ನವದೆಹಲಿ(ಮೇ.14): ಕೊರೋನಾ ವೈರಸ್‌ ಉಪಟಳ ಮುಗಿಯುವವರೆಗೆ ಅಥವಾ ಮುಂದಿನ ಆದೇಶದವರೆಗೆ ವಕೀಲರು ಕಪ್ಪು ಕೋಟ್‌ ಹಾಗೂ ಉದ್ದ ಗೌನ್‌ಗಳನ್ನು ವಿಚಾರಣೆ ವೇಳೆ ಧರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಅಧಿಸೂಚನೆ ಹೊರಡಿಸಿದೆ.

ಈ ರೀತಿಯ ವಸ್ತ್ರ ಧರಿಸುವುದರಿಂದ ಕೊರೋನಾ ವೈರಸ್‌ ಸುಲಭವಾಗಿ ಹಬ್ಬುವ ಸಾಧ್ಯತೆ ಇದೆ ಈ ನಿಟ್ಟಿನಲ್ಲಿ  ಹೊಸ ಸಮವಸ್ತ್ರ ಸಂಹಿತೆಯನ್ನು ಶೀಘ್ರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಎಂದು ಬುಧವಾರ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಹೇಳಿದ್ದರು.

ಅದಾದ ಕೆಲವೇ ತಾಸಿನಲ್ಲಿ ಅಂದರೆ ಸಂಜೆ ವೇಳೆಗೆ ಸುಪ್ರೀಂಕೋರ್ಟ್‌ ಅಧಿಸೂಚನೆ ಹೊರಡಿಸಿತು. ಶ್ವೇತವರ್ಣದ ಪ್ಲೇನ್‌ ಶರ್ಟ್‌/ಬಿಳಿಯ ಸಲ್ವಾರ್‌- ಕಮೀಜ್‌/ಬಿಳಿ ಸೀರೆ ಹಾಗೂ ಬಿಳಿ ಬಣ್ಣದ ನೆಕ್‌ಬ್ಯಾಂಡ್‌ ಧರಿಸುವಂತೆ ವಕೀಲರಿಗೆ ಸೂಚಿಸಲಾಗಿದೆ.