ಕಾಶ್ಮೀರ ಭಾರತದ ಆಂತರಿಕ ವಿಷಯ| ಪಾಕ್‌ ಜತೆ ಸೇರಿ ಮೇಲೆ ದಾಳಿ ಮಾಡಲ್ಲ|  ಕುಖ್ಯಾತ ಉಗ್ರಗಾಮಿ ಸಂಘಟನೆ ತಾಲಿಬಾನ್‌ ಘೋಷಣೆ

ನವದೆಹಲಿ(ಮೇ.19): ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ವಿಷಯವೆಂದು ಬಿಂಬಿಸಲು ಪಾಕಿಸ್ತಾನ ಯತ್ನಿಸುತ್ತಿರುವಾಗಲೇ, ಕಾಶ್ಮೀರ ಭಾರತದ ಆಂತರಿಕ ವಿಚಾರ. ಕಾಶ್ಮೀರದಲ್ಲಿನ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಗೆ ತಾನು ಕೈಜೋಡಿಸುವುದಿಲ್ಲ ಎಂದು ಕುಖ್ಯಾತ ಉಗ್ರಗಾಮಿ ಸಂಘಟನೆ ತಾಲಿಬಾನ್‌ ಘೋಷಿಸಿದೆ.

ಭಯೋತ್ಪಾದನಾ ಚಟುವಟಿಕೆ ನಿಲ್ಲಿಸಿ; ಪಾಕ್‌ಗೆ ಎಚ್ಚರಿಕೆ ನೀಡಿದ ಭಾರತೀಯ ವಾಯುಸೇನೆ ಮುಖ್ಯಸ್ಥ!

ಕಾಶ್ಮೀರದಲ್ಲಿ ತಾಲಿಬಾನ್‌ ಜಿಹಾದಿ ಕೃತ್ಯಕ್ಕೆ ಕೈಜೋಡಿಸುತ್ತಿದೆ ಎಂಬುದು ಸುಳ್ಳು. ಬೇರೆ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ನಾವು ಮೂಗು ತೂರಿಸುವುದಿಲ್ಲ ಎಂದು ತಾಲಿಬಾನ್‌ ಸಂಘಟನೆಯ ವಕ್ತಾರ ಸುಹೇಲ್‌ ಶಹೀನ್‌ ಸೋಮವಾರ ಸಂಜೆ ಟ್ವೀಟ್‌ ಮಾಡಿದ್ದಾರೆ.

ಮೊದಲು ಫೇಲ್ ಆದ ನಿನ್ನ ದೇಶ ನೋಡ್ಕೋ: ಕಾಶ್ಮೀರ ಎಂದ ಅಫ್ರಿದಿಗೆ ಬಡಿದ ರೈನಾ!

ಭಾರತಕ್ಕೆ ಸಂಬಂಧಿಸಿದ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ವರದಿಗಳನ್ನು ದೃಢೀಕರಿಸಲು ಭಾರತವು ಪರೋಕ್ಷವಾಗಿ ಕೆಲಸ ಮಾಡಿದ ನಂತರ ತಾಲಿಬಾನ್ ವಕ್ತಾರರು ಈ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ ಎಂದು ಕಾಬೂಲ್ ಮತ್ತು ದೆಹಲಿ ಮೂಲದ ರಾಜತಾಂತ್ರಿಕರು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.