ತಿರುವನಂತಪುರ[ಫೆ.22]: ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಕ್ರೈಸ್ತ ಬಿಷಪ್‌ ಫ್ರಾಂಕೋ ಮುಲಕ್ಕಲ್‌ ವಿರುದ್ಧ ಮತ್ತೊಂದು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.

ಈ ಪ್ರಕರಣದ ಸಾಕ್ಷಿಯಾಗಿರುವ ಮತ್ತೊಬ್ಬ ಕ್ರೈಸ್ತ ಸನ್ಯಾಸಿನಿಯೇ ಈಗ ಮುಲಕ್ಕಲ್‌ ವಿರುದ್ಧ ಕಾಮಚೇಷ್ಟೆಆರೋಪ ಹೊರಿಸಿದ್ದು, ಪೊಲೀಸರಿಗೆ ಅವರು ನೀಡಿದ ಹೇಳಿಕೆ ಬಹಿರಂಗವಾಗಿದೆ.

ರೇಪ್ ಆರೋಪಿ ಪಾದ್ರಿಗೆ ಹೈ ಕೋರ್ಟ್ ಜಾಮೀನು

‘2015ರಲ್ಲಿ ಬಿಹಾರದಲ್ಲಿ ಮೊದಲ ಬಾರಿಗೆ ನಾನು ಪಾದ್ರಿ ಫ್ರಾಂಕೋಯಿಸ್‌ ಮುಲಕ್ಕಲ್‌ರನ್ನು ಭೇಟಿ ಮಾಡಿದೆ. ಬಳಿಕ ಕಾನ್ವೆಂಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಫೋನ್‌ನಲ್ಲಿ ಮಾತನಾಡುತ್ತಿದ್ದೆ. ವಾಟ್ಸ್ಯಾಪ್‌ ಹಾಗೂ ವಿಡಿಯೋ ಕಾಲ್‌ ಮೂಲಕವೂ ಸಂಪರ್ಕದಲ್ಲಿದ್ದೆವು’ ಎಂದು ಹೇಳಿದ್ದಾರೆ.

‘ಆದರೆ 2015ರ ಅಂತ್ಯದಲ್ಲಿ ಮುಲಕ್ಕಲ್‌ ಅವರು ಲೈಂಗಿಕ ಸಂಭಾಷಣೆ ಆರಂಭಿಸಿದರು. ವಿಡಿಯೋ ಕಾಲ್‌ನಲ್ಲಿ ನನ್ನ ಅಂಗಾಂಗ ವರ್ಣಿಸುತ್ತಿದ್ದರು. ಸೆಕ್ಸ್‌ ಚಾಟ್‌ ಮಾಡುತ್ತಿದ್ದರು. ಒಮ್ಮೆ ಅಸಭ್ಯವಾಗಿ ನನ್ನನ್ನು ಮುಟ್ಟಿದರು. ಹಣೆಗೆ ಮುತ್ತಿಕ್ಕಿದರು’ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"