Asianet Suvarna News Asianet Suvarna News

1000 ರು.ಗೆ 2 ತಾಸಲ್ಲಿ ಕೊರೋನಾ ಟೆಸ್ಟ್‌!

1000 ರು.ಗೆ 2 ತಾಸಲ್ಲಿ ಕೊರೋನಾ ಟೆಸ್ಟ್‌!| ಕೇರಳದ ಖಾಸಗಿ ಸಂಸ್ಥೆಯಿಂದ ಯಂತ್ರ ಶೋಧ| ಐಸಿಎಂಆರ್‌ ಒಪ್ಪಿಗೆ ನೀಡಿದರೆ ತಯಾರಿಕೆ ಆರಂಭ

Kerala institute develops cheap faster testing kit for coronavirus
Author
Bangalore, First Published Apr 18, 2020, 3:09 PM IST

ತಿರುವನಂತಪುರಂ(ಏ.18): ಕೊರೋನಾ ಪರೀಕ್ಷೆಯಲ್ಲಿ ಜಾಗತಿಕ ಮಟ್ಟದಲ್ಲಿ ಕ್ರಾಂತಿ ಉಂಟುಮಾಡಬಹುದಾದ ಸಂಶೋಧನೆಯೊಂದನ್ನು ಕೇರಳದ ಖಾಸಗಿ ಸಂಸ್ಥೆಯೊಂದು ಮಾಡಿದ್ದು, ಕೇವಲ 1000 ರು. ವೆಚ್ಚದಲ್ಲಿ 2 ತಾಸಿನಲ್ಲಿ ಕೊರೋನಾ ಪರೀಕ್ಷೆ ನಡೆಸುವ ಕಿಟ್‌ ಕಂಡುಹಿಡಿದಿದೆ. ತಿರುವನಂತಪುರಂನ ಶ್ರೀ ಚಿತ್ರಾ ತಿರುನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಮೆಡಿಕಲ್‌ ಸೈನ್ಸಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯ ಡಾ.ಅನೂಪ್‌ ತೆಕ್ಕುವೀತಿಲ್‌ ಎಂಬ ಹಿರಿಯ ವಿಜ್ಞಾನಿ ಮೂರು ವಾರಗಳಲ್ಲಿ ಈ ಯಂತ್ರ ಆವಿಷ್ಕರಿಸಿದ್ದಾರೆ.

ಚಿತ್ರಾ ಜೀನ್‌ಲ್ಯಾಂಪ್‌-ಎನ್‌ ಹೆಸರಿನ ಈ ಯಂತ್ರದಲ್ಲಿ ಶೇ.100ರಷ್ಟುಕರಾರುವಾಕ್ಕಾದ ಫಲಿತಾಂಶ ಬರುತ್ತದೆ. ಅಲಪ್ಪುಳಾದ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ಈ ಯಂತ್ರದ ಮೂಲಕ ಕೊರೋನಾ ಟೆಸ್ಟಿಂಗ್‌ಗಳನ್ನು ನಡೆಸಲಾಗಿದೆ. ಇದನ್ನು ಬಳಸಿದರೆ ಸೋಂಕಿತ ವ್ಯಕ್ತಿಯ ಗಂಟಲ ದ್ರವವನ್ನು ಸಂಗ್ರಹಿಸುವುದರಿಂದ ಹಿಡಿದು ಪರೀಕ್ಷೆಯ ಫಲಿತಾಂಶ ನೀಡಲು ಕೇವಲ 2 ತಾಸು ಸಾಕು. 2.5 ಲಕ್ಷ ರು.ನ ಯಂತ್ರ ಇದಾಗಿದ್ದು, ಒಂದು ಬ್ಯಾಚ್‌ನಲ್ಲಿ 30 ಸ್ಯಾಂಪಲ್‌ಗಳನ್ನು ಪರೀಕ್ಷಿಸಬಹುದು. ಯಂತ್ರದೊಳಗೆ ಸ್ಯಾಂಪಲ್‌ ಇರಿಸಿದ ಕೇವಲ 10 ನಿಮಿಷದಲ್ಲಿ ಫಲಿತಾಂಶ ಸಿಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಸದ್ಯ ಕೊರೋನಾ ಪರೀಕ್ಷೆಗೆ ಕನಿಷ್ಠ 1 ದಿನ ಹಿಡಿಯುತ್ತದೆ. ಒಂದು ಪರೀಕ್ಷೆಗೆ 4500 ರು. ತಗಲುತ್ತದೆ. ಕೇರಳದ ಸಂಸ್ಥೆ ಕಂಡುಹಿಡಿದ ಕಿಟ್‌ಗೆ ಐಸಿಎಂಆರ್‌ ಒಪ್ಪಿಗೆ ದೊರೆತರೆ ಲೈಸನ್ಸ್‌ ಪಡೆದು ಉತ್ಪಾದನೆ ಆರಂಭಿಸಬಹುದಾಗಿದೆ.

Follow Us:
Download App:
  • android
  • ios