Asianet Suvarna News Asianet Suvarna News

ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಸಖತ್ ಸ್ಟೆಪ್ಸ್ ಹಾಕಿದ ಪೊಲೀಸ್, ವಿಡಿಯೋ ವೈರಲ್!

ದೇಶದ ಹಲವು ಭಾಗದಲ್ಲಿ ಇದೀಗ ಅದ್ಧೂರಿ ಗಣೇಶ ವಿಸರ್ಜನೆಗಳು ನಡೆಯುತ್ತಿದೆ. ಹೀಗೆ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೆ ವಿಸರ್ಜನೆ ವೇಳೆ ಮ್ಯೂಸಿಕ್ ಬ್ಯಾಂಡ್‌ಗೆ ಪೊಲೀಸ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

Khairatabad Ganesha festival Police personnel dance during  Visarjan' procession at Hyderabad ckm
Author
First Published Sep 28, 2023, 3:57 PM IST

ಹೈದರಾಬಾದ್(ಸೆ.28) ಗಣೇಶ ಹಬ್ಬ ವಿಜ್ರಂಭಣೆಯಿಂದ ಆಚರಿಸಲಾಗಿದೆ. ದೇಶದ ಹಲವು ಭಾಗದಲ್ಲಿ ಇದೀಗ ಗಣೇಶ ವಿಸರ್ಜನೆ ನಡೆಯುತ್ತಿದೆ. ಹಲವೆಡೆ 10 ದಿನ, 15 ದಿನದ ಅದ್ಧೂರಿ ಗಣೇಶೋತ್ಸವ ಸಂಭ್ರಮಚಾರಣೆ ನಡೆಯುತ್ತಿದೆ. ಇದೀಗ ಬಹುತೇಕ ಕಡೆ ಅದ್ಧೂರಿಯಾಗಿ ಗಣೇಶ ವಿಸರ್ಜನೆಗಳು, ಶೋಭಯಾತ್ರೆ ನಡೆಯುತ್ತಿದೆ. ಹೀಗೆ ಅದ್ಧೂರಿ ಗಣೇಶೋತ್ಸವ ವಿಸರ್ಜನೆ ಮೆರವಣಿಗೆಯಲ್ಲಿ ಪೊಲೀಸ್ ಹಾಕಿದ ಭರ್ಜರಿ ಸ್ಟೆಪಸ್ ವೈರಲ್ ಆಗಿದೆ. ಹೌದು, ಹೈದರಾಬಾದ್‌ನ ಟ್ಯಾಂಕ್ ಬಂಡ್ ರೋಡ್‌ನಲ್ಲಿ ಅದ್ಧೂರಿ ಗಣೇಶ ವಿಸರ್ಜನೆ ಮೆರವಣಿಗೆ ಆರಂಭಗೊಂಡಿತ್ತು. ಲಕ್ಷಾಂತರ ಮಂದಿ ಸೇರುವ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು. ಆದರೆ ವಿಸರ್ಜನೆ ಮೆರವಣಿಗೆಯಲ್ಲಿ ಹಾಕಿದ್ದ ಡಿಜೆಗೆ ನೆರೆದಿದ್ದವರೂ ಮಾತ್ರವಲ್ಲ ಪೊಲೀಸರು ಸಖತ್ ಸ್ಪೆಪ್ಸ್ ಹಾಕಿದ್ದಾರೆ.

ಖೈರತಾಬಾದ್ ಗಣೇಶ ಪ್ರತಿ ವರ್ಷ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದ್ಧೂರಿ ಗಣೇಶ ಆಚರಣೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡು ಗಣೇಶನ ದರ್ಶನ ಪಡೆಯುತ್ತಾರೆ. ಪ್ರತಿ ವರ್ಷ ಆಯೋಜಕರು ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸುತ್ತಾರೆ. ಅತೀ ದೊಡ್ಡ ಗಣೇಶನ ಮೂರ್ತಿ ಕೂರಿಸಿ 10 ದಿನಗಳ ಕಾಲ ಪೂಜೆ ನಡೆಯುತ್ತದೆ. ಇನ್ನು ವಿಸರ್ಜನೆ ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ.

ಪಟಾಕಿ ಸಿಡಿಸುವುದಕ್ಕಲ್ಲ, ನಮ್ಮ ಸಂಸ್ಕೃತಿ ಉಳಿಸಲು ಗಣೇಶೋತ್ಸವ ಆಚರಣೆ: ಪ್ರಮೋದ್ ಮುತಾಲಿಕ್

ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ಹೆಚ್ಚುವರಿ ಪೊಲೀಸ್ ಪಡ ನಿಯೋಜನೆ ಮಾಡಲಾಗುತ್ತದೆ. ಈ ಬಾರಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಹಾಕಲಾಗಿತ್ತು. ನೆರೆದಿದ್ದ ಯುವ ಸಮೂಹ ಡಿಜೆ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿದ್ದಾರೆ. ಇತ್ತ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ರಸ್ತೆ ಬದಿಯಲ್ಲಿ ಹಾಕಿದ್ದ ಸ್ಟೇಜ್ ಮೇಲೆ ನಿಂತು ಸಖತ್ ಸ್ಟೆಪ್ಸ್ ಹಾಕಿದ್ದಾರೆ. 

 

 

ಪೊಲೀಸ್ ಅಧಿಕಾರಿ ಡ್ಯಾನ್ಸ್ ಸ್ಕಿಲ್‌ಗೆ ಜನ ಬೆರಗಾಗಿದ್ದಾರೆ. ಹಲವರು ಹುರಿದುಂಬಿಸಿದ್ದಾರೆ. ಪೊಲೀಸ್ ಸ್ಟೆಪ್ಸ್‌ಗೆ ಭರ್ಜರಿ ಚಪ್ಪಾಳೆ, ಶಿಳ್ಳೆ ಬಂದಿದೆ. ಇತ್ತ ನೆರೆದಿದ್ದ ಭಕ್ತರು ಕೂಡ ಸ್ಪೆಪ್ಸ್ ಹಾಕಿದ್ದಾರೆ. ಇನ್ನು ಗಣೇಶ ವಿಸರ್ಜನೆ ವೇಳೆ ಕರ್ತವ್ಯದಲ್ಲಿದ್ದ ಹಲವು ಪೊಲೀಸರು ಸ್ಟೆಪ್ಸ್ ಹಾಕಿದ್ದಾರೆ. ಭಕ್ತರ ಜೊತೆ ಸೇರಿ ಪೊಲೀಸರು ಸ್ಟೆಪ್ಸ್ ಹಾಕಿ ಗಣೇಶನ ಅದ್ಧೂರಿ ವಿಸರ್ಜನೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.

 

 

ಪೊಲೀಸರು ಮೆರವಣಿಗೆಯಲ್ಲಿ ಕುಣಿದರೂ ಬಿಗಿ ಬಂದೋಬಸ್ತ್‌ನಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾರೆ. ಕಿಕ್ಕಿರಿದು ತುಂಬಿದ್ದ ಭಕ್ತರು, ಗಣೇಶನ ವಿಸರ್ಜನೆ ಎಲ್ಲವೂ ಸುಸೂತ್ರವಾಗಿ ನಡೆದಿದೆ.


 

Follow Us:
Download App:
  • android
  • ios