ಮುಂಬೈ: ಭಾರತ - ಪಾಕ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಾಕ್‌ಗೆ ಸಂಚರಿಸುತ್ತಿದ್ದ ಎಲ್ಲ ವಿಮಾನಯಾನ ಸೇವೆಗಳು ರದ್ದಾಗಿವೆ. ಪುಲ್ವಾಮಾ ಉಗ್ರ ದಾಳಿ ನಂತರ ಭಾರತ ವಾಯುಸೇನೆ ಪಾಕ್ ನೆಲದಲ್ಲಿದ್ದ ಉಗ್ರರ ನೆಲೆ ಮೇಲೆ ದಾಳಿ ನಡೆಸಿತ್ತು. 

ಇದರಿಂದಾಗಿ ಪರಸ್ಪರ ದೇಶಗಳ ನಡುವೆ ನಡುವೆ ಯುದ್ದ ಸನ್ನಿವೇಶ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಪಾಕ್‌ಗೆ ಬರುತ್ತಿದ್ದ ಹಾಗೂ ಹೋಗುತ್ತಿದ್ದ ದುಬೈ, ಅಬುದಾಬಿ, ಕತಾರ, ಗಲ್ಫ್ ಮತ್ತು ಅಪಘಾನಿಸ್ತಾನದ ಎಲ್ಲ ವಿಮಾನ ಯಾನ ಸೇವೆಗಳನ್ನು ಆಯಾ ರಾಷ್ಟ್ರಗಳು ರದ್ದುಗೊಳಿಸಿವೆ. 

ಈ ಬಗ್ಗೆ ತಮ್ಮ ಪ್ರಯಾಣಿಕರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ರವಾನೆ ಮಾಡಿರುವ ವಿಮಾನ ಯಾನ ಸಂಸ್ಥೆಗಳು ಫೆ.27 ಮತ್ತು 28 ರಂದು ಪಾಕ್‌ನ ಎಲ್ಲ ವಿಮಾನ ಸೇವೆ ರದ್ದುಗೊಳಿಸಿದ್ದು, ಪರಿಸ್ಥಿತಿ ಆಧರಿಸಿ ಮುಂದಿನ ಕ್ರಮ ಎಂದು ಸ್ಪಷ್ಟನೆ ನೀಡಿವೆ.