ಆತ್ಮಹತ್ಯೆ ತಡೆಗೆ ಕೋಟಾ ಹಾಸ್ಟೆಲ್‌ಗಳ ಬಾಲ್ಕನಿ, ಲಾಬಿಗೆ ನೆಟ್‌ ಅಳವಡಿಕೆ

ದೇಶದಲ್ಲೆ ಅತಿ ಹೆಚ್ಚು ಜೆಇಇ ಮತ್ತು ನೀಟ್‌ ಪರೀಕ್ಷಾ ತರಬೇತಿ ಕೇಂದ್ರಗಳಿರುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ತಡೆಯಲು ಹಾಸ್ಟಲ್‌ ಮತ್ತು ಪಿಜಿಗಳಲ್ಲಿ ಸ್ಟ್ರಿಂಗ್‌ ಲೋಡೆಡ್‌ ಫ್ಯಾನ್‌ಗಳನ್ನು ಅಳವಡಿಸಿದ ಬೆನ್ನಲ್ಲೇ ಇದೀಗ ಬಾಲ್ಕನಿ ಮತ್ತು ಲಾಬಿಗಳಲ್ಲಿ ಆತ್ಮಹತ್ಯಾ ವಿರೋಧಿ ಬಲೆಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

Installation of net in balcony lobby of Kota hostels to prevent student suicide akb

ಕೋಟಾ: ದೇಶದಲ್ಲೆ ಅತಿ ಹೆಚ್ಚು ಜೆಇಇ ಮತ್ತು ನೀಟ್‌ ಪರೀಕ್ಷಾ ತರಬೇತಿ ಕೇಂದ್ರಗಳಿರುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ತಡೆಯಲು ಹಾಸ್ಟಲ್‌ ಮತ್ತು ಪಿಜಿಗಳಲ್ಲಿ ಸ್ಟ್ರಿಂಗ್‌ ಲೋಡೆಡ್‌ ಫ್ಯಾನ್‌ಗಳನ್ನು ಅಳವಡಿಸಿದ ಬೆನ್ನಲ್ಲೇ ಇದೀಗ ಬಾಲ್ಕನಿ ಮತ್ತು ಲಾಬಿಗಳಲ್ಲಿ ಆತ್ಮಹತ್ಯಾ ವಿರೋಧಿ ಬಲೆಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

ಹಾಸ್ಟಲ್‌ ಮತ್ತು ಪಿಜಿ ಕಟ್ಟಡಗಳಲ್ಲಿರುವ ಬಾಲ್ಕನಿ ಮತ್ತು ತೆರೆದ ಕಿಟಕಿಯಂತಹ ಜಾಗಗಳ ಮೇಲಿನಿಂದ ಬಿದ್ದು ವಿದ್ಯಾರ್ಥಿಗಳನ್ನು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.  ಪ್ರತಿ ವರ್ಷ ಪರೀಕ್ಷೆಗೆ ತಯಾರಿ ನಡೆಸಲು ದೇಶದ ನಾನಾ ಭಾಗಗಳಿಂದ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಬರುವ ಕೋಟಾದಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಚ್ಚಾಗಿ ಅವರೆಲ್ಲ ಕೊಠಡಿಯ ಸೀಲಿಂಗ್‌ ಫ್ಯಾನ್‌ಗೆ ನೇಣು ಹಾಕಿಕೊಳ್ಳುತ್ತಿದ್ದರಿಂದ ಜಿಲ್ಲಾಧಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಸ್ಟ್ರಿಂಗ್‌ ಲೋಡೆಡ್‌ ಫ್ಯಾನ್‌ ಮತ್ತು ಆತ್ಮಹತ್ಯೆ ಪ್ರಯತ್ನ ವೇಳೆ ಸೈರನ್‌ ಹೊಡೆಯುವ ಸಂವೇದಕಗಳನ್ನು ಇತ್ತೀಚೆಗೆ ಅಳವಡಿಸಲಾಗಿದೆ. 2023ನೇ ಸಾಲಿನಲ್ಲಿ ಈವರೆಗೆ 20 ವಿದ್ಯಾರ್ಥಿಗಳು ಕೋಟಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೋಟಾದಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ: ತನಿಖೆಗೆ ವಿಶೇಷ ಸಮಿತಿ ರಚನೆಗೆ ಸಿಎಂ ಆದೇಶ 

ಕೋಟಾದಲ್ಲಿ ಹೆಚ್ಚು ವಿದ್ಯಾರ್ಥಿಗಳ ಸೂಸೈಡ್‌: ಹಾಸ್ಟೆಲ್‌, ಪಿಜಿಗೆ ಆತ್ಮಹತ್ಯೆ ತಡೆಗಟ್ಟುವ ಫ್ಯಾನ್‌ ಅಳವಡಿಕೆ

Latest Videos
Follow Us:
Download App:
  • android
  • ios