Asianet Suvarna News Asianet Suvarna News

ಮಲಾಲಾ ಈ ದಶಕದ ವಿಶ್ವದ ಕಿರಿಯ ಜನಪ್ರಿಯ ಯುವತಿ!

ಮಲಾಲಾ ಈ ದಶಕದ ವಿಶ್ವದ ಕಿರಿಯ ಜನಪ್ರಿಯ ಯುವತಿ!| ಪಾಕಿಸ್ತಾನದ ಹೆಣ್ಣುಮಕ್ಕಳ ಶಿಕ್ಷಣದ ಪರ ಹೋರಾಟಗಾರ್ತಿ ಹಾಗೂ ನೊಬೆಲ್‌ ಪುರಸ್ಕೃತೆ ಮಲಾಲಾ ಯೂಸಫ್‌ಝೈ

Malala Yousafzai Is The Most Famous Teenager Of The Decade Says UN
Author
Bangalore, First Published Dec 27, 2019, 9:54 AM IST

ಇಸ್ಲಾಮಾಬಾದ್‌[ಡಿ.27]: ಪಾಕಿಸ್ತಾನದ ಹೆಣ್ಣುಮಕ್ಕಳ ಶಿಕ್ಷಣದ ಪರ ಹೋರಾಟಗಾರ್ತಿ ಹಾಗೂ ನೊಬೆಲ್‌ ಪುರಸ್ಕೃತೆ ಮಲಾಲಾ ಯೂಸಫ್‌ಝೈ ಅವರು ಈ ದಶಕದ ವಿಶ್ವದ ಅತೀ ಜನಪ್ರಿಯ ಯುವತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಕಳೆದೊಂದು ದಶಕದ ವಿಶ್ವಸಂಸ್ಥೆಯ ಪರಿಶೀಲನಾ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. 2014ರಲ್ಲಿ ನೊಬೆಲ್‌ ಪುರಸ್ಕಾರಕ್ಕೆ ಭಾಜನರಾದ ವಿಶ್ವದ ಅತೀ ಕಿರಿಯಳಾದ ಮಲಾಲಾ ಅವರು, ತಾಲಿಬಾನ್‌ ಉಗ್ರರಿಂದ ಗುಂಡಿನ ದಾಳಿಗೆ ಗುರಿಯಾಗುವ ಮುನ್ನ ಮಕ್ಕಳ ಹಕ್ಕುಗಳ ಪರ ಹೋರಾಟ ಆರಂಭಿಸಿದ್ದರು. ಆದರೆ, ಮಲಾಲಾ ಅವರ ಮೇಲಿನ ಉಗ್ರರ ದಾಳಿ ಸುದ್ದಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಅಲೆಯೇ ಸೃಷ್ಟಿಸಿ, ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆಯಾಯಿತು. ಹೆಣ್ಣುಮಕ್ಕಳ ಶಿಕ್ಷಣದ ಉತ್ತೇಜನಕ್ಕಾಗಿ ಪ್ಯಾರಿಸ್‌ನಲ್ಲಿ ನಡೆದ ಯುನೆಸ್ಕೋದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆಯಂದು ಮಲಾಲಾ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿತ್ತು ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.

ಕಳೆದೊಂದು ದಶಕದ ಕುರಿತಾದ ವಿಶ್ವಸಂಸ್ಥೆಯ ಈ ಪರಿಶೀಲನಾ ವರದಿಯಲ್ಲಿ 2010ರ ಹೈಟಿ ಭೂಕಂಪ, 2011ರ ಸಿರಿಯಾ ಉದ್ವಿಗ್ನತೆ, 2012ರ ಪಾಕಿಸ್ತಾನದ ಮಹಿಳಾ ಶಿಕ್ಷಣದ ಪರ ಧ್ವನಿಯೆತ್ತಿದ ಮಲಾಲಾ ಅವರ ಘಟನಾವಳಿಗಳನ್ನು ಒಳಗೊಂಡಿದೆ.

Follow Us:
Download App:
  • android
  • ios