ಇಂದಿರಾ ಜೈಸಿಂಗ್‌ರಂಥವರು ಅತ್ಯಾಚಾರಿಗಳಿಗೆ ಜನ್ಮ ನೀಡುತ್ತಾರೆ| ರೇಪಿಸ್ಟ್‌ಗಳನ್ನು ಕ್ಷಮಿಸಿ ಎಂದಿದ್ದಕ್ಕೆ ಕಂಗನಾ ವಾಗ್ದಾಳಿ

ಮುಂಬೈ[ಜ.24]: ‘ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳನ್ನು, ಸಂತ್ರಸ್ತೆಯ ತಂದೆ-ತಾಯಿ ಕ್ಷಮಿಸಬೇಕು’ ಎಂದು ಹೇಳಿಕೆ ನೀಡಿದ್ದ ಸುಪ್ರೀಂ ಕೋರ್ಟ್‌ ವಕೀಲೆ ಇಂದಿರಾ ಜೈಸಿಂಗ್‌ ಅವರನ್ನು ನಟಿ ಕಂಗನಾ ರಾಣಾವತ್‌ ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿಮಗೆಷ್ಟು ಧೈರ್ಯ?: ತಾಯಿಯ ಕೋಪದ ಕಂಗಳಲ್ಲಿ ಕಂಡಳು ನಿರ್ಭಯಾ!

‘ಇಂದಿರಾ ಜೈಸಿಂಗ್‌ರಂಥವರು ಅತ್ಯಾಚಾರಿಗಳಿಗೆ ಜನ್ಮ ನೀಡುತ್ತಾರೆ. ನಿರ್ಭಯಾ ಅತ್ಯಾಚಾರಿಗಳ ಜತೆಗೇ 4 ದಿನದ ಮಟ್ಟಿಗೆ ಇಂದಿರಾರನ್ನೂ ಜೈಲಿನಲ್ಲಿಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಮಾತನಾಡಿದ ಕಂಗನಾ, ‘ಇಂದಿರಾ ಜೈಸಿಂಗ್‌ರನ್ನು ನಿರ್ಭಯಾ ಅತ್ಯಾಚಾರಿಗಳ ಜತೆ 4 ದಿನ ಜೈಲಿನಲ್ಲಿಡಬೇಕು. ಅತ್ಯಾಚಾರಿಗಳ ಮೇಲೆ ಕರುಣೆ ತೋರುತ್ತಾರೆ ಎಂದರೆ ಎಂಥ ಜನ ಇವರು? ಇಂತಹ ಅತ್ಯಾಚಾರಿಗಳಿಗೆ ಇಂದಿರಾರಂಥವರೇ ಜನ್ಮ ನೀಡುತ್ತಾರೆ’ ಎಂದು ಹಿಡಿಶಾಪ ಹಾಕಿದರು.

View post on Instagram

‘ಇಂತಹ ರೇಪಿಸ್ಟ್‌ಗಳನ್ನು ಗುಟ್ಟಾಗಿ ನೇಣಿಗೇರಿಸಬಾರದು. ಇವರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು’ ಎಂದು ನಟಿ ಆಗ್ರಹಿಸಿದರು. ಕಂಗನಾ ಹೇಳಿಕೆಯನ್ನು ನಿರ್ಭಯಾ ತಾಯಿ ಆಶಾದೇವಿ ಸ್ವಾಗತಿಸಿದ್ದಾರೆ. ‘ಕೊನೆಗೂ ಒಬ್ಬರು ನನ್ನ ಜತೆ ನಿಂತರಲ್ಲ’ ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ.