Jharkhand election results: ಎಕ್ಸಿಟ್‌ ಪೋಲ್‌ಗಳ ನಿರೀಕ್ಷೆಯನ್ನೆಲ್ಲಾ ಸುಳ್ಳು ಮಾಡಿದ ಜೆಎಂಎಂ ಮೂರನೇ ಬಾರಿಗೆ ಜಾರ್ಖಂಡ್‌ನಲ್ಲಿ ಅಧಿಕಾರ ಹಿಡಿಯಲು ಸಜ್ಜಾಗಿದೆ. ಜೆಎಂಎಂ ಹಾಗೂ ಕಾಂಗ್ರೆಸ್‌ನ ಇಂಡಿಯಾ ಒಕ್ಕೂಟ 50 ಸೀಟ್‌ಗಳಲ್ಲಿ ಮುನ್ನಡೆ ಕಂಡಿದ್ದು, ಬಹುಮತಕ್ಕೆ 42 ಮ್ಯಾಜಿಕ್‌ ನಂಬರ್‌ ಆಗಿದೆ.

ನವದೆಹಲಿ (ನ.23): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಈ ವರ್ಷದ ಆರಂಭದಲ್ಲಿ ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೆನ್‌ ಬಂಧನಕ್ಕೆ ಒಳಗಾಗಿದ್ದರು. ಅದಾದ ಬಳಿಕ ಜಾರ್ಖಂಡ್‌ ರಾಜ್ಯದ ರಾಜಕೀಯದಲ್ಲಿ ಬಹಳಷ್ಟು ಬದಲಾವಣೆಗಳಾದರು. ಭ್ರಷ್ಟಾಚಾರದ ನಿರಂತರ ಆರೋಪಗಳನ್ನು ಬಿಜೆಪಿ ಮಾಡುತ್ತಾ ಬಂದಿದ್ದರೂ, ವಿಧಾನಸಭೆ ಚುನಾವಣೆಯಲ್ಲಿ ಜಾರ್ಖಂಡ್‌ ಮುಕ್ತು ಮೋರ್ಚಾ ನೇತೃತ್ವದ ಒಕ್ಕೂಟ ಇಡೀ ಫಲಿತಾಂಶದ ದಿಕ್ಕನ್ನೇ ಬದಲಿಸಿದೆ.ಕ್ಸಿಟ್‌ ಪೋಲ್‌ಗಳ ನಿರೀಕ್ಷೆಯನ್ನೆಲ್ಲಾ ಸುಳ್ಳು ಮಾಡಿದ ಜೆಎಂಎಂ ಮೂರನೇ ಬಾರಿಗೆ ಜಾರ್ಖಂಡ್‌ನಲ್ಲಿ ಅಧಿಕಾರ ಹಿಡಿಯಲು ಸಜ್ಜಾಗಿದೆ. ಜೆಎಂಎಂ ಹಾಗೂ ಕಾಂಗ್ರೆಸ್‌ನ ಇಂಡಿಯಾ ಒಕ್ಕೂಟ 50 ಸೀಟ್‌ಗಳಲ್ಲಿ ಮುನ್ನಡೆ ಕಂಡಿದ್ದು, ಬಹುಮತಕ್ಕೆ 42 ಮ್ಯಾಜಿಕ್‌ ನಂಬರ್‌ ಆಗಿದೆ.

ಟ್ರೆಂಡ್ಸ್‌ಗಳ ಪ್ರಕಾರ ಜೆಎಂಎಂ ಹಾಗೂ ಕಾಂಗ್ರೆಸ್‌ ಒಕ್ಕೂಟ ಜಾರ್ಖಂಡ್‌ನ ಪ್ರಮುಖ ವಲಯಗಳಾದ ಚೋಟಾ ನಾಗ್ಪುರ, ಕೊಲ್ಹಾನ್‌, ಕೊಯ್ಲಾಂಚಲ್‌, ಪಲಮು ಮತ್ತು ಶಾಂತಲ್‌ ಪರಗಣದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 2019ರ ವಿಧಾನಸಭೆ ಚುನಾವಣೆಯಲ್ಲಿ ಜೆಎಂಎಂ-ಕಾಂಗ್ರೆಸ್‌-ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಒಕ್ಕೂಟ 47 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಜೆಎಂಎಂ 2014ರಲ್ಲಿ 19 ಸೀಟ್‌ ಗೆದ್ದಿದ್ದರೆ, 2019ರಲ್ಲಿ ಏಕಾಂಗಿಯಾಗಿ 30 ಸೀಟ್‌ ಗೆಲುವು ಕಂಡಿತ್ತು. ಬಿಜೆಪಿ 81 ಕ್ಷೇತ್ರಗಳ ರಾಜ್ಯದಲ್ಲಿ ಕೇವಲ 25 ಸೀಟ್‌ಗಳಲ್ಲಿ ಜಯ ಸಾಧಿಸಿತ್ತು.

ಅಷ್ಟಕ್ಕೂ ಈ ಚುನಾವಣೆಯಲ್ಲಿ ವರ್ಕ್‌ ಔಟ್‌ ಆದ ವಿಚಾರವನ್ನು ನೋಡೋದಾದರೆ, ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವು ನಾಯಕರು ಸೋರೆನ್ ಸರ್ಕಾರದ ಮೇಲೆ ದಾಳಿ ಮಾಡಲು ಬಾಂಗ್ಲಾದೇಶದಿಂದ "ಅಕ್ರಮ ವಲಸೆ" ವಿಚಾರವನ್ನು ಪ್ರಚೋದನೆ ಮಾಡಿದ್ದರು. ಜಾರ್ಖಂಡ್‌ನ 'ಮಾತಟಿ, ಬೇಟಿ ಮತ್ತು ರೋಟಿ' (ಭೂಮಿ, ಮಗಳು ಮತ್ತು ಆಹಾರ) ಅಪಾಯದಲ್ಲಿದೆ ಎಂದು ಬಿಜೆಪಿ ಚುನಾವಣಾ ಸಮಾವೇಶಗಳಲ್ಲಿ ಹೇಳಿತ್ತು. ನುಸುಳುಕೋರರು ಬುಡಕಟ್ಟು ಜನಾಂಗದ ಜಲ್‌, ಜಮೀನ್‌ ಮತ್ತು ಜಂಗಲ್‌ (ನೀರು, ಭೂಮಿ ಮತ್ತು ಕಾಡು) ಕಸಿದುಕೊಳ್ಳುತ್ತಿದ್ದಾರೆ ಎಂದೂ ಹೇಳಿಕೆ ನೀಡಿತ್ತು.

ಇನ್ನೊಂದೆಡೆ, ಜೆಎಂಎಂ ತನ್ನ ಕಲ್ಯಾಣ ಯೋಜನೆಗಳನ್ನು ಎದುರಿಗಿಟ್ಟು ಮತ ಕೇಳಿತ್ತು. ಅದರಲ್ಲೂ ಮುಖ್ಯವಾಗಿ, ಮುಖ್ಯಮಂತ್ರಿ ಮೈಯಾ ಸಮ್ಮಾನ್ ಯೋಜನೆ, ಮತ್ತು ಆದಿವಾಸಿ ಅಸ್ಮಿತೆ (ಬುಡಕಟ್ಟು ಹೆಮ್ಮೆ) ಪ್ರಚಾರದಲ್ಲಿ ಬಳಸಿಕೊಂಡಿತು. ಮೈಯಾ ಸಮ್ಮಾನ್‌ ಯೋಜನೆಯ ಅಡಿಯಲ್ಲಿ ಅರ್ಹ ಮಹಿಳಾ ಫಲಾನುಭವಿಗಳಿಗೆ 1 ಸಾವಿರ ರೂಪಾಯಿಯನ್ನು ಸರ್ಕಾರ ಪ್ರತಿ ತಿಂಗಳು ನೀಡುತ್ತಿದೆ.

ಜೆಎಂಎಂನ ದೊಡ್ಡ ಗೆಲುವುಗೆ ಕಾರಣವಾಗಿದ್ದೇ ಮಹಿಳಾ ಮತದಾರರು. ಅದರಲ್ಲೂ ಜಾರ್ಖಂಡ್‌ನಲ್ಲಿ 81 ಸೀಟ್‌ಗಳ ಪೈಕಿ 68 ಸೀಟ್‌ಗಳಲ್ಲಿ ಮಹಿಳೆಯರೇ ಹೆಚ್ಚಿನ ಮತದಾನ ಮಾಡಿದ್ದು ಜೆಎಂಎಂಗೆ ಲಾಭ ತಂದಿದೆ ಅನ್ನೋದು ಚುನಾವಣಾ ಆಯೋಗದ ಡೇಟಾಗಳಿಂದ ಗೊತ್ತಾಗಿದೆ. ಚುನಾವಣೆಯ ಹಾದಿಯಲ್ಲಿ ಜೆಎಂಎಂ ಪಾಲಿಗೆ ಗಮನ ಕೇಂದ್ರೀಕರಿಸುವುದು ಸುಲಭವಾಗಿರಲಿಲ್ಲ. ಹೇಮಂತ್‌ ಸೊರೆನ್‌ ಬಂಧನಕ್ಕೆ ಒಳಗಾದರೆ, ಕೆಲವು ಪಕ್ಷಾಂತರಗಳು ಕೂಡ ನಡೆದವು. ಹೇಮಂತ್‌ ಸೊರೆನ್‌ ಅತ್ತಿಗೆ ಸೀತಾ ಸೊರೆನ್‌ ಜೆಎಂಎಂ ತೊರೆದು ಬಿಜೆಪಿ ಸೇರಿದ್ದರು.

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿಯಿಂದ ಜನವರಿ 31 ರಂದು ಬಂಧಿಸುವ ಸ್ವಲ್ಪ ಮೊದಲು ಸೋರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ರಾಜ್ಯ ಚುಕ್ಕಾಣಿಯನ್ನು ಪಕ್ಷದ ಹಿರಿಯ ನಾಯಕ ಚಂಪೂ ಸೊರೆನ್‌ಗೆ ನೀಡಿದ್ದರು. ಹೈಕೋರ್ಟ್‌ನಿಂದ ಜಾಮೀನು ಪಡೆದ ನಂತರ ಜುಲೈನಲ್ಲಿ ಹೇಮಂತ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಏಕ್‌ನಾಥ್‌ ಶಿಂಧೆ-ದೇವೇಂದ್ರ ಫಡ್ನವಿಸ್‌, ಯಾರಾಗ್ತಾರೆ ಮಹಾರಾಷ್ಟ್ರ ಸಿಎಂ?

ಆದರೆ, ಇದು ಚಂಪೈ ಸೊರೆನ್‌ಗೆ ಇಷ್ಟವಾಗಿರಲಿಲ್ಲ. ಕೊನೆಗೆ ಅವರು ಜೆಎಂಎಂಅನ್ನು ತೊರೆದು ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡೆಯಾದರು. ಈ ವಿಷಯವನ್ನೂ ಕೂಡ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿತು. ಹಿರಿಯ ಬುಡಕಟ್ಟು ನಾಯಕನನ್ನು ಜೆಎಂಎಂ ತನ್ನ ಪಕ್ಷದಲ್ಲಿ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಪ್ರಸ್ತಾಪ ಮಾಡಿತು.

ಮಹಾರಾಷ್ಟ್ರದಲ್ಲಿ ಎನ್‌ಡಿಎ ಡಬಲ್‌ ಸೆಂಚುರಿ, ಜಾರ್ಖಂಡ್‌ನಲ್ಲಿ ಬಹುಮತದತ್ತ ಐಎನ್‌ಡಿಐಎ!

ಮುಖ್ಯಮಂತ್ರಿ ಬಂಧನದ ಬಳಿಕ ಅನುಕಂಪದ ಅಲೆ ಜೆಎಂಎಂಗೆ ವರ್ಕ್‌ಔಟ್‌ ಆಗಿದೆ. ಚುನಾವಣೆ ವೇಳೆ ಇದು ಹೇಮಂತ್‌ ಸೊರೆನ್‌ ವರ್ಸಸ್‌ ಬಿಜೆಪಿ ಎಂದೇ ಆಗಿತ್ತು. ಬಿಜೆಪಿಯು ಜೆಎಂಎಂನ ಹಿರಿಯ ಬುಡಕಟ್ಟು ನಾಯಕನಿಗೆ ಕಿರುಕುಳ ನೀಡುತ್ತಿದೆ ಎನ್ನುವ ಅಂಶವನ್ನು ಆಡಳಿತಾರೂಢ ಪಕ್ಷ ಸೂಕ್ತವಾಗಿ ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ ಅನ್ನೋದು ಫಲಿತಾಂಶದಿಂದ ಗೊತ್ತಾಗಿದೆ.