯಗಳನ್ನು ನುಡಿಸಿದ್ದರು.