ಯುದ್ಧದ ಸ್ಥಿತಿಯಲ್ಲಿ ಉತ್ತಮ ಪ್ರಜೆಯಾಗಿ ಹೇಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂಬ ಬಗ್ಗೆ ನಿರ್ದೇಶನವೊಂದನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.
ಬೆಂಗಳೂರು[ಫೆ.28]: ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಹಿಂದೆಯೇ ಪಾಕ್ ಪ್ರಚೋ ದಿತ ಸೈಬರ್ ಪ್ರಾಪಗ್ಯಾಂಡ ಕೂಡ ಅಂತರ್ಜಾಲದಲ್ಲಿ ವಿಪರೀತವಾಗಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಯುದ್ಧದ ಸ್ಥಿತಿಯಲ್ಲಿ ಉತ್ತಮ ಪ್ರಜೆಯಾಗಿ ಹೇಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂಬ ಬಗ್ಗೆ ನಿರ್ದೇಶನವೊಂದನ್ನು ಬಿಡುಗಡೆ ಮಾಡಿದೆ.
ಏನು ಮಾಡಬಾರದು?
ಯಾವುದೇ ಸೈನಿಕರ ವಿಡಿಯೋ, ಭಾವಚಿತ್ರ, ಭದ್ರತಾ ಪಡೆ ಅಥವಾ ಸಂಸ್ಥೆಗಳು, ಯುದ್ಧೋಪಕರಣಗಳ ಸಾಗಣೆಗೆ ಸಂಬಂಧಿಸಿದ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ.
ಯಾವುದೇ ವಿಚಾರವನ್ನು ಪ್ರಮಾಣೀಕರಿಸಿಕೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಬೇಡಿ.
ಏನು ಮಾಡಬೇಕು?
ಭಾರತ ವಿರೋಧಿ ಹಾಗೂ ಮಾರಕವಾದ ವಿಡಿಯೋ, ಫೋಟೋ ಅಥವಾ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದರೆ ದೂರು ನೀಡಿ.
ನಮ್ಮ ಸೇನೆಯ ತಂತ್ರಗಳೆಲ್ಲವನ್ನೂ ತಿಳಿದುಕೊಳ್ಳಬೇಕು ಎಂಬ ಪ್ರಯತ್ನ ಬೇಡ. ಬದಲಿಗೆ ನಮ್ಮ ಸೇನೆ ನಿಮ್ಮನ್ನು ಸುರಕ್ಷಿತವಾಗಿಡಲಿದೆ ಎಂಬ ಬಗ್ಗೆ ವಿಶ್ವಾಸವಿಡಿ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 28, 2019, 10:40 AM IST