ಮನೆಗೆ ನೀರು ತರಲು ತನ್ನ ತಾಯಿ ನಿತ್ಯವೂ ಬಹಳ ದೂರ ಸಾಗಬೇಕಾದ ಅನಿವಾರ್ಯತೆ ನೋಡಿ ಬೇಸರಗೊಂಡಿದ್ದ 9ನೇ ತರಗತಿ ಬಾಲಕ, ತಾಯಿಗೆ ನೆರವಾಗಲು ತನ್ನ ಮನೆಯ ಬಳಿಯೇ ಬಾವಿಯೊಂದನ್ನು ಅಗೆದಿರುವ ಅಪರೂಪದ ಘಟನೆ Maharashtraದ Palgharನಲ್ಲಿ ನಡೆದಿದೆ.
ಪಾಲ್ಘರ್: ಮನೆಗೆ ನೀರು ತರಲು ತನ್ನ ತಾಯಿ ನಿತ್ಯವೂ ಬಹಳ ದೂರ ಸಾಗಬೇಕಾದ ಅನಿವಾರ್ಯತೆ ನೋಡಿ ಬೇಸರಗೊಂಡಿದ್ದ 9ನೇ ತರಗತಿ ಬಾಲಕ, ತಾಯಿಗೆ ನೆರವಾಗಲು ತನ್ನ ಮನೆಯ ಬಳಿಯೇ ಬಾವಿಯೊಂದನ್ನು ಅಗೆದಿರುವ ಅಪರೂಪದ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಿದೆ.
ಧಾಂವಗೆ ಪದ ಎಂಬ ಬುಡಕಟ್ಟು ಹಳ್ಳಿಯ ಪ್ರಣವ್ ಸಾಲ್ಕರ್ (Pranav salkara) ಎಂಬ 14 ವರ್ಷದ ಹುಡುಗ 12 ರಿಂದ 15 ಅಡಿ ಆಳದವರೆಗೆ ನೀರು ಸಿಗುವವರೆಗೂ ಬಾವಿ ತೋಡಿದ್ದಾನೆ. ಬಾವಿಯ ನೀರನ್ನು ಮನೆಗೆಲಸಕ್ಕೀಗ ಬಾಲಕನ ತಾಯಿ ಬಳಸಿಕೊಳ್ಳುತ್ತಿದ್ದಾರೆ. ತಾಯಿ ಕೂಲಿ ಕೆಲಸ ಮಾಡಿ ಸುಸ್ತಾಗಿ ಬಂದರೂ ನೀರಿಗಾಗಿ ಸುಮಾರು ಅರ್ಧ ಕಿ.ಮೀ ನಡೆದು ಹೋಗಬೇಕಿತ್ತು. ಇದು ಪ್ರಣವ್‌ನ ಈ ನಿರ್ಧಾರಕ್ಕೆ ಕಾರಣವಾಗಿದೆ. ಸದ್ಯ ಈ ಊರಿನಲ್ಲಿ ನಿರು ಸರಬರಾಜು ಇದೆಯಾದರೂ ವಾರದಲ್ಲಿ 3 ದಿನ ಮಾತ್ರ ನಲ್ಲಿಯಲ್ಲಿ ನೀರು ಬರುತ್ತದೆ.
Chikkamagaluru: ಕುಡಿಯುವ ನೀರಿಗಾಗಿ 55 ಅಡಿ ಬಾವಿ ತೆಗೆದ ವೃದ್ಧ ದಂಪತಿ
ಇನ್ನು ಬಾಲಕ ಪ್ರಣವ್‌ಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು ಅಂಧ ಪೋಷಕರನ್ನು ಹೆಗಲ ಮೇಲೆ ಹೊತ್ತು ನಡೆದ ರಾಮಾಯಣದ ಶ್ರವಣಕುಮಾರನನ್ನು ಉಲ್ಲೇಖಿಸಿ ಆತನನ್ನು ಆಧುನಿಕ ‘ಶ್ರವಣ್‌ಬಲ್’ ಎಂದು ಜನರು ಕೊಂಡಾಡಿದ್ದಾರೆ. ಇನ್ನು ಪ್ರಣವ್‌ನ ಮಾದರಿ ಕೆಲಸವನ್ನು ಮೆಚ್ಚಿದ ಜಿಲ್ಲಾ ಪರಿಷದ್ ಪದಾಧಿಕಾರಿಗಳು ಗುರುವಾರ ಬಾಲಕನ ಸನ್ಮಾನಿಸಿ 11,000 ರು. ಬಹುಮಾನ ನೀಡಿದ್ದಾರೆ. ಅಲ್ಲದೇ 2024ರ ವೇಳೆಗೆ ಜಿಲ್ಲೆಯ ಪ್ರತಿ ಕುಟುಂಬಕ್ಕೂ ಮನೆಗೇ ನೀರು ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.