ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪೂರ್ವ ಪೀಠಿಕೆ ಪಠಣ ಕಡ್ಡಾಯ|ಬೆಳಗಿನ ಪ್ರಾರ್ಥನೆ ಜೊತೆಗೆ ಪೂರ್ವ ಪೀಠಿಕೆ ಪಠಣ| ಜ.26ರಂದು ಗಣರಾಜ್ಯೋತ್ಸವ ದಿನಚಾರಣೆ ವೇಳೆ ಹೊಸ ಆದೇಶ ಜಾರಿ| ಮಹಾರಾಷ್ಟ್ರ ಸರ್ಕಾರದಿಂದ ಪೂರ್ವ ಪೀಠಿಕೆ ಪಠಣ ಕಡ್ಡಾಯ ಆದೇಶ| ಮಕ್ಕಳಲ್ಲಿ ಸಂವಿಧಾನದ ಮಹತ್ವ ದ ಅರಿವು ಮೂಡಿಸುವ ಉದ್ದೇಶ ಎಂದ ಸಚಿವೆ ವರ್ಷಾ ಗಾಯಕ್‌ವಾಡ್| 

ಮುಂಬೈ(ಜ.22): ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇನ್ನು ಮುಂದೆ ಬೆಳಗ್ಗೆಯ ಪ್ರಾರ್ಥನೆ ವೇಳೆ, ಸಂವಿಧಾನದ ಪೂರ್ವ ಪೀಠಿಕೆ ಹೇಳುವುದು ಕಡ್ಡಾಯ ಎಂದು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.

ಇದೇ ಜ.26ರಂದು ಗಣರಾಜ್ಯೋತ್ಸವ ದಿನಚಾರಣೆ ದಿನದಂದು ಈ ಹೊಸ ಆದೇಶ ಜಾರಿಗೆ ಬರಲಿದೆ ಎಂದು ಸಚಿವೆ ವರ್ಷಾ ಗಾಯಕ್‌ವಾಡ್ ಸ್ಪಷ್ಟಪಡಿಸಿದ್ದಾರೆ.

Scroll to load tweet…

ಮಕ್ಕಳಲ್ಲಿ ಸಂವಿಧಾನದ ಮಹತ್ವ ಹಾಗೂ ಅದರ ಗುಣ ವಿಶೇಷತೆಗಳ ಕುರಿತು ಜಾಗೃತಿ ಮೂಡಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ವರ್ಷಾ ಗಾಯಕ್‌ವಾಡ್ ಹೇಳಿದ್ದಾರೆ.

ಇವರಲ್ವೇ ಹಿರಿಯರು: ಬಿಡಿಗಾಸೂ ಪಡೆಯದೆ ಇಡೀ ಸಂವಿಧಾನ ಕೈಯ್ಯಲ್ಲೇ ಬರೆದರು!

ಬೆಳಗಿನ ಪ್ರಾರ್ಥನೆ ಜೊತೆಗೆ ಸಂವಿಧಾನದ ಪೂರ್ವ ಪೀಠಿಕೆ ಹೇಳುವುದು ಇನ್ನು ಮುಂದೆ ಎಲ್ಲಾ ಶಾಲೆಗಳಲ್ಲಿ ಕಡ್ಡಾಯ ಎಂದು ವರ್ಷಾ ಗಾಯಕ್‌ವಾಡ್ ಸುದ್ದಿಗಾರರಿಗೆ ತಿಳಿಸಿದರು.

Scroll to load tweet…

2013ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಈ ಕುರಿತು ಆದೇಶ ಹೊರಡಿಸಿತ್ತಾದರೂ, ಅದನ್ನು ಸಂಪೂರ್ಣವಾಗಿ ಜಾರಿಗೆ ತರಲಾಗಿರಲಿಲ್ಲ. ನಂತರ ಸರ್ಕಾರ ಬದಲಾಗಿ ಈ ನಿರ್ಣಯ ನೇಪಥ್ಯಕ್ಕೆ ಸರಿದಿತ್ತು.