Asianet Suvarna News Asianet Suvarna News

ಪಾಳು ಬಂಗ್ಲೇಲಿ 329 ಕೋಟಿ ರು. ಮುಚ್ಚಿಟ್ಟಿದ್ದ ಕೈ ಸಂಸದ ಸಾಹು!

ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದ ಧೀರಜ್ ಸಾಹು ಮನೆಯಲ್ಲಿ ಪತ್ತೆಯಾದ 329 ಕೋಟಿ ರು.ನಗದನ್ನು ಪಾಳು ಬಂಗಲೆಯಲ್ಲಿ ಅಡಗಿಸಿ ಇಡಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ

Jharkhand 329 crore cash found in Congress MP Dheeraj Sahus house was hidden in a dilapidated bungalow akb
Author
First Published Dec 22, 2023, 11:34 AM IST

ನವದೆಹಲಿ: ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದ ಧೀರಜ್ ಸಾಹು ಮನೆಯಲ್ಲಿ ಪತ್ತೆಯಾದ 329 ಕೋಟಿ ರು.ನಗದನ್ನು ಪಾಳು ಬಂಗಲೆಯಲ್ಲಿ ಅಡಗಿಸಿ ಇಡಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಸಾಹು ಮನೆಯಲ್ಲಿ ಪತ್ತೆಯಾದ ವಸ್ತುಗಳ ಕುರಿತು ಗುರುವಾರ ಅಧಿಕೃತವಾಗಿ ಮಾಹಿತಿ ನೀಡಿರುವ ಕೇಂದ್ರೀಯ ನೇರ ತೆರಿಗೆ ಮಂಡಳಿ, ರಾಜಕೀಯ ನಂಟಿನ ವ್ಯಕ್ತಿಯೊಬ್ಬರ ಮನೆಯಲ್ಲಿ ಇತ್ತೀಚೆಗೆ ವಶಪಡಿಸಿಕೊಂಡ 351 ಕೋಟಿ ರು. ಪೈಕಿ, 329 ಕೋಟಿ ರು.ಗಳನ್ನು ಅವರಿಗೆ ಸೇರಿದ ಪಾಳು ಬಿದ್ದ ಇಲ್ಲವೇ ಖಾಲಿ ಕಟ್ಟಡಗಳಿಂದ ವಶಪಡಿಸಿಕೊಳ್ಳಲಾಗಿತ್ತು. ಯಾರಿಗೂ ಗೊತ್ತಾಗದೇ ಇರಲಿ ಎಂಬ ಕಾರಣಕ್ಕೆ ಒಡಿಶಾದ ಸಣ್ಣ ನಗರಗಳಾದ ಬೋಲಂಗೀರ್ ಜಿಲ್ಲೆಯಲ್ಲಿ ಮತ್ತು ಸಂಬಲ್ಪುರ ಜಿಲ್ಲೆಯ ಖೇತ್ರಜ್‌ಪುರ ಸೇರಿ ಇತರೆಡೆ ಖಾಲಿ ಕಟ್ಟಡ ಅಥವಾ ಸಾರ್ವಜನಿಕ ಪ್ರದೇಶಗಳಿಂದ ಮುಕ್ತವಾಗಿರುವ ಸ್ಥಳದಲ್ಲಿಯೇ ಹೆಚ್ಚಾಗಿ ಹಣವನ್ನು ಬಚ್ಚಿಡಲಾಗಿತ್ತು. ಇಲ್ಲಿ ದಾಳಿ ನಡೆಸಿದ ವೇಳೆ ಇಲಾಖೆಗೆ ಕಂತೆ ಕಂತೆ ನೋಟುಗಳು ಸಿಕ್ಕಿವೆ ಎಂದು ಸಿಬಿಡಿಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಂಗ್ರೆಸ್‌ ಚುನಾವಣೆಗೆ ರೆಡಿ: ವೇಣುಗೋಪಾಲ್‌

ನವದೆಹಲಿ: ಕಾಂಗ್ರೆಸ್‌ ಈಗಾಗಲೇ ಲೋಕಸಭೆ ಚುನಾವಣೆಯ ಮೋಡ್‌ಗೆ ಬಂದಿದೆ. 2024ರ ಸಾರ್ವತ್ರಿಕ ಚುನಾವಣೆ ಎದುರಿಸಲು ಕಾಂಗ್ರೆಸ್‌ ಸಿದ್ಧವಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಹೇಳಿದ್ದಾರೆ ಸಿಡಬ್ಲ್ಯೂಸಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕಸಭೆಗೆ ಶೀಘ್ರವೇ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನು ನಿರ್ಧರಿಸುತ್ತದೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ಇಂಡಿಯಾ ಮೈತ್ರಿಕೂಟವನ್ನು ಭದ್ರಕೋಟೆಯನ್ನಾಗಿ ಮಾಡುವಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಚುನಾವಣೆಗೆ ಶೀಘ್ರದಲ್ಲೇ ಪ್ರಣಾಳಿಕೆ ಸಮಿತಿ ರಚಿಸಲಾಗುವುದು ಎಂದಿದ್ದಾರೆ.

ನೂತನ ಸಂಸತ್‌ ಭವನದ ಮೊದಲ ಚಳಿಗಾಲದ ಅಧಿವೇಶ ಅಂತ್ಯ

ಸಂಸದರ ಅಮಾನತು ಖಂಡಿಸಿ ‘ಇಂಡಿಯಾ’ ಒಕ್ಕೂಟದ ಪ್ರತಿಭಟನೆ

ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ 140ಕ್ಕೂ ಅಧಿಕ ವಿಪಕ್ಷ ಸಂಸದರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ವಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಸದಸ್ಯರು ಗುರುವಾರ ಸಂಸತ್‌ ಭವನದಿಂದ ವಿಜಯ್‌ ಚೌಕ್‌ವರೆಗೆ 'ಪ್ರಜಾಪ್ರಭುತ್ವವನ್ನು ಉಳಿಸಿ' ಎಂಬ ಘೋ಼ವಾಕ್ಯದೊಂದಿಗೆ ಪ್ರತಿಭಟನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ. 'ಸಂಸತ್ತಿನಲ್ಲಾದ ಭದ್ರತಾ ಲೋಪದ ಕುರಿತು ಚರ್ಚೆ ಮಾಡಿ ಎಂದು ಕೇಳಿದ್ದಕ್ಕೆ ಸಂಸದರನ್ನು ಅಮಾನತು ಮಾಡಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ದೇಶಾದ್ಯಂತ ಈ ಕುರಿತು ಮಾತನಾಡುತ್ತಾರೆ. ಆದರೆ ಸದನದಲ್ಲಿ ಮಾತನಾಡದೆ ಸಭಾ ಮರ್ಯಾದೆಗೆ ಕುತ್ತು ತಂದಿದ್ದಾರೆ. ಈ ಕುರಿತು ನಾವು ಈಗ ಧ್ವನಿಯೆತ್ತದಿದ್ದರೆ ಮುಂದಿನ ಪೀಳಿಗೆ ನಿರಂಕುಶ ಅಧಿಕಾರದಿಂದ ನರಳುತ್ತದೆ. ಹಾಗಾಗಿ ಇಂದಿನ ಮೆರವಣಿಗೆಯ ಜೊತೆಗೆ ಶುಕ್ರವಾರವೂ ಸಹ ಜಂತರ್‌ ಮಂತರ್‌ನಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಮಸೂದೆ ಪಾಸ್‌

ಇದೇ ವೇಳೆ ಜಗದೀಪ್‌ ಧನಕರ್‌ ಅವರು ಸಭಾಪತಿಯಾಗಿ ಜಾತಿ ವಿಷಯದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Latest Videos
Follow Us:
Download App:
  • android
  • ios