ಜೆಎನ್‌ಯುನಲ್ಲಿ ಚುನಾವಣೆಯಲ್ಲಿ ಲೆಫ್ಟ್ ವಿದ್ಯಾರ್ಥಿ ಘಟಕ ಕ್ಲೀನ್ ಸ್ಪೀಪ್, ಎಬಿವಿಪಿಗೆ ಹಿನ್ನಡೆ!
ಜೆಎನ್‌ಯು ವಿದ್ಯಾರ್ಥಿ ಘಟಕದ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಮತ ಏಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಎಬಿವಿಗೆ ಫಲಿತಾಂಶ ಹೊರಬಿದ್ದಾಗ ನಿರಾಸೆಯಾಗಿದೆ.
ನವದೆಹಲಿ(ಮಾ.24) ದೆಹಲಿ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಚುನಾವಣೆಯಲ್ಲಿ ಬಿಜೆಪಿ ಬೆಂಬಲದ ವಿದ್ಯಾರ್ಥಿ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್( ಎಬಿವಿಪಿ)ಗೆ ಹಿನ್ನಡೆಯಾಗಿದೆ. ಎಡರಂಗ ವಿದ್ಯಾರ್ಥಿ ಘಟಕ ಅಧ್ಯಕ್ಷ ಸೇರಿದಂತೆ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡಿದೆ. ಮತ ಏಣಿಕೆ ವೇಳೆ ಮುನ್ನಡೆ ಕಾಯ್ದುಕೊಂಡಿದ್ದ ಎಬಿವಿಪಿ ಫಲಿತಾಂಶದ ಹೊರಬಿದ್ದಾಗ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ. ಲೆಫ್ಟ್ ವಿದ್ಯಾರ್ಥಿ ಘಟಕದ ನಾಯಕ ಧನಂಜಯ್ 3100 ಮತಗಳನ್ನು ಪಡೆಯುವ ಮೂಲಕ ಜೆನ್‌ಯು ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನದ ಜೊತೆಗೆ ಉಪಾಧ್ಯಕ್ಷ, ಜಂಟಿ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಗಳನ್ನೂ ಲೆಫ್ಟ್ ವಿದ್ಯಾರ್ಥಿಗ ಘಟಕದ ಸಂಘಟನೆಗಳು ಗೆದ್ದುಕೊಂಡಿದೆ. ಜೆನ್‌ಯು ವಿದ್ಯಾರ್ಥಿ ಘಟಕದ ಅಧ್ಯಕ್ಷ ಚುನಾವಣೆಯಲ್ಲಿ ಧನಂಜಯ್ ಗೆಲುವು ದಾಖಲಿಸಿದ್ದರೆ, ಉಪಾಧ್ಯಕ್ಷ ಚುನಾವಣೆಯಲ್ಲಿ ಎಡರಂಗದ ಅವಿಜಿತ್ ಘೋಷ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರೆ. BAPSA ಘಟಕದ ಪ್ರಿಯಾಂಶ್ ಆರ್ಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಮೊಹಮ್ಮದ್ ಸಾಜಿದ್ ಆಯ್ಕೆಯಾಗಿದ್ದಾರೆ.
ಕೋವಿಡ್ ಕಾರಣದಿಂದ ಕಳೆದ ನಾಲ್ಕು ವರ್ಷಗಳಿಂದ ಜೆನ್‌ಯುನಲ್ಲಿ ಚುನಾವಣೆ ನಡೆದಿರಿಲ್ಲ. ಸುದೀರ್ಘ ವರ್ಷಗಳ ಬಳಿಕ ನಡೆಯುತ್ತಿರುವ ಈ ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಎಡಪಂಥೀಯ ವಿದ್ಯಾರ್ಥಿ ಘಟಕಗಳಾದ ಆಲ್ ಇಂಡಿಯಾ ಸ್ಟುಡೆಂಟ್ ಆಸೋಸಿಯೇಶನ್(AISA) ಡೆಮಾಕ್ರಟಿಕ್ ಸ್ಟುಡೆಂಟ್ ಫೆಡರೇಶನ್(DSF), ಸ್ಟುಡೆಂಟ್ ಫೆಡರೇಶನ್ ಆಫ್ ಇಂಡಿಯಾ(SFI) ಆಲ್ ಇಂಡಿಯಾ ಸ್ಟುಡೆಂಟ್ ಫೆಡರೇಶನ್(AISF) ವಿದ್ಯಾರ್ಥಿ ಸಂಘಟನೆಗಳು ಜಂಟಿಯಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವಿರುದ್ದ ಸ್ಪರ್ಧಿಸಿತ್ತು.
4 ವರ್ಷಗಳ ಬಳಿಕ ನಡೆದ ಜವಾಹರ್‌ಲಾಲ್ ನೆಹರೂ ವಿದ್ಯಾರ್ಥಿ ಘಟಕ ಚುನಾಣೆಯಲ್ಲಿ ಶೇಕಡಾ 73ರಷ್ಟು ಮತದಾನವಾಗಿತ್ತು. 12 ವರ್ಷಗಳಲ್ಲೇ ಗರಿಷ್ಠ ಮತದಾನ ದಾಖಲಾಗಿತ್ತು. 7,700 ವಿದ್ಯಾರ್ಥಿಗಳು ತಮ್ಮ ಹಕ್ಕು ಚಲಾಯಿಸಿದ್ದರು. SFI ವಿದ್ಯಾರ್ಥಿ ಘಟಕ ಜೆನ್‌ಯುನಲ್ಲಿ 22 ಬಾರಿ ವಿದ್ಯಾರ್ಥಿ ಚುನಾವಣೆಯಲ್ಲಿ ಅಧ್ಯಕ್ಷೀಯ ಸ್ಥಾನ ಗೆದ್ದುಕೊಂಡಿದೆ. ಇನ್ನು ಆಲ್ ಇಂಡಿಯಾ ಸ್ಟುಡೆಂಟ್ ಅಸೋಸಿಯೇಶನ್ 11 ಬಾರಿ ಅಧ್ಯಕ್ಷ ಸ್ಥಾನ ಗೆದ್ದುಕೊಂಡಿದೆ.