ನವದೆಹಲಿ(ಜ.20): ಇನ್ಮುಂದೆ ಮದುವೆ ಸಮಾರಂಭದಲ್ಲಿ ವಧು ವರರಿಗೆ ಗಿಫ್ಟ್ ಅಥವಾ ನಗದು ಹಣ ನಿಡಬೇಕೆಂದಿಲ್ಲ. ಯಾಕೆಂದರೆ ಇನ್ನು ನೀವು ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಅವರ ಖಾತೆಗೆ ನೇರವಾಗಿ ಹಣ ಜಮಾವಣೆ ಮಾಡಬಹುದು. ಇಂತಹುದೇ ಘಟನೆಯೊಂದು ಮಧುರೈನಲ್ಲಿ ನಡೆದಿದೆ. ಇಲ್ಲೊಮದು ಕುಟುಂಬ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಗೂಗಲ್ ಹಾಗೂ ಫೋನ್ ಪೇಯ ಕ್ಯೂ ಆರ್‌ ಕೋಡ್ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಕೊರೋನಾದಿಂದಾಗಿ ಈ ಕುಟುಂಬದ ಅನೇಕ ಮಂದಿಗೆ ಮದುವೆಯಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ಹೀಗಾಗಿ ಅವರು ಗಿಫ್ಟ್ ಪಡೆಯಲು ಸುಲಭವಾದ ಹಾದಿ ಕಂಡುಕೊಂಡಿದ್ದಾರೆ.

ಈ ಮದುವೆ ಕಾರ್ಯಕ್ರಮ ಭಾನುವಾರ ನಡೆದಿದೆ. ಇನ್ನು ವಧುವಿನ ತಾಯಿ ಈ ಕುರಿತು ಮಾತನಾಡುತ್ತಾ 'ಈ ಕ್ಯೂ ಆರ್‌ ಕೋಡ್‌ಗೆ ಸಂಬಂಧಿಸಿದಂತೆ ನನಗೆ ಈವರೆಗೂ ಅನೇಕ ಮಂದಿ ಕರೆ ಮಾಡಿದ್ದಾರೆ' ಎಂದಿದ್ದಾರೆ. ಅಲ್ಲದೇ ಮದುವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದವರಿಗೆ ಹಾಗೂ ಪಾಲ್ಗೊಮಡರೂ ಕೊರೋನಾದಿಂದಾಗಿ ಗಿಫ್ಟ್‌ ಪಡೆಯುವುದು ಸೂಕ್ತವಲ್ಲದ ಹಿನ್ನೆಲೆ ಇಂತಹುದ್ದೊಂದು ಉಪಾಯ ಕಂಡುಕೊಂಡಿದ್ದೇವೆ ಎಂದೂ ತಿಳಿಸಿದ್ದಾರೆ.

ಇನ್ನು ಸುಮಾರು ಮೂವತ್ತು ಮಂದಿ ಇದನ್ನು ಉಪಯೋಗಿಸಿದ್ದು, ವಧುವಿನ ಅಕೌಂಟ್‌ಗೆ ಗಿಫ್ಟ್‌ ರೂಪದಲ್ಲಿ ಹಣ ಹಾಕಿದ್ದಾರೆ. ನಮ್ಮ ಕುಟುಂಬದಲ್ಲಿ ಇಂತಹುದ್ದೊಂದು ಪಗ್ರಯೋಗ ಮಾಡಿದ್ದು ಇದೇ ಮೊದಲು. ಇದರಿಂಣದ ಮದುವೆಯಲ್ಲಿ ಭಾಗಿಯಾಗಲು ಸಾಧ್ಯವಾಗದವರಿಗೂ ಗಿಫ್ಟ್ ಕೊಡಲು ಸಾಧ್ಯವಾಗಿದೆ ಎಂದುವುದು ವಧುವಿನ ತಾಯಿಯ ಮಾತಾಗಿದೆ.