ಯುದ್ಧಪೀಡಿತ ಇಸ್ರೇಲ್‌ನಲ್ಲಿ 15000 ಭಾರತೀಯರಿಗೆ ಮೋದಿಯಿಂದ ಕೆಲಸ: ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ
‘ಮೋದಿ ಸರ್ಕಾರದ ಕೌಶಲ್ಯಾಭಿವೃದ್ಧಿ ಯೋಜನೆಯು, ಯುದ್ಧ ಪೀಡಿತ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ 15 ಸಾವಿರ ಭಾರತೀಯ ಉದ್ಯೋಗಿಗಳ ನೇಮಕಾತಿಗೆ ಅನುಕೂಲ ಮಾಡುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ನವದೆಹಲಿ (ಅ.5): ‘ಮೋದಿ ಸರ್ಕಾರದ ಕೌಶಲ್ಯಾಭಿವೃದ್ಧಿ ಯೋಜನೆಯು, ಯುದ್ಧ ಪೀಡಿತ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ 15 ಸಾವಿರ ಭಾರತೀಯ ಉದ್ಯೋಗಿಗಳ ನೇಮಕಾತಿಗೆ ಅನುಕೂಲ ಮಾಡುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ ‘ಮೋದಿ ಸರ್ಕಾರದ ಯುವ ವಿರೋಧಿ ನೀತಿಯಿಂದ ಉಂಟಾದ ನಿರುದ್ಯೋಗವನ್ನು ಇದು ಹೇಳುತ್ತದೆ. ಕೌಶಲ್ಯವಿಲ್ಲದ, ಅರೆ ಕೌಶಲ್ಯವಿರುವ ವಿದ್ಯಾವಂತ ಯುವಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಯುದ್ಧ ಪೀಡಿತ ಸ್ಥಳಗಳಲ್ಲಿ ಹೆಚ್ಚಿನ ಸಂಬಳಕ್ಕೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಪಮಾನಕರ ಭಾಷಣ: ಚಕ್ರವರ್ತಿ ಸೂಲಿಬೆಲೆಗೆ ನಿರೀಕ್ಷಣಾ ಜಾಮೀನು ಮಂಜೂರು
ಮೋದಿ ಸರ್ಕಾರದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಯೋಜನೆಯು ಪಶ್ಚಿಮ ಏಷ್ಯಾದ ಯುದ್ಧದ ನಡುವೆ ಇಸ್ರೇಲ್‌ನಲ್ಲಿ 15 ಸಾವಿರ ಭಾರತೀಯ ಉದ್ಯೋಗಿಗಳ ನೇಮಕಾತಿಗೆ ಅನುಕೂಲ ಮಾಡಿಕೊಡುತ್ತಿದೆ. ಈ ಸಂಘರ್ಷದ ವಲಯಗಳಲ್ಲಿ ಕೆಲಸಕ್ಕೆ ಹೆಚ್ಚು ಬಲವಂತವಾಗಿರುವ ಹರ್ಯಾಣದ ಯುವಕರು ಮೋದಿಗೆ ಪಾಠ ಕಲಿಸುತ್ತಾರೆ’ ಎಂದು ಬರೆದುಕೊಂಡಿದ್ದಾರೆ.