Asianet Suvarna News Asianet Suvarna News

ತ್ರಿವಳಿ ತಲಾಖ್‌ ನಿಷೇಧದಿಂದ ಮುಸ್ಲಿಂ ಮಹಿಳೆಯರಿಗೆ ನೆರವು: Narendra Modi

ತ್ರಿವಳಿ ತಲಾಖ್‌ ವಿರುದ್ಧದ ಕಾನೂನು ಉತ್ತರ ಪ್ರದೇಶದಲ್ಲಿ ಸಾವಿರಾರು ಮಹಿಳೆಯರ ಕುಟುಂಬ ಒಡೆಯುವುದನ್ನು ತಪ್ಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು.

Law against Triple Talaq saved families of thousands of muslim women from breaking up in up says pm gvd
Author
Bangalore, First Published Feb 15, 2022, 1:59 AM IST

ಕಾನ್ಪುರ (ಫೆ.15): ತ್ರಿವಳಿ ತಲಾಖ್‌ (Triple Talaq) ವಿರುದ್ಧದ ಕಾನೂನು ಉತ್ತರ ಪ್ರದೇಶದಲ್ಲಿ (Uttar Pradesh) ಸಾವಿರಾರು ಮಹಿಳೆಯರ ಕುಟುಂಬ ಒಡೆಯುವುದನ್ನು ತಪ್ಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೋಮವಾರ ಹೇಳಿದರು. ಕಾನ್ಪುರ ದೇಹತ್‌ನಲ್ಲಿ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಶಾಲೆಗೆ ಹೋಗುವಾಗ ದುಷ್ಕರ್ಮಿಗಳಿಂದ ಮುಸ್ಲಿಂ ಬಾಲಕಿಯರಿಗೆ ತೊಂದರೆ ಆಗುತ್ತಿತ್ತು, ಆದರೆ ಯೋಗಿ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಿದ್ದರಿಂದ ಇದು ನಿವಾರಣೆ ಆಗಿದೆ’ ಎಂದರು.

ಕರ್ನಾಟಕದಲ್ಲಿ (Karnataka) ನಡೆಯುತ್ತಿರುವ ಹಿಜಾಬ್‌ ವಿವಾದ (Hijab Row) ಬೆನ್ನಲ್ಲೇ ಮೋದಿ ಅವರ ಈ ಹೇಳಿಕೆ ಬಂದಿದೆ. ತ್ರಿವಳಿ ತಲಾಖ್‌ ವಿರುದ್ಧದ ಕಾಯ್ದೆಯನ್ನು ಸಮರ್ಥಿಸಿದ ಅವರು, ಈ ಹಿಂದೆ ಮುಸ್ಲಿಂ ಮಹಿಳೆ ತನ್ನ ತವರು ಮನೆಯಿಂದ ಬರಿಗೈನಲ್ಲಿ ಹಿಂದಿರುಗಿದರೆ ಆಕೆಗೆ ತಕ್ಷಣವೇ ತಲಾಖ್‌ ನೀಡಲಾಗುತ್ತಿತ್ತು. ಮೋಟಾರ್‌ ಸೈಕಲ್‌, ಚಿನ್ನದ ಸರ ಅಥವಾ ಮೊಬೈಲ್‌ ಫೋನ್‌ ತರದಿದ್ದರೂ ತಲಾಖ್‌ ನೀಡಲಾಗುತ್ತಿತ್ತು. ಇದರಿಂದ ಮಹಿಳೆಯರ ಜೀವನವೇ ನಾಶವಾಗುತ್ತಿತ್ತು. ಮಹಿಳೆ ಮಾತ್ರವಲ್ಲ, ಆಕೆಯ ಪೋಷಕರ ನೋವು ಅರ್ಥ ಮಾಡಿಕೊಳ್ಳಿ. 

ಮಗಳು ಗಂಡನ ಮನೆಯಿಂದ ತವರಿಗೆ ಬಂದಾಗ ತ್ರಿವಳಿ ತಲಾಖ್‌ನ ಭಯದಲ್ಲಿ ಆಕೆ ಕಾಲಕಳೆಯಬೇಕಾಗಿತ್ತು. ಇಂದು ಇದರಿಂದ ರಕ್ಷಣೆ ಪಡೆದುಕೊಳ್ಳಲು ಮುಸ್ಲಿಂ ಸಹೋದರಿಯರಿಗಾಗಿ ಕಾನೂನು ಜಾರಿ ಮಾಡಿದ್ದೇವೆ ಎಂದು ಹೇಳಿದರು. ಇದೇ ವೇಳೆ ಸಮಾಜವಾದಿ ಪಕ್ಷದ (Samajwadi Party) ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಎಸ್‌ಪಿ ಆಳ್ವಿಕೆ ವೇಳೆ ರಾಜ್ಯವನ್ನು ಕೊಳ್ಳೆ ಹೊಡೆಯಲು ಕುಟುಂಬಸ್ಥರಿಗೆ ಟಿಕೆಟ್‌ ಹಂಚಿತ್ತು’ ಎಂದರು.

Punjab Elections: ಮಹಿಳಾ ಆಯೋಗದ ಅಧ್ಯಕ್ಷೆ ಮನಿಷಾ ಗುಲಾಟಿ ಬಿಜೆಪಿಗೆ, ಮೋದಿ ಸಮ್ಮುಖದಲ್ಲಿ ಸೇರ್ಪಡೆ

ಯೋಧರ ಸ್ಮರಿಸಿ ಗೌರವ ನಮನ ಸಲ್ಲಿಸಿದ ಮೋದಿ: ಪುಲ್ವಾಮಾ ಭಯೋತ್ಪಾದನಾ(pulwama terror attack) ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್(CRPF) ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ(PM narendra Modi) ಗೌರವ ನಮನ ಸಲ್ಲಿಸಿದ್ದಾರೆ. ವೀರ ಯೋಧರು ದೇಶಕ್ಕೆ ನೀಡಿದ ಅತ್ಯುತ್ತಮ ಸೇವೆಯನ್ನು ಸ್ಮರಿಸಿಕೊಳ್ಳುತ್ತೇನೆ. ಅವರ ಕಾರ್ಯ ಬಲಿಷ್ಠ ಭಾರತಕ್ಕೆ ಪ್ರೇರಣೆಯಾಗಿದೆ ಎಂದು ಮೋದಿ ಹೇಳಿದ್ದಾರೆ. 2019ರ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಭಾರತದ ಸಿಆರ್‌ಪಿಎಫ್ ಯೋಧರ ಮೇಲೆ ಪಾಕಿಸ್ತಾನ ಭಯೋತ್ಪಾದಕರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. 

ಈ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಭಾರತದ ಸೇನೆ ಮೇಲೆ ನಡೆದ ಅತೀ ದೊಡ್ಡ ಭಯೋತ್ಪಾದನಾ ದಾಳಿ ಇದಾಗಿದೆ. ಈ ಕರಾಳ ದಿನಕ್ಕೆ ಮೂರು ವರ್ಷ ಸಂದಿದೆ. ಇಂದು ಮೋದಿ ಟ್ವಿಟರ್ ಮೂಲಕ ಪುಲ್ವಾಮಾ ವೀರ ಯೋಧರಿಗೆ ಗೌರವ ನಮನ (Tribute)ಸಲ್ಲಿಸಿದ್ದಾರೆ. 2019ರ ಈ ದಿನ ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ ಭಾರತದ ದೇಶದ ಭದ್ರತೆಗೆ ನೀಡಿದ ಅತ್ಯುನ್ನತ ಸೇವೆಯನ್ನು ಸ್ಮರಿಸಿಕೊಳ್ಳುತ್ತೇನೆ. ಪುಲ್ವಾಮಾ ವೀರ ಯೋಧರ ಶೌರ್ಯ, ತ್ಯಾಗ, ಬಲಿದಾನ ಪ್ರತಿಯೊಬ್ಬರ ಭಾರತೀಯನನ್ನು ಬಲಿಷ್ಠ ಹಾಗೂ ಸಮೃದ್ಧ ಭಾರತಕ್ಕಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದಿದ್ದಾರೆ. 

Mann Ki Baat: ನಿಮ್ಮಲ್ಲೂ ಐಡಿಯಾ ಇದ್ದರೆ, 27ರ ಮೋದಿ 'ಮನ್‌ ಕೀ ಬಾತ್‌'ಗೆ ಕಳುಹಿಸಿ!

ಪಾಕಿಸ್ತಾನ(Pakistan) ಪ್ರಾಯೋಜಿತ ಭಯೋತ್ಪಾದಕ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.ಜಮ್ಮು ಮತ್ತು ಶ್ರೀನಗರ ರಾಷ್ಟೀಯ ಹೆದ್ದಾರಿ ಮೂಲಕ  ಭಾರತೀಯ ಸಿಆರ್‌ಪಿಎಫ್ ಯೋಧರು ಸಾಗುತ್ತಿದ್ದರು. ಪುಲ್ವಾಮಾ ಜಿಲ್ಲೆಯ ಲೆತಪೋರಾ ಬಳಿ ಭಯೋತ್ಪಾದಕರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ. ಪಾಕಿಸ್ತಾನದ  ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ, ಸ್ಥಳೀಯ ಆದಿಲ್ ಅಹಮ್ಮದ್ ದಾರ್ ಯುವಕನ ಬಳಸಿಕೊಂಡು ಈ ದಾಳಿ ನಡೆಸಿತ್ತು. ಈ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಳಸಿತು.

Follow Us:
Download App:
  • android
  • ios