ಡಯಾಬಿಟಿಕ್ ಅಪ್ಪ ಪಡುತ್ತಿದ್ದ ಕಷ್ಟ ನೋಡಿದ ಮಗಳಿಂದ ವಿಶ್ವ ಮೆಚ್ಚುವ ಅವಿಷ್ಕಾರ

ಒಡಿಶಾ ಮೂಲಕ ಯುವ ವಿಜ್ಞಾನಿಯೊಬ್ಬರು ಈ ಬಾರಿಯ ರಾಷ್ಟ್ರೀಯ ಜೇಮ್ಸ್ ಡೈಸನ್ ಅವಾರ್ಡ್ 2024ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಒಡಿಶಾ ಮೂಲದ ಕೋಮಲ್ ಪಂಡಾ ಈ ಪ್ರಶಸ್ತಿಗೆ ಪಾತ್ರರಾದವರು. ಅವರ ಈ ಅವಿಷ್ಕಾರದ ಹಿಂದಿನ ಪ್ರೇರಣೆ ಅಪ್ಪನ ಕಷ್ಟ

Komal panda invetns portable cooler for insulin gets James Dyson Award akb

ಒಡಿಶಾ ಮೂಲಕ ಯುವ ವಿಜ್ಞಾನಿಯೊಬ್ಬರು ಈ ಬಾರಿಯ ರಾಷ್ಟ್ರೀಯ ಜೇಮ್ಸ್ ಡೈಸನ್ ಅವಾರ್ಡ್ 2024ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಒಡಿಶಾ ಮೂಲದ ಕೋಮಲ್ ಪಂಡಾ ಈ ಪ್ರಶಸ್ತಿಗೆ ಪಾತ್ರರಾದವರು. ನೊವೊಕ್ಯಾರಿ (Novocarry) ಹೆಸರಿನ ಪೋರ್ಟೆಬಲ್‌ ಕೂಲರ್‌ ಅನ್ನು ನಿರ್ಮಿಸಿದ ಅವರ ಅದ್ಭುತವಾದ ಅವಿಷ್ಕಾರಕ್ಕಾಗಿ ಅವರನ್ನು ನ್ಯಾಷನಲ್ ವಿನ್ನರ್ ಆಫ್ ಇಂಡಿಯಾದಿಂದ ಜೇಮ್ಸ್ ಡೈಸನ್ ಅವಾರ್ಡ್-2024ಕ್ಕೆ ಆಯ್ಕೆ ಮಾಡಲಾಗಿದೆ. ಅವರ ಈ ಅದ್ಭುತ ಅವಿಷ್ಕಾರದ ಹಿಂದೆ ಅವರ ತಂದೆಯ ಪರಿಶ್ರಮವೂ ಇದೆ!

ಈ ನೊವೊಕ್ಯಾರಿಯನ್ನು ಸಕ್ಕರೆ ಕಾಯಿಲೆಯ ರೋಗಿ ( diabetic patients)ಗಳಿಗಾಗಿ ಸ್ಥಾಪಿಸಲಾಗಿದೆ. ಇದೊಂದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬಹುದಾದ ಸಂಚಾರಿ ಕೂಲರ್ ಆಗಿದ್ದು, (portable cooling carrier) ಇದು ಸಕ್ಕರೆ ಕಾಯಿಲೆ ರೋಗಿಗಳಿಗೆ ನೀಡುವ ಇನ್ಸುಲಿನ್‌ ಹಾಗೂ ಇತರ ದ್ರವರೂಪದ ಔಷಧಿಗಳನ್ನು ಯಾವುದೇ ವಿಪರೀತ ತಾಪಮಾನದಲ್ಲೂ ಕೆಡದಂತೆ ನೀವು ಬಯಸಿದ ತಾಪಮಾಣದಲ್ಲಿ ಇರಿಸುತ್ತದೆ. ಅದರಲ್ಲೂ ವಿಶೇಷವಾಗಿ ತುಂಬಾ ದೂರದ ಸುದೀರ್ಘ ಪ್ರಯಾಣದ ಸಮಯದಲ್ಲಿ ಹಾಗೂ ಸರಿಯಾದ ವಿದ್ಯುತ್ ಸೌಲಭ್ಯವಿಲ್ಲದಂತಹ ಸ್ಥಳದಲ್ಲಿ ಇದನ್ನು ಬಳಸಬಹುದಾಗಿದೆ.

ಇದನ್ನೂ ಓದಿ: ಕರಿಬೇವಿನ ಆರೋಗ್ಯ ಪ್ರಯೋಜನಗಳು, ಸಕ್ಕರೆ ಕಾಯಿಲೆ, ಜೀರ್ಣಕ್ರಿಯೆ ಜೊತೆಗೆ ಮತ್ತಷ್ಟು

ರಾಷ್ಟ್ರದಾದ್ಯಂತ ಯುವ ಆವಿಷ್ಕಾರಿಗಳು ನಿರ್ಮಿಸಿದ ವಿವಿಧ ಆವಿಷ್ಕಾರಗಳಲ್ಲಿ ಈ ಸಾಧನವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವರದಿಗಳ ಪ್ರಕಾರ, ಕೋಮಲ್ ಪಂಡಾ ಅವರು ಈ ಅವಿಷ್ಕಾರಕ್ಕಾಗಿ ಅಂದಾಜು 5 ಲಕ್ಷ ರೂಪಾಯಿಗಳ ಪ್ರಶಸ್ತಿ ಮೊತ್ತವನ್ನು ಪಡೆಯಲಿದ್ದಾರೆ. 2024ರ ಜೇಮ್ಸ್‌ ಡೈಸನ್‌ ಪ್ರಶಸ್ತಿ ಸ್ವೀಕರಿಸಿದ ನಂತರ ಕೋಮಲ್ ಅವರು ತಮ್ಮ ಸಾಧನೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.  ಅಲ್ಲದೇ ಈ ಸಾಧನದ ಅವಿಷ್ಕಾರದ ಹಿಂದಿನ ಪ್ರೇರಣೆಯ ಬಗ್ಗೆ ಮಾತನಾಡಿದ್ದಾರೆ.

ಸಕ್ಕರೆ ಕಾಯಿಲೆ ಪೀಡಿತರಾಗಿದ್ದ ತಂದೆ ದಿನವೂ ಇನ್ಸುಲಿನ್ ಅನ್ನು ಮನೆಯಲ್ಲಿ ಸಂಗ್ರಹಿಸಿಡಲು ಹಾಗೂ ಕಚೇರಿಯಲ್ಲಿ ಪ್ರಿಡ್ಜ್‌ ಇಲ್ಲದ ಕಾರಣ ಕೆಡದಂತೆ ರಕ್ಷಿಸಿ  ತೆಗೆದುಕೊಂಡು ಹೋಗಲು ಪಡುತ್ತಿದ್ದ ಕಷ್ಟವನ್ನು ನೋಡಿ ಈ ನೊವೊಕ್ಯಾರಿ ಪೋರ್ಟೆಬಲ್ ಏರ್ ಕೂಲರನ್ನು ನಿರ್ಮಿಸಲು ಯೋಚನೆ ಮಾಡಿದ್ದಾಗಿ ಹೇಳಿದ್ದಾರೆ. 

ಇದನ್ನೂ ಓದಿ: ಮಧುಮೇಹಿಗಳಿಗೆ ಸಂತಸದ ಸುದ್ದಿ, ಸಕ್ಕರೆ ಕಾಯಿಲೆ ಗುಣಪಡಿಸಬಹುದೆಂದು ಚೀನಾ ವೈದ್ಯರ ಘೋಷಣೆ!

ರೆಫ್ರಿಜರೇಟರ್‌ನ ಅಗತ್ಯವಿರುವ ಔಷಧಿಗಳನ್ನು ಅವಲಂಬಿಸಿರುವ ಜನರಿಗೆ ಸ್ವಾತಂತ್ರ್ಯ ಹಾಗೂ ಮಾನಸಿಕ ಶಾಂತಿಯನ್ನು ನೀಡುವ ಪರಿಹಾರವನ್ನು ವಿನ್ಯಾಸಗೊಳಿಸುವುದೇ ನನ್ನ ಗುರಿಯಾಗಿದೆ ಎಂದು ಕೋಮಲ್ ಹೇಳಿದ್ದಾರೆ. ಈ ಜಾಗತಿಕ ಮಟ್ಟದ ಗುರುತಿಸುವಿಕೆ ತನ್ನ ವಿನ್ಯಾಸ ಪ್ರಕ್ರಿಯೆಗೆ ಹೆಚ್ಚಿನ ಮೌಲ್ಯ ನೀಡಿದ್ದು, ನೊವೊಕಾರಿಗೆ ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ ಎಂದು ಕೋಮಲ್ ಹೇಳಿದ್ದಾರೆ. 

Latest Videos
Follow Us:
Download App:
  • android
  • ios