ನವದೆಹಲಿ(ನ.13): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ದೆಹಲಿಯಲ್ಲಿ ವಾತಾವರಣ ಬಹಳ ಕೆಟ್ಟದಾಗಿರುತ್ತದೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫೋಟೋಗಳು ವೈರಲ್ ಆಗುತ್ತಿದ್ದು, ಇದರಲ್ಲಿ ಇಂದು ಹಾಗೂ ಈ ಹಿಂದಿನ ಫೋಟೋಗಳನ್ನು ತೋರಿಸಲಾಗಿದೆ. ಲಾಕ್‌ಡೌನ್ ವೇಳೆ ದೆಹಲಿಯಲ್ಲಿ ಲಾಕ್‌ಡೌನ್ ಇರಲಿಲ್ಲ, ಆದರೀಗ ಇಲ್ಲಿ ವಾಯು ಮಾಲಿನ್ಯ ದಿನೇ ದಿನೇ ಹೆಚ್ಚಲಾರಂಭಿಸಿದೆ. ಹೀಗಿರುವಾಗ IPS ಆಫೀಸರ್ ಒಬ್ಬರು ಫೋಟೋ ಒಂದನ್ನು  ಶೇರ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಐಪಿಎಸ್ ಆಫೀಸರ್ ಅರುಣ್ ಬೋತ್ರಾ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇಲ್ಲಿ ಅವರು ಒಂದೇ ಸ್ಥಳದ ಈಗಿನ ಹಾಗೂ ಹಿಂದಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಪರಿಸರ ಸ್ವಚ್ಛವಾಗಿದ್ದರೆ ಮತ್ತೊಂದರೆ ಅಸ್ಪಪಷ್ಟವಾಗಿದೆ. ಈ ಫೋಟೋ ಶೇರ್ ಮಾಡಿಕೊಂಡಿರುವ ಅರುಣ್ ಎರಡು ತಿಂಗಳಲ್ಲಿ ದೆಹಲಿ ಹೀಗೆ ಬದಲಾಗಿದೆ. ನಮಗೆ ಲಾಕ್‌ಡೌನೇ ಬೆಸ್ಟ್ ಎಂದಿದ್ದಾರೆ.

ಸದ್ಯ ಅವರು ಮಾಡಿದ ಈ ಟ್ವೀಟ್ ಭಾರೀ ವೈರಲ್ ಆಗಿದ್ದು, ಅನೇಕ ಮಂದಿ ಅವರ ಈ ಅಭಿಪ್ರಾಯವನ್ನು ಸಮರ್ಥಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಲಾಕ್‌ಡೌನ್ ವೇಳೆ ಕುಸಿದಿದ್ದ ವಾಯು ಮಾಲಿನ್ಯ ಸದ್ಯ ಅಪಾಯದ ಮಟ್ಟ ಮೀರಲಾರಂಭಿಸಿದೆ.