ನವದೆಹಲಿ[ಮಾ.08]: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ಗೆ ಇದೀಗ ಕೊರೋನಾ ಭೀತಿ ಕಾಡತೊಡಗಿದೆ.

ಕಾರಣ ಲಾಲು ಚಿಕಿತ್ಸೆ ಪಡೆಯುತ್ತಿರುವ ಜಾರ್ಖಂಡ್‌ನ ರಾಜೇಂದ್ರ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ (ರಿಮ್ಸ್‌) ಆಸ್ಪತ್ರೆಯಲ್ಲಿ ಕೊರೋನಾ ವೈರಸ್‌ ಶಂಕಿತರು ಮತ್ತು ದೃಢಪಟ್ಟವರನ್ನು ಇರಿಸಲು ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ. ಅದು ಲಾಲು ಇರುವ ಕೋಣೆಯ ಪಕ್ಕದಲ್ಲೇ ಇದೆ. ಹೀಗಾಗಿ ಇದರಿಂದ ಲಾಲು ಜೀವಕ್ಕೆ ಅಪಾಯ ಎದುರಾಗಿದೆ ಎಂದು ಆರ್‌ಜೆಡಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಲು ಭೇಟಿಗೆ ನಿತ್ಯ ಹಲವಾರು ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಅವರೆಲ್ಲರೂ ಕೊರೋನಾ ಚಿಕಿತ್ಸೆಗೆ ಮೀಸಲಿಟ್ಟವಾರ್ಡ್‌ನ ಮೂಲಕವೇ ತೆರಳಬೇಕಿದೆ.