Asianet Suvarna News Asianet Suvarna News

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಒಂದು ಪಾತ್ರೆ ತುಂಬಲು 3 ತಾಸು, ವೈರಲ್ ಆಯ್ತು ನೀರಿನ ಸಂಕಷ್ಟದ ಈ ಫೋಟೋ!

* ಮಹಾರಾಷ್ಟ್ರದ ನಾಸಿಕ್‌ನಲ್ಲಿ ನೀತರಿನ ಸಮಸ್ಯೆ

* 50 ವರ್ಷಗಳಿಂದ ನೀರಿಗಾಗಿ ಹಾತೊರೆಯುತ್ತಿದ್ದಾರೆ ಜನ

* ಬಿರು ಬಿಸಿಲಿಗೆ 50 ಮೈಲಿ ದೂರದಿಂದ ನೀರು ತರಬೇಕು

Maharashtra People of Hiripada Village in Nashik face acute water shortage pod
Author
Bangalore, First Published May 28, 2022, 12:05 PM IST

ನಾಸಿಕ್(ಮೇ.28): ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತಿರಾದಶೆಟ್ ಗ್ರಾಮದ ಜನರು 50 ವರ್ಷಗಳಿಂದ ನೀರಿಗಾಗಿ ಹಾತೊರೆಯುತ್ತಿದ್ದಾರೆ. ಬಿಸಿಲಿನ ಬೇಗೆಯಲ್ಲಿ ಮಹಿಳೆಯರು ಮೈಲುಗಟ್ಟಲೆ ನಡೆದು ನೀರು ತರಬೇಕಾಗಿದೆ. ಕೊನೆಗೆ ಮಹಿಳೆಯರ ಕೋಪ ತಾರಕಕ್ಕೇರಿ ರಸ್ತೆಯಲ್ಲೇ ಧರಣಿ ಕುಳಿತಿದ್ದಾರೆ. ಈ ಅಭಿಯಾನದ ಹಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕರು ವಾಸಿಸುತ್ತಿದ್ದಾರೆ. ಕೋಪವನ್ನು ವ್ಯಕ್ತಪಡಿಸಿದ ಮಹಿಳೆಯೊಬ್ಬರು ಸುದ್ದಿ ಸಂಸ್ಥೆ ANI ಜೊತೆ ಮಾತನಾಡುತ್ತಾ- "ನಾವು ಕೆಲಸಕ್ಕೆ ಹೋಗುವ ಬದಲು ನೀರಿಗಾಗಿ ಹರಸಾಹಸ ಮಾಡಬೇಕಾಗಿದೆ." ಎಂದಿದ್ದಾರೆ.

ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್

ಮಹಿಳೆಯರ ಪ್ರತಿಭಟನೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ, ನಾಸಿಕ್ ಡಿಎಂ ಗಂಗಾಧರನ್ ಡಿ (ಗಂಗಾಧರನ್ ಡಿ, ಡಿಎಂ, ನಾಸಿಕ್) ಅವರು, "ನಾವು ಜಲ ಜೀವನ್ ಮಿಷನ್ ಅಡಿಯಲ್ಲಿ ಜಿಲ್ಲೆಯಲ್ಲಿ ನೀರಿನ ಕೊರತೆಯಿರುವ ಹಳ್ಳಿಗಳನ್ನು ಗುರುತಿಸುತ್ತಿದ್ದೇವೆ. ನೀರು ಪೂರೈಕೆಗೆ ಸಂಬಂಧಿಸಿದ ಕೆಲಸ ನಡೆಯುತ್ತಿದೆ. ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಇದು ಶೀಘ್ರವಾಗಿ ಪೂರ್ಣಗೊಳ್ಳಲಿದೆ. ಇದೀಗ ನಾವು ಗ್ರಾಮಸ್ಥರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ.

ಇಲ್ಲಿನ ಹಳ್ಳಿಗಳಲ್ಲಿ ಯಾರೂ ತಮ್ಮ ಮನೆ ಮಗಳನ್ನು ಕೊಡಲು ಬಯಸುವುದಿಲ್ಲ.

ನಾಸಿಕ್‌ನ ಹಲವು ಗ್ರಾಮಗಳು ನೀರಿನ ಕೊರತೆ ಎದುರಿಸುತ್ತಿವೆ. ಬೇಸಿಗೆಯಲ್ಲಿ ಇಲ್ಲಿನ ಪರಿಸ್ಥಿತಿಗಳು ತುಂಬಾ ಕಷ್ಟಕರವಾಗಿರುತ್ತದೆ. ಮೇ ಆರಂಭದಲ್ಲಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ನಾಸಿಕ್ ಜಿಲ್ಲೆಯ ದಾಂಡಿಚಿ ಬರಿ ಗ್ರಾಮದಲ್ಲಿ ತೀವ್ರ ನೀರಿನ ಕೊರತೆಯಿಂದ ಬಳಲುತ್ತಿರುವ ಜನರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿತ್ತು. ನವ ವಧುಗಳು ಗಾಬರಿಗೊಂಡು ತಮ್ಮ ತಾಯಿಯ ಮನೆಗೆ ಮರಳುವ ಪರಿಸ್ಥಿತಿ ಈ ಗ್ರಾಮಗಳಲ್ಲಿದೆ. ಈ ಗ್ರಾಮದಲ್ಲಿ ಹಲವು ಕುಟುಂಬಗಳು ತಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ನಿರಾಕರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ದಂಡಿಚಿ ಬ್ಯಾರಿ ಗ್ರಾಮದ ಮಹಿಳೆಯರು ಮಾರ್ಚ್‌ನಿಂದ ಜೂನ್‌ವರೆಗೆ ಒಂದೂವರೆ ಕಿಲೋಮೀಟರ್‌ಗಳಷ್ಟು ದೂರದಿಂದ ಬೆಟ್ಟದ ಬುಡಕ್ಕೆ ಹೋಗಿ ನೀರು ತರಬೇಕಾಗಿತ್ತು ಎಂದು ಎನ್‌ಎಚ್‌ಆರ್‌ಸಿ ಇತ್ತೀಚೆಗೆ ಹೇಳಿಕೆಯಲ್ಲಿ ತಿಳಿಸಿತ್ತು. ಮೇ 2 ರಂದು, NHRC ಮಾಧ್ಯಮ ವರದಿಯನ್ನು ಉಲ್ಲೇಖಿಸಿ, ಮಹಿಳೆಯರು ತಮ್ಮ ಕೊಡವನ್ನು ತುಂಬಲು ಮೂರು ಗಂಟೆಗಳವರೆಗೆ ಕಾಯಬೇಕು. ಬೆಳಗಿನ ಜಾವ 4ರಿಂದಲೇ ಅನೇಕ ಮಹಿಳೆಯರು ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ ಎಂದಿದ್ದಾರೆ.

ದೊಡ್ಡ ಅಣೆಕಟ್ಟುಗಳ ನೀರಿನ ಮಟ್ಟವೂ ಕಡಿಮೆಯಾಗುತ್ತಿದೆ

ಕೇಂದ್ರ ಜಲ ಆಯೋಗ ಇತ್ತೀಚೆಗೆ ವರದಿ ಬಿಡುಗಡೆ ಮಾಡಿದೆ. ಇದರ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ದೇಶದ 60 ದೊಡ್ಡ ಅಣೆಕಟ್ಟುಗಳ ನೀರಿನ ಮಟ್ಟ ಕಡಿಮೆಯಾಗಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಅತ್ಯಂತ ಚಿಂತಾಜನಕ ಪರಿಸ್ಥಿತಿ ಇದೆ. ಇಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬೇಸಿಗೆಯಲ್ಲಿ ಶೇ.3ರಷ್ಟು ನೀರಿನ ಪ್ರಮಾಣ ಕಡಿಮೆಯಾಗಿದೆ. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಮತ್ತು ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಕೊಳಗಳ ಬಗ್ಗೆ ವರದಿ ನೀಡಿತ್ತು. ಇದರ ಪ್ರಕಾರ, ಬಂಗಾಳ, ಯುಪಿ, ಬಿಹಾರ, ಉತ್ತರಾಖಂಡ ಮತ್ತು ಜಾರ್ಖಂಡ್‌ನಲ್ಲಿ ಸುಮಾರು 38% ಜಲಾಶಯಗಳು ಬತ್ತಿ ಹೋಗಿವೆ. ಉತ್ತರಾಖಂಡದಲ್ಲಿ 84%, ಯುಪಿಯಲ್ಲಿ 41%, ಬಿಹಾರದಲ್ಲಿ 35%, ಬಂಗಾಳದಲ್ಲಿ 17% ಮತ್ತು ಜಾರ್ಖಂಡ್‌ನಲ್ಲಿ 16% ಸಹ ಬೇಸಿಗೆಯಲ್ಲಿ ಒಣಗಿವೆ.
 

Follow Us:
Download App:
  • android
  • ios