Asianet Suvarna News Asianet Suvarna News

ಲಿಕ್ಕರ್‌ಗೇಟ್‌ ಕೇಸ್‌ ಬಂಧನದಿಂದ ರಕ್ಷಣೆ ಕೋರಿ ಕೇಜ್ರಿವಾಲ್‌ ಅರ್ಜಿ, ನಿರಾಕರಿಸಿದ ದೆಹಲಿ ಹೈಕೋರ್ಟ್‌!

ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ಬಂಧನದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
 

liquor policy case Delhi High Court refuses protection from arrest to Arvind Kejriwal san
Author
First Published Mar 21, 2024, 4:21 PM IST

ನವದೆಹಲಿ (ಮಾ.21): ದೆಹಲಿಯ ಆಮ್‌ ಆದ್ಮಿ ಸರ್ಕಾರದ ಕುಖ್ಯಾತ ಲಿಕ್ಕರ್‌ಗೇಟ್‌ ಕೇಸ್‌ನಲ್ಲಿ ಬಂಧನದಿಂದ ವಿನಾಯಿತಿ ಕೋರಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿಗೆ ಹಿನ್ನಡೆಯಾಗಿದೆ. ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ಈ ಕೇಸ್‌ನಲ್ಲಿ ಬಂಧನದಿಂದ ವಿನಾಯಿತಿ ನೀಡಲು ನಿರಾಕರಿಸಿದೆ.  ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಸಮನ್ಸ್‌ಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬಲವಂತದ ಕ್ರಮದಿಂದ ಮಧ್ಯಂತರ ರಕ್ಷಣೆ ನೀಡಲು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ನಿರಾಕರಿಸಿದೆ. ಈ ಪ್ರಕರಣದಲ್ಲಿ ಈಗಾಗಲೇ ಜಾರಿ ನಿರ್ದೇಶನಾಲಯ 9 ಸಮನ್ಸ್‌ಅನ್ನು ಜಾರಿ ಮಾಡಿದ್ದು, ಈವರೆಗೂ ಕೇಜ್ರಿವಾಲ್‌ ವಿಚಾರಣೆಗೆ ಹಾಜರಾಗಿಲ್ಲ. ವಿಚಾರಣೆಯ ಈ ಹಂತದಲ್ಲಿ ನಾವು ಮಧ್ಯಂತರ ರಿಲೀಫ್‌ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ಹಾಗಿದ್ದರೂ ನ್ಯಾಯಾಲಯವು ಈ ಹೊಸ ಮಧ್ಯಂತರ ಮನವಿಯ ಕುರಿತು ಇಡಿಯಿಂದ ಪ್ರತಿಕ್ರಿಯೆಯನ್ನು ಕೋರಿದ್ದು, ಏಪ್ರಿಲ್ 22ಕ್ಕೆ ಮುಂದಿನ ವಿಚಾರಣೆ ಮಾಡುವುದಾಗಿ ತಿಳಿಸಿದೆ.

ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಬೆಳಗ್ಗೆ ಈ ಕುರಿತಾದ ಹೊಸ ಮನವಿಯನ್ನು ಸಲ್ಲಿಸಿದರು, ಈಗಾಗಲೇ ಹಲವು ಸಮನ್ಸ್‌ಗಳನ್ನು ನೀಡಿರುವ ಜಾರಿ ನಿರ್ದೇಶನಾಲಯದ ನಿಯಮವನ್ನು ಪಾಲಿಸಿದರೆ, ಏಜೆನ್ಸಿ ತನ್ನನ್ನು ಯಾವುದೇ ಕಾರಣಕ್ಕೂ ಬಂಧನ ಮಾಡುವುದಿಲ್ಲ ಎಂದು ಭರವಸೆ ನೀಡಬೇಕು ಎಂದು ಒತ್ತಾಯ ಮಾಡಿದ್ದರು. ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರು, "ನಾನು ಸಮನ್ಸ್ ಅನ್ನು ಅನುಸರಿಸಿದರೆ ನನ್ನ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯದ ಮುಂದೆ ಭರವಸೆ ನೀಡಬೇಕು" ಎಂದು ಹೇಳಿದ್ದರು.

ಲೋಕಸಭಾ ಚುನಾವಣೆ ಬೆನ್ನಲ್ಲೇ, ಇಡಿ ಸುಳಿಯಲ್ಲಿ ವಿಪಕ್ಷಗಳ ಪ್ರಮುಖ ನಾಯಕರು! ಯಾರ‍್ಯಾರು?

"ನಾವು ಮಧ್ಯಂತರ ಪರಿಹಾರವನ್ನು ನೀಡಲು ಒಲವು ಹೊಂದಿಲ್ಲ" ಎಂದು ನ್ಯಾಯಾಲಯವು  ಅರವಿಂದ್‌ ಕೇಜ್ರಿವಾಲ್‌ತೆ ತಿಳಿಸಿದೆ. ಅದರೊಂದಿಗೆ  ಜಾರಿ ನಿರ್ದೇಶನಾಲಯದ ಹೊಸ ಮನವಿಯ ಕುರಿತು ತನಿಖಾ ಸಂಸ್ಥೆಯಿಂದ ಪ್ರತಿಕ್ರಿಯೆಯನ್ನೂ ಕೋರಿದೆ.

ಸಿಎಂ ಕೇಜ್ರಿವಾಲ್, ಸಿಸೋಡಿಯಾಗೆ ಕೆ ಕವಿತಾ 100 ಕೋಟಿ ರೂ ಲಂಚ, ತನಿಖೆಯಲ್ಲಿ ಬಹಿರಂಗ!

 


 

Follow Us:
Download App:
  • android
  • ios