ಕಾಶ್ಮೀರ(ಅ.30):   ಕಾಶ್ಮೀರಿ ಪಂಡಿತರ ಪರ ಧನಿ ಎತ್ತಿದ, ಆರ್ಟಿಕಲ್ 370 ರದ್ದು ಮಾಡಿದ ಹಾಗೂ ಕೇಂದ್ರ ಸರ್ಕಾರ ಹಲವು ನಿರ್ಧಾರಗಳಿಗೆ ಬೆಂಬಲವಾಗಿ ನಿಂತಿದ್ದ ಕಾಶ್ಮೀರಿ ಪಂಡಿತರು ಇದೀಗ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಯಾರೂ ಬೇಕಾದರೂ ಭೂಮಿ ಖರೀದಿಸಬಹುದು ಅನ್ನೋ ಕೇಂದ್ರದ ಆದೇಶ ಇದೀಗ ಕಾಶ್ಮೀರಿ ಪಂಡಿತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಜಮ್ಮು - ಕಾಶ್ಮೀರದಲ್ಲಿ ಎಲ್ಲಾ ಭಾರತೀಯರಿಗೆ ಭೂಮಿ ಖರೀದಿಗೆ ಅವಕಾಶ, ಕೇಂದ್ರದ ಮಹತ್ವದ ಹೆಜ್ಜೆ!.

ಹಿಂದಿನ ಸರ್ಕಾರಗಳು ನಮ್ಮ ಭೂಮಿಯನ್ನು ಮರಳಿ ನಮಗೆ ನೀಡುವ ಯಾವುದೇ ಪ್ರಯತ್ನಗಳನ್ನು ನಡೆಸಲಿಲ್ಲ. ಬದಾಗಿ ನಮ್ಮ ಮೇಲೆ ದೌರ್ಜನ್ಯ ನಡೆಸಿತು. ಇದೀಗ ಬಿಜೆಪಿ ಸರ್ಕಾರ ಭೂ ಕಾನೂನು ತಿದ್ದುಪಡಿ ತರುವ ಮೂಲಕ ನಮ್ಮನ್ನು ಶಾಶ್ವತವಾಗಿ ಗಡೀಪಾರು ಮಾಡುವ ಯೋಚನೆಯಲ್ಲಿದೆ ಎಂದು ಕಾಶ್ಮೀರ ಪಂಡಿತ್ ಸಮಿತಿ ಅಸಮಾಧಾನ ಹೊರಹಾಕಿದೆ.

ಗುಂಡಿಟ್ಟು ಮೂವರು ಬಿಜೆಪಿ ನಾಯಕರ ಹತ್ಯೆ,  ಸೇನಾಪಡೆ ದೌಡು.

ಕಳೆದ 31 ವರ್ಷಗಳಿಂದ ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರು ತಮ್ಮ ಭೂಮಿಗಾಗಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಮೇಲೆ ಆಕ್ರಮಣ, ಮಾರಣಹೋಮ ಮಾಡಿ ಭೂಮಿ ಕಬಳಿಸಲಾಗಿದೆ. ಕಾಶ್ಮೀರದ ಮೂಲ ಕಾಶ್ಮೀರಿ ಪಂಡಿತರು ನಿರಾಶ್ರಿತ ಕೇಂದ್ರಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿ ಕಾಶ್ಮೀರಿ ಪಂಡಿತರ ಭೂಮಿ ಮರಳಿ ನೀಡಿದ ಬಳಿಕ ಜಮ್ಮು ಮತ್ತುಕಾಶ್ಮೀರ ಭೂ ಕಾನೂನಿಗೆ ತಿದ್ದುಪಡಿ ಉತ್ತಮ ಎಂದು ನಿರಾಶ್ರಿತರ ಪುನರ್ವವಸತಿ ಸಮಿತಿ ಮುಖ್ಯಸ್ಥ ಸತೀಶ್ ಮಹಲ್ದಾರ್ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ಭೂ ಕಾನೂನು ತಿದ್ದುಪಡಿಯಿಂದ ಕಾಶ್ಮೀರ ಪಂಡಿತರ ಭೂಮಿ, ದೇವಸ್ಥಾನ, ಮಂದಿರ ನಮ್ಮ ಕುರುಹುಗಳು, ಇತಿಹಾಸ ನಾಶವಾಗಲಿದೆ. ಮೊದಲು ಕಾಶ್ಮೀರ ಪಂಡಿತರ ಜೀವನಕ್ಕಾಗಿ ನಮ್ಮ ಭೂಮಿ ಮರಳಿಸಲಿದೆ. ಬಳಿಕ ಭೂ ಕಾನೂನು ತಿದ್ದುಪಡಿ ಮಾಡಲಿ ಎಂದು ಕಾಶ್ಮೀರಿ ಪಂಡಿತ್ ಸಮಿತಿ ಆಗ್ರಹಿಸಿದೆ.