Asianet Suvarna News Asianet Suvarna News

ರಾಮ ಮಂದಿರ ಪ್ರಾಣಪ್ರತಿಷ್ಠೆ ದಿನ ಅಜ್ಜಿಯ ವೃತ ಅಂತ್ಯ, ಏನದು 30 ವರ್ಷದ ಹಿಂದೆ ತೆಗೆದುಕೊಂಡ ಪ್ರತಿಜ್ಞೆ!

ಶತಶತಮಾನಗಳಿಂದ ಕಾಯುತ್ತಿದ್ದ ರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ಇದಕ್ಕಾಗಿ ಹಲವರು ಪ್ರಾಣ ತೆತ್ತಿದ್ದಾರೆ. ಮತ್ತೆ ಹಲವರು ವೃತ, ಪೂಜೆ, ಧ್ಯಾನ, ತಪಸ್ಸಿನ ಮೂಲಕ ಕಾರ್ಯಸಿದ್ಧಿದೆ ತಮ್ಮದೇ ಕೊಡುಗೆ ನೀಡಿದ್ದರೆ. ಹೀಗೆ 30 ವರ್ಷಗಳ ಹಿಂದೆ ಧನಾಬಾದ್‌ನ ಸರಸ್ವತಿ ದೇವಿ ಪ್ರತಿಜ್ಞೆ ತೆಗೆದುಕೊಂಡಿದ್ದರು. ಇದೀಗ ತಾವು ತೆಗೆದುಕೊಂಡ ವೃತ ಸಾಕಾರಗೊಳ್ಳುತ್ತಿದೆ. ಹೀಗಾಗಿ ಜ.22ರಂದು ವೃತ ಅಂತ್ಯಗೊಳಿಸುತ್ತಿದ್ದಾರೆ.
 

Jharkhand 85 year old Saraswati Devi end 30 years fast of silence on day of Ram Mandir consecration
Author
First Published Jan 7, 2024, 7:17 PM IST

ಆಯೋಧ್ಯೆ(ಜ.07) ಶ್ರೀರಾಮ ಮಂದಿರ ನಿರ್ಮಾಣಕ್ಕೆ 1528ರಿಂದ ಹೋರಾಟ ನಡೆಯುತ್ತಿದೆ. ಪ್ರತಿ ಭಾರಿ ಹಿಂದೂಗಳ ಹೋರಾಟಕ್ಕೆ ಒಂದಲ್ಲ ಒಂದು ವಿಘ್ನ ಎದುರಾಗಿತ್ತು. ದೇಶ ಸ್ವತಂತ್ರಗೊಂಡ ಬಳಿಕ ರಾಮ ಮಂದಿರ ನಿರ್ಮಾಣ ಕನಸಾಗಿಯೇ ಉಳಿದಿತ್ತು. ಬರೋಬ್ಬರಿ 500 ವರ್ಷಗಳ ಸತತ ಹೋರಾಟದಿಂದ ಇದೀಗ ಭವ್ಯ ರಾಮ ಮಂದಿರ ನಿರ್ಮಾಣಗೊಂಡಿದೆ. ಇದಕ್ಕಾಗಿ ಹಲವರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಮತ್ತೆ ಕೆಲವರು ಅವಿರತ ಹೋರಾಟ ಮಾಡಿದ್ದಾರೆ. ಇನ್ನೂ ಕೆಲವರು ಧ್ಯಾನ, ವೃತ, ಪೂಜೆ ಮೂಲಕ ತಮ್ಮ ಸೇವೆ ಸಲ್ಲಿಸಿದ್ದಾರೆ. ಇದೀಗ ಈ ಎಲ್ಲಾ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಜನವರಿ 22ರಂದು ರಾಮ ಮಂದಿರದ ಪ್ರಾಣಪ್ರತಿಷ್ಠೆ ನಡೆಯಲಿದೆ. ಇದೇ ವೇಳೆ ಜಾರ್ಖಂಡ್‌ನ ಧನಾಬಾದ್‌ನ ಸರಸ್ವತಿ ದೇವಿ ತೆಗೆದುಕೊಂಡ ವೃತ ಅಂತ್ಯಗೊಳಿಸುತ್ತಿದ್ದಾರೆ. ಬರೋಬ್ಬರಿ 30 ವರ್ಷಗಳ ಹಿಂದೆ ಸರಸ್ವತಿ ದೇವಿ ಪ್ರತಿಜ್ಞೆ ಕೈಗೊಂಡಿದ್ದರು. ಅದರಂತೆ ಪ್ರತಿ ನಿಮಿಷ ಜೀವಿಸಿದ್ದಾರೆ. ಇದೀಗ ತಮ್ಮ ವೃತ, ಪ್ರತಿಜ್ಞೆ ಸಾಕಾರಗೊಳ್ಳುತ್ತಿದೆ. 

ಹೌದು, 85 ವರ್ಷದ ಸರಸ್ವತಿ ದೇವಿ 30 ವರ್ಷಗಳ ಹಿಂದೆ ಆಯೋಧ್ಯೆಗೆ ತೆರಳಿದ್ದರು. ಈ ವೇಳೆ ರಾಮಲಲ್ಲಾನನ್ನು ಪ್ಲಾಸ್ಟಿಕ್‌ನ ಟೆಂಟ್‌ನಲ್ಲಿಟ್ಟು ಪೂಜೆ ಮಾಡಲಾಗುತ್ತಿತ್ತು. ಶ್ರೀರಾಮಲಲ್ಲಾನ ಪರಿಸ್ಥಿತಿ ನೋಡಿ ಮರುಗಿದ ಸರಸ್ವತಿ ದೇವಿ, ಇದೇ ರಾಮಲಲ್ಲಾ ಮುಂದೆ ಕುಳಿತು ಪ್ರತಿಜ್ಞೆ ಮಾಡಿದ್ದರು. ರಾಮಲಲ್ಲಾ ಭವ್ಯ ಮಂದಿರದಲ್ಲಿ ವಿರಾಜಮಾನವಾಗಬೇಕು. ಆ ಮಂದಿರದಲ್ಲಿ ಶ್ರೀರಾಮನ ದರ್ಶನ ಪಡೆಯುವರಿಗೆ ಮೌನವಾಗಿರುತ್ತೇನೆ. ಯಾರೊಂದಿಗೂ ಮಾತನಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

 

212 ಪಿಲ್ಲರ್, 161 ಅಡಿ ಎತ್ತರ; ಕಬ್ಬಿಣ ಬಳಸದೆ ನಾಗರಶೈಲಿಯಲ್ಲಿ ರಾಮ ಮಂದಿರ ನಿರ್ಮಾಣ!

ಸರಸ್ವತಿ ದೇವಿ ಮೌನ ವೃತ ಆಚರಿಸಲು ಆರಂಭಿಸಿದರು. ಆದರೆ ರಾಮ ಮಂದಿರ ನಿರ್ಮಾಣದ ಯಾವುದೇ ಭರವಸೆ ಇರಲಿಲ್ಲ. ಕುಟುಂಬಸ್ಥರು ಸೇರಿದಂತೆ ಹಲವರು ವಿವಾದಿತ ಪ್ರದೇಶವಾಗಿರುವುದರಿಂದ ವಿವಾದ ಬಗೆ ಹರಿದು ರಾಮ ಮಂದಿರ ನಿರ್ಮಾಣವಾಗುವ ಭರವಸೆಗಳು ಕಾಣುತ್ತಿಲ್ಲ. ಹೀಗಾಗಿ ಮೌನವೃತ ಕೈಬಿಡುವಂತೆ ಮನವಿ ಮಾಡಿದ್ದರು. ಆದರೆ ಸರಸ್ವತಿ ದೇವಿ ಮಾತ್ರ ಮೌನ ವೃತದಿಂದ ಹೊರಬರಲಿಲ್ಲ. ಈ ಕುರಿತು ಸರಸ್ವತಿ ದೇವಿ ಕಿರಿಯ ಪುತ್ರ ಹರಿರಾಮ ಅಗರ್ವಾಲ್ ಹಲವು ಮಾಹಿತಿ ಹಂಚಿಕೊಂಡಿದ್ದಾರೆ.

ತಾಯಿ ಮೌನ ವೃತ ತೆಗೆದುಕೊಂಡಿದ್ದರು. ಶ್ರೀರಾಮನನ್ನು ಮಂದಿರದೊಳಗೆ ದರ್ಶನ ಪಡೆಯಬೇಕು ಅನ್ನೋದು ಅವರ ಬಯಕೆ. ಅತೀ ದೊಡ್ಡ ರಾಮ ಭಕ್ತೆಯಾಗಿರುವ ಸರಸ್ವತಿ ದೇವಿ ತಮ್ಮ ವೃತವನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ. ಕೆಲವು ಬಾರಿ ನಾವು ಮನವಿ ಮಾಡಿದರೂ ತಾಯಿ ವೃತ ಅಂತ್ಯಗೊಳಿಸಲಿಲ್ಲ. ಹೀಗಾಗಿ ನಾವೂ ಕೂಡ ಅವರ ವೃತಕ್ಕೆ ಗೌರವ ನೀಡಿ ನಡೆದುಕೊಂಡೆವು. ಕುಟುಂಬಸ್ಥರಿಗೆ ಏನಾದರು ಹೇಳಬೇಕು ಎಂದಿದ್ದರೆ, ಕಾಗದಲ್ಲಿ ಬರೆಯುತ್ತಿದ್ದರು. ಎಲ್ಲಿಯೂ ಕೂಡ ವೃತಕ್ಕೆ ಭಂಗ ತರಲಿಲ್ಲ. ಇದೀಗ ರಾಮ ಮಂದಿರ ಪ್ರಾಣಪ್ರತಿಷ್ಠೆ ನಡೆಯಲಿದೆ. ತಾಯಿಯ ಪ್ರತಿಜ್ಞೆ ಈಡೇರುತ್ತಿದೆ. ಹೀಗಾಗಿ ಜನವರಿ 22ರಂದು ಸರಸ್ವತಿ ದೇವಿ ತಮ್ಮ ಮೌನವೃತ ಅಂತ್ಯಗೊಳಿಸುತ್ತಿದ್ದಾರೆ ಎಂದು ಹರಿರಾಮ್ ಅಗರ್ವಾಲ್ ಹೇಳಿದ್ದಾರೆ.

ಹಿಂದು ಮತಕ್ಕಾಗಿ ಕಾಂಗ್ರೆಸ್ ಪ್ಲಾನ್, ರಾಮಮಂದಿರ ಉದ್ಘಾಟನೆಗೆ ಹಾಜರಾಗಲು ಗ್ರೀನ್ ಸಿಗ್ನಲ್?

ಸರಸ್ವತಿ ದೇವಿಗೆ ಆಯೋಧ್ಯ ರಾಮ ಮಂದಿ ವಿರಾಜಮಾನ ದಿನದ ಆಮಂತ್ರಣ ಬಂದಿದೆ. ಹೀಗಾಗಿ ಜನವರಿ 8 ರಂದು ಸರಸ್ವತಿ ದೇವಿ ಆಯೋಧ್ಯೆಗೆ ತೆರಳುತ್ತಿದ್ದಾರೆ. ಜನವರಿ 22 ರಂದು ಮೌನ ವೃತ ಅಂತ್ಯಗೊಳಿಸುತ್ತಿದ್ದಾರೆ ಎಂದು ಹರಿರಾಮ್ ಅಗರ್ವಾಲ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios