ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲು ಓಪನ್/ ಭಕ್ತಾದಿಗಳಿಂದ ದರ್ಶನ/ ಆಂಧ್ರ ಪ್ರದೇಶದಿಂದ ಬಂದಿದ್ದ ಮಹಿಳೆಯರ ತಂಡ ವಾಪಸ್/ ಮಹಿಳೆಯತರಿಗೆ ಭದ್ರತೆ ಒದಗಿಸುವಲ್ಲಿ ರಾಜ್ಯ ಸರ್ಕಾರದ ನಿರಾಸಕ್ತಿ
ತಿರುವನಂತಪುರಂ(ನ.16): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಶನಿವಾರ ಸಂಜೆ 5 ಗಂಟೆಗೆ ತೆರೆದಿದ್ದು ಭಕ್ತಾದಿಗಳು ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಸಂಜೆ 5 ಗಂಟೆಯಿಂದ 41 ದಿನಗಳ ಮಂಡಲ ಪೂಜೆ ಋತುವಿಗೆ ಅಧಿಕೃತ ಚಾಲನೆ ದೊರೆತಿದೆ.
ಅರ್ಚಕ ಮೆಲ್ಸಂತಿ ವಾಸುದೇವನ್ ನಂಪೂದರಿ ದೇವಾಲಯದ ಶ್ರೀಕೋವಿಲ್‌ನ್ನು ಮಹೇಶ್ ಮೊಹನರು ತಂತ್ರಿಗಳ ಸಮ್ಮುಖದಲ್ಲಿ ತೆರೆದರು. 10 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಿ ಬಿಗಿ ಭದ್ರತೆ ಒದಗಿಸಲಾಗಿತ್ತು.
ಶಬರಿಮಲೆ ವಿವಾದ: ಮಹಿಳೆಯರ ಪ್ರವೇಶಕ್ಕಿಲ್ಲ ತಡೆ, ಆದರೆ ಇದೇ ತೀರ್ಪು ಅಂತಿಮವಲ್ಲ
ಸಂಪ್ರದಾಯದ ಪ್ರಕಾರ ಶ್ರೀಕೋವಿಲ್ ನಲ್ಲಿ ಇಂದು ಸಂಜೆ ಯಾವುದೇ ಸಂಪ್ರದಾಯಗಳು ನಡೆಯುವುದಿಲ್ಲ. ಹೊಸ ಮೆಲ್ಸಂತಿಯ ಕಳಶಾಭಿಷೇಕ ಇಂದು ಸಂಜೆ ನೆರವೇರಲಿದೆ.
ಮಹಿಳೆಯರ ಪ್ರವೇಶ ಸಂಬಂಧ ವಿಚಾರಧಾರೆಗಳ ತರ್ಕ ನಡೆಯುತ್ತಲೇ ಇದ್ದರೆ ರಾಜ್ಯ ಸರ್ಕಾರ ಮಾತ್ರ ಮಹಿಳೆಯರಿಗೆ ಸುರಕ್ಷತೆ ಒದಗಿಸುವಲ್ಲಿ ಯಾವುದೇ ಆಸಕ್ತಿ ತಾಳೆದಿಲ್ಲ. ಶವರಿಮಲೆಗೆ 5 ರಿಂದ 50 ವರ್ಷದೊಳಗಿನ ಮಹಿಳೆಯರು ಪ್ರವೇಶ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು ಅದೇ ಆದೇಶ ಕಾಪಾಡಿಕೊಳ್ಳಲು ತಿಳಿಸಿದೆ. ಈ ಆದೇಶ ಸದ್ಯ 7 ಜನ ನ್ಯಾಯಾಧೀಶರ ವಿಸ್ತ್ರತ ಪೀಠದಲ್ಲಿದೆ.
ಅಯ್ಯಪ್ಪ ಭಕ್ತರಲ್ಲಿ ಎದುರಾಗಿದೆ ಕಳವಳ
ಇದೆಲ್ಲದರ ಮಧ್ಯೆ ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿ ನವೆಂಬರ್ 20 ರ ನಂತರ ಶಬರಿಮಲೆಗೆ ಭೇಟಿ ನೀಡುವುದಾಗಿ ಹೇಳಿದ್ದು ರಾಜ್ಯ ಸರ್ಕಾರ ಅಗತ್ಯ ಭದ್ರತೆ ಒದಗಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಭದ್ರತೆ ನೀಡದಿದ್ದರೂ ಶಬರಿಮಲೆಗೆ ಪ್ರವೇಶ ಮಾಡುತ್ತೇನೆ ಎಂದು ಹೇಳಿದ್ದಾರೆ.
ಆಂಧ್ರದ ವಿಜಯವಾಡದಿಂದ ಮಹಿಳೆಯರ ಗುಂಪೊಂದು ಶಬರಿಮಲೆ ಪ್ರವೇಶಕ್ಕೆ ಆಗಮಿಸಿತ್ತು. ಆದರೆ ಪೊಲೀಸರ ಮನವಿ ಮೇರೆಗೆ ಮಹಿಳೆಯರು ಪ್ರವೇಶ ಮಾಡಲು ಪ್ರಯತ್ನ ಮಾಡದೆ ಹಿಂದಿರುಗಿದ್ದಾರೆ.
