ನವದೆಹಲಿ[ಫೆ.02]: ಟ್ವೀಟ್‌ನಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. ಪೊಲೀಸ್ ಪರೇಡ್‌ ನಡೆಯುತ್ತಿದ್ದ ಮೈದಾನಕ್ಕೆ ಬಂದ ಲಂಗೂರ್‌ ಒಂದು ಎಂಟ್ರಿ ಕೊಟ್ಟಿದ್ದು, ಅಲ್ಲಿ ಡ್ರಿಲ್ ನಿರತ ಪೊಲೀಸ್ ಅಧಿಕಾರಿಯೊಬ್ಬರಿಗೆ ಒದೆ ಕೊಟ್ಟು ಓಡಿದೆ. ಅದೆಷ್ಟು ಜೋರಾಗಿ ಒದ್ದಿದೆ ಎಂದರೆ ಮಾರ್ಚ್ ಮಾಡುತ್ತಿದ್ದ ಪೊಲೀಸಪ್ಪನೂ ಸಮತೋಲನ ಕಳೆದುಕೊಂಡಿದ್ದಾರೆ. IPS ಪಂಕಜ್ ನೈನ್ ಶೇರ್ ಮಾಡಿಕೊಂಡಿರುವ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ಈ ವಿಡಿಯೋಗೆ ಮಜದಾಯಕ ಕ್ಯಾಪ್ಶನ್ ನೀಡಿರುವ ಪಂಕಜ್ 'ಪೊಲೀಸರು ಸರಿಯಾಗಿ ಮಾರ್ಚಿಂಗ್ ನಡೆಸದಾಗ ಡ್ರಿಲ್ ಇನ್ಸ್ಪೆಕ್ಟರ್ ಕೂಡಾ ಇದೇ ರೀತಿ ಮಾಡಲಿಚ್ಛಿಸುತ್ತಾರೆ' ಎಂದಿದ್ದಾರೆ.

ಈ ಸಂಬಂಧ ಕಮೆಂಟ್ ಮಾಡಿರುವ ನೇಕರು ಪೊಲೀಸ್ ಅಧಿಕಾರಿ ಮಾರ್ಚಿಂಗ್ ವೇಳೆ ಗೆರೆಯ ಹೊರ ಭಾಗದಲ್ಲಿದ್ದ ಹೀಗಾಗೇ ಲಂಗೂ ಒದ್ದು ಅವರನ್ನು ಗೆರೆಯೊಳಗೆ ದಾಟಿಸಿದ್ದಾರೆ ಎಂದಿದ್ದಾರೆ

ಫೆಬ್ರವರಿ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ