ವಯನಾಡ್ ಭೀಕರ ಭೂಕುಸಿತ-ಜಲಪ್ರವಾಹ, ತುರ್ತು ಸಹಾಯವಾಣಿ ಇಲ್ಲಿದೆ

ಪ್ರವಾಸಿ ಸ್ಥಳ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಮತ್ತು ಜಲಪ್ರವಾಹಕ್ಕೆ ಕೇರಳ ಮತ್ತು ವಯನಾಡು ಜಿಲ್ಲಾಡಳಿತ ತುರ್ತು ಸಹಾಯವಾಣಿ ತೆರೆದಿದ್ದು. ಮಾಹಿತಿ ಇಲ್ಲಿದೆ.

Kerala Wayanad landslide tragedy Helpline numbers issued from district authorities and  government gow

ಕೇರಳ (ಜು.30): ಪ್ರವಾಸಿ ಸ್ಥಳ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಮತ್ತು ಜಲಪ್ರವಾಹಕ್ಕೆ ಮೃತಮಟ್ಟವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. 100ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿರುವ ಶಂಕೆ ಇದೆ. ಇದೆಲ್ಲದರ ನಡುವೆ ಕೇರಳ ಸರ್ಕಾರ ಮತ್ತು  ವಯನಾಡು ಜಿಲ್ಲಾಡಳಿತ ತುರ್ತು ಸಹಾಯವಾಣಿ ತೆರೆದಿದೆ. ಕೇರಳ ಸರ್ಕಾರ 9656938689 ಮತ್ತು 8086010833 ಎರಡು ಸಹಾಯವಾಣಿಗಳನ್ನು ತೆರೆದಿದ್ದು, ವಯನಾಡ್‌ ಜಿಲ್ಲಾಡಳಿತ 1077 ಟೋಲ್ ಫ್ರೀ ನಂಬರ್ ತೆರೆದಿದೆ.

ಜಿಲ್ಲಾ ಮಟ್ಟದಲ್ಲಿ-ಡಿಇಒಸಿ
ಫೋನ್: 04936204151,
ಮೊಬೈಲ್-9562804151,8078409770

ಸುಲ್ತಾನ್ ಬತ್ತೇರಿ ತಾಲೂಕು - ಟಿಇಒಸಿ   
ಫೋನ್ -04936223355, 0493220296
ಮೊಬೈಲ್- 6238461385

ಮಾನಂತವಾಡಿ ತಾಲೂಕು- ಟಿಇಒಸಿ
ಫೋನ್: 04935241111, 04935240231
ಮೊಬೈಲ್- 9446637748

ವೈತಿರಿ ತಾಲೂಕು- ಟಿಇಒಸಿ
ಫೋನ್:04936256100
ಮೊಬೈಲ್: 8590842965, 9447097705

ಕೇರಳದಲ್ಲಿ ಭೀಕರ ಭೂಕುಸಿತ, 40ಕ್ಕೂ ಹೆಚ್ಚು ಮಂದಿ ಬಲಿ! 100ಕ್ಕೂ ಹೆಚ್ಚು ಮಂದಿ ಕಣ್ಮರೆ!

ವಯನಾಡ್ ಭೂಕುಸಿತ ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಗಳಿಗಾಗಿ ಪೊಲೀಸ್ ಡ್ರೋನ್‌ಗಳು ಮತ್ತು ಶ್ವಾನದಳವನ್ನು ನಿಯೋಜಿಸಲಾಗಿದೆ.  ಭೂಕುಸಿತ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮತ್ತು ಸಂಬಂಧಿತ ಚಟುವಟಿಕೆಗಳಿಗಾಗಿ ಆರ್ಮಿ ಇಂಜಿನಿಯರಿಂಗ್ ಗ್ರೂಪ್ ಅನ್ನು ತುರ್ತಾಗಿ ವಯನಾಡ್‌ಗೆ ನಿಯೋಜಿಸಲಾಗುವುದು. ಸೇತುವೆ ಕುಸಿತದ ನಂತರ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.  ಬೆಂಗಳೂರಿನಿಂದ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ (MEG) ಆಗಮಿಸಲಿದೆ ಎಂದು ಕೇರಳ  ಮುಖ್ಯಮಂತ್ರಿ ಕಚೇರಿ (CMO) ಮಾಹಿತಿ ನೀಡಿದೆ.

Latest Videos
Follow Us:
Download App:
  • android
  • ios