ಬೆಂಗಳೂರು(ಜು.07): ಕೊರೋನಾ ವೈರಸ್ ಹೊಡೆತಕ್ಕೆ ಎಲ್ಲರೂ ನಲುಗಿದ್ದಾರೆ. ಐಟಿ ಕಂಪನಿಗಳ ಉದ್ಯೋಗಿಗಳು ವಿವಿದ ದೇಶದಲ್ಲಿ ಸಿಲುಕಿಕೊಂಡಿದ್ದಾರೆ. ವಿಶ್ವದ ಬಹುದೊಡ್ಡ ಐಟಿ ಕಂಪನಿ ಇನ್ಫೋಸಿಸ್ ವಿದೇಶದಲ್ಲಿ ಸಿಲುಕಿಕೊಂಡು ಸಂಕಷ್ಟ ಅನುಭವಿಸುತ್ತಿರುವ ತಮ್ಮ ಉದ್ಯೋಗಿಗಳನ್ನು ತವರಿಗೆ ವಾಪಾಸ್ ಕರೆಯಿಸಿಕೊಳ್ಳುತ್ತಿದೆ. ಹೀಗೆ ಅಮೆರಿಕದಲ್ಲಿ ಸಿಲುಕಿದ್ದ 200 ಇನ್ಫೋಸಿಸ್ ಉದ್ಯೋಗಿಗಳು ಹಾಗೂ ಅವರ ಕುಟುಬವನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆ ತಂದಿದೆ.

ಕೊರೋನಾಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ; ಎಚ್ಚರಿಕೆ ನೀಡಿದ ಇನ್ಫಿ ಮೂರ್ತಿ!.

ವಿಶೇಷ ಚಾರ್ಟೆಡ್ ವಿಮಾನದ ಮೂಲಕ ಇನ್ಫೋಸಿಸ್ ಉದ್ಯೋಗಿಗಳು ಹಾಗೂ ಅವರ ಕುಟುಂಬ ಸೋಮವಾರ(ಜು.06) ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಕಳೆದ 4 ತಿಂಗಳಿಂದ ಅಮೆರಿಕದಲ್ಲಿ ಬಂಧಿಯಾಗಿದ್ದ ಉದ್ಯೋಗಿಗಳು ಬೆಂಗಳೂರಿಗೆ ಕಾಲಿಡುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.

ಸರಳತೆಯ ಸಾಧಕಿ,ಸಜ್ಜನಿಕೆಯ ಪೋಷಕಿ ಸುಧಾಮೂರ್ತಿ ಅವರ ಅಪರೂಪದ ಚಿತ್ರಗಳು! 

ಭಾರತ ನಾಗರೀಕ ವಿಮಾನ ಸಚಿವಾಲಯ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಜುಲೈ 31ರ ವರೆಗೆ ನಿಷೇಧಿಸಿದೆ. ಹೀಗಾಗಿ ವಿದೇಶದಲ್ಲಿ ಸಿಲುಕಿಕೊಂಡ ಭಾರತೀಯರಿಗೆ ತವರಿಗೆ ವಾಪಾಸ್ಸಾಗಲು ಸಾಧ್ಯಾವಾಗುತ್ತಿಲ್ಲ. ವಂದೇ ಭಾರತ್ ವಿಷನ್ ಸೇರಿದಂತೆ ಕೆಲ ವಿಶೇಷ ವಿಮಾನ ಸೇವೆ ಮಾತ್ರ ಲಭ್ಯವಿದೆ. ವಿಶೇಷ ವಿಮಾನ ಸೇವೆ ಅಡಿಯಲ್ಲಿ ಇನ್ಫೋಸಿಸ್ ಚಾರ್ಟೆಡ್ ವಿಮಾನ ಬುಕ್ ಮಾಡಿ ಉದ್ಯೋಗಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆಯಿಸಿಕೊಂಡಿದೆ.

 

ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನೀಲೆಕಿಣಿ ಇನ್ಫೋಸಿಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತವರಿಗೆ ಮರಳಿರುವ ಇನ್ಫೋಸಿಸ್ ಉದ್ಯೋಗಿಗಳು ಬೆಂಗಳೂರು ಅಥವಾ ಭಾರತದ ಇತರೆಡೆ ಮನೆಯಿಂದಲೇ ಕೆಲಸ ಮಾಡಲಿದ್ದಾರೆ.