Asianet Suvarna News Asianet Suvarna News

Indian Army chief ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆ.ಜನರಲ್ ಮನೋಜ್ ಪಾಂಡೆ ನೇಮಕ!

  • ಸೇನಾ ಮುಖ್ಯಸ್ಥರಾಗಿ ಆಯ್ಕೆಯಾದ ಮೊದಲ ಎಂಜಿನೀಯರ್
  • ಹಾಲಿ ಸೇನಾ ಮುಖ್ಯಸ್ಥ ಎಂಎಂ ನರವಾನೆ ಅವಧಿ ಮುಕ್ತಾಯ
  • ಕೇಂದ್ರ ರಕ್ಷಣಾ ಸಚಿವಾಲಯದಿಂದ ಅಧಿಕೃತ ಘೋಷಣೆ
Lieutenant General Manoj Pande appointed as next chief of Indian Army ckm
Author
Bengaluru, First Published Apr 18, 2022, 7:52 PM IST

ನವದೆಹಲಿ(ಏ.18): ಭಾರತೀಯ ಸೇನಾ ಮುಖ್ಯಸ್ಱರ(chief of Indian Army) ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಕಾರ್ಪ್ ಎಂಜಿನೀಯರ್ ನೇಮಕ ಮಾಡಲಾಗಿದೆ. ಹೌದು ಹಾಲಿ ಸೇನಾ ಮುಖ್ಯಸ್ಥ ಎಂಎಂ ನರವಾನೆ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನಲೆಯಲ್ಲಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ(Manoj Pande) ನೇಮಕಗೊಂಡಿದ್ದಾರೆ.

ಕೇಂದ್ರ ರಕ್ಷಣಾ ಸಚಿವಾಲಯ ಮನೋಜ್ ಪಾಂಡೆ ಮುಂದಿನ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಿದೆ. ಮನೋಜ್ ಮುಕುಂದ್ ನರವಾನೆ ಅವರ 28 ತಿಂಗಳ ಅಧಿಕಾರವದಿ ಎಪ್ರಿಲ್ 30ಕ್ಕೆ ಅಂತ್ಯವಾಗುತ್ತಿದೆ. ಹೀಗಾಗಿ ನೂತನ ಸೇನಾ ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ.

ಚೀನಾಗೆ ಮತ್ತೊಮ್ಮೆ ಖಡಕ್‌ ಎಚ್ಚರಿಕೆ ನೀಡಿದ ಜ.ನರವಣೆ

ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಅತ್ಯುನ್ನತ ರ್ಯಾಂಕ್‌ನೊಂದಿಗೆ ತೇರ್ಗಡೆಯಾದ ಮನೋಜ್ ಪಾಂಡೆ 1982ರಲ್ಲಿ ಕಾರ್ಪ್ಸ್ ಎಂಜಿನೀಯರ್ ಆಗಿ 1982ರಲ್ಲಿ ಸೇವೆ ಆರಂಭಿಸಿದರು. ಭಾರತೀಯ ಸೇನೆಯ ಎಂಜಿನೀಯರಿಂಗ್ ರೆಜಿಮೆಂಟ್‌ನ ಕಮಾಂಡರ್ ಆಗಿದ್ದ ಮನೋಜ್ ಪಾಂಡೆ, ಪ್ರಮುಖ ಆಪರೇಶನ್‌ಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಜಮ್ಮು ಕಾಶ್ಮೀರ ಲೈನ್ ಆಫ್ ಕಂಟ್ರೋಲ್‌ನ ಪಲ್ಲನ್‌ವಾಲಾ ಸೆಕ್ಟರ್‌ನಲ್ಲಿ ನಡೆಸಿದ  ಆಪರೇಶನ್ ಪರಾಕ್ರಮ ಕಾರ್ಯಚರಣೆಯ ಎಂಜಿನೀಯರಿಂಗ್ ರಿಜಿಮೆಂಟ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ.

2001ರಲ್ಲಿ ನಡೆದ ಸಂಸತ್ ದಾಳಿಯಲ್ಲಿ ಉಗ್ರರ ಸದಬಡಿಯುವ ಹಾಗೂ ಸಂಪೂರ್ಣ ಆಪರೇಶನ್ ಎಂಜಿನೀಯರಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಭಾರತೀಯ ಸೇನೆಯಲ್ಲಿ 39 ವರ್ಷಗಳ ಸೇವಾ ಅನುಭವ ಇದೀಗ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದೆ. 

ಪಶ್ಚಿಮ ಇನ್‌ಫ್ಯಾಂಟ್ರಿ ಬ್ರಿಗೇಡ್‌ನ ಎಂಜಿನೀಯರ್, ಲೈನ್ ಆಫ್ ಕಂಟ್ರೋಲ್ ಕಾರ್ಪ್ಸ್ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನ ಕಮಾಂಡರ್ ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದಾರೆ.

ಜ| ನರವಣೆ ಹೊಸ ಸಶಸ್ತ್ರ ಪಡೆ ಮುಖ್ಯಸ್ಥ?, ಮೋದಿ ಸಭೆಯಲ್ಲಿ Bipin Rawat ಉತ್ತರಾಧಿಕಾರಿ ಬಗ್ಗೆ ಮಾತು!

ಶತ್ರುರಾಷ್ಟ್ರಗಳಿಗೆ ನಡುಕ ಹುಟ್ಟಿಸಿದ್ದ ಮನೋಜ್‌ ಮುಕುಂದ್‌ 
2019ರಲ್ಲಿ ಕೇಂದ್ರ ರಕ್ಷಣಾ ಇಲಾಖೆ ಮನೋಜ್ ಮುಕುಂದ್ ನರವಾನೆ ಅವರನ್ನು ಭಾರತೀಯ ಸೇನಾ ಮುಖ್ಯಸ್ಥನ್ನಾಗಿ ನೇಮಕ ಮಾಡಿತ್ತು. ಲಡಾಖ್ ಗಡಿಯಲ್ಲಿ ಚೀನಾ ಅತಿಕ್ರಮ ಸೇರಿದಂತೆ ಹಲವು ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಹಾಗೂ ಮಾತುಕತೆ ಮೂಲಕ ಬಗೆಹರಿಸುವಲ್ಲಿ ಮುಕುಂದ್ ನೆರವಾಗಿದ್ದರು. ಲಡಾಖ್‌ಗೆ ಭೇಟಿ ನೀಡಿ ಯೋಧರಿಗೆ ಧೈರ್ಯ ತುಂಬಿದ್ದರು. ಚೀನಾದ ಗಡಿಯನ್ನು ಕಾಯುತ್ತಿರುವ ಪೂರ್ವ ಪಡೆಯ ಮುಖ್ಯಸ್ಥರಾಗಿಯೂ ಮುಕುಂದ್‌ ಮುನ್ನಡೆಸಿದ್ದರು. ಜಮ್ಮು- ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಒಳನುಸುಳುವಿಕೆ ತಡೆ ಕಾರ್ಯಾಚರಣೆಯಲ್ಲೂ ಮುಕುಂದ್‌ ಈ ಹಿಂದೆ ಭಾಗಿಯಾಗಿದ್ದರು. ಜಮ್ಮು- ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್‌ ಬೆಟಾಲಿಯನ್‌ ಮತ್ತು ಇನ್ಫಾಂಟರಿ ಬ್ರಿಗೇಡ್‌ನಲ್ಲಿಯೂ ಕಾರ್ಯನಿರ್ವಹಿಸಿದ್ದರು. ತಮ್ಮ ಅಪ್ರತಿಮ ಸೇವೆಗಾಗಿ ವಿಶಿಷ್ಟಸೇವಾ ಪದಕಕ್ಕೂ ಜ ಮುಕುಂದ್‌ ಭಾಜನರಾಗಿದ್ದಾರೆ. ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ ಹಳೆಯ ವಿದ್ಯಾರ್ಥಿ ಆಗಿರುವ ಅವರು, ಪುಣೆ ಮೂಲದವರು.

ಲಡಾಖ್‌ ಗಡಿಯಿಂದ ಸೇನಾ ಹಿಂಪಡೆತ ಮಾಡುವ ನಿರ್ಧಾರ ಚೀನಾ ಮತ್ತು ಭಾರತ ಎರಡೂ ದೇಶಗಳಿಗೆ ಸಿಕ್ಕ ಜಯ ಎಂದು ಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೆಬಿನಾರ್‌ ಮೂಲಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ‘ಯಾವುದೇ ಒಪ್ಪಂದ ಜಾರಿಯಾಗಬೇಕಾದರೆ, ಎರಡೂ ಬಣಗಳಿಗೂ ತಾವು ಏನನ್ನಾದರೂ ಸಾಧಿಸಿದ ತೃಪ್ತಿ ಇರಬೇಕು. ಈವರೆಗೆ ನಾವು ನಡೆಸಿದ 10 ಸುತ್ತಿನ ಮಾತುಕತೆಗಳು ಉತ್ತಮ ಫಲವನ್ನೇ ನೀಡಿವೆ. ಇಡೀ ಲಡಾಖ್‌ ಸಂಘರ್ಷದ ವೇಳೆ ನಾವು ಒಂದಾಗಿ (ರಾಜಕೀಯ, ರಕ್ಷಣಾ ಸಚಿವ, ವಿದೇಶಾಂಗ ಸಚಿವ) ಕಾರ್ಯತಂತ್ರ ರೂಪಿಸಿದ್ದೆವು. ಅದರಂತೆ ನಡೆದುಕೊಂಡೆವು. ಅದರ ಫಲವಾಗಿಯೇ ಇದೀಗ ಸಂಘರ್ಷದ ಸ್ಥಳದಿಂದ ಸೇನಾ ಹಿಂಪಡೆತ ಸಾಧ್ಯವಾಗಿದೆ. ನನ್ನ ಅಭಿಪ್ರಾಯದಲ್ಲಿ ಇದು ಉತ್ತಮ ಮುಕ್ತಾಯ. ಎರಡೂ ಬಣಗಳಿಗೆ ಜಯ ಸಿಕ್ಕ ಫಲಿತಾಂಶ’ ಎಂದು ಹೇಳಿದರು.
 

Follow Us:
Download App:
  • android
  • ios