Power crisis : ಕಲ್ಲಿದ್ದಲು ಸಾಗಾಟಕ್ಕಾಗಿ 240 ಪ್ರಯಾಣಿಕ ರೈಲು ರದ್ದು!
ದೇಶದ ಬಹುತೇಕ ರಾಜ್ಯಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿರುವ ಕಾರಣಕ್ಕೆ ಕಲ್ಲಿದ್ದಲಿಗೆ ವಿಪರೀತ ಬೇಡಿಕೆ ಉಂಟಾಗಿದೆ. ಇದರಿಂದಾಗಿ ಈ ವರ್ಷದಲ್ಲಿ ಗರಿಷ್ಠ ಪ್ರಮಾಣದ ಕಲ್ಲಿದ್ದಲು ರಾಕ್ಸ್ ಗಳನ್ನುಸಾಗಾಟ ಮಾಡಲು ಭಾರತೀಯ ರೈಲ್ವೇಸ್ ಮುಂದಾಗಿದೆ. ಆ ಕಾರಣಕ್ಕಾಗಿ 240 ಪ್ರಯಾಣಿಕ ರೈಲುಗಳನ್ನು ರದ್ದು ಮಾಡುವ ತೀರ್ಮಾನ ಕೈಗೊಂಡಿದೆ.
ನವದೆಹಲಿ (ಏ. 29): ದೇಶದ ವಿವಿದ ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ (Power crisis ) ವಿಪರೀತವಾಗಿ ತಲೆದೋರಿದ್ದು, ದೇಶಾದ್ಯಂತ ವಿವಿಧ ರಾಜ್ಯಗಳಿಗೆ ಒಟ್ಟು 400 ರಾಕ್ ಗಳ ಕಲ್ಲಿದ್ದಲು ಸರಬರಾಜು (Coal supply) ಮಾಡಲು ಭಾರತ ಸರ್ಕಾರ ಮುಂದಾಗಿದೆ. ಅದರಂತೆ, ಕಲ್ಲಿದ್ದಲ್ಲು ಪೂರೈಕೆ ಸರಾಗವಾಗುವ ನಿಟ್ಟಿನಲ್ಲಿ ಭಾರತೀಯ ರೈಲ್ವೇ (Indian Railway) 240 ಪ್ರಯಾಣಿಕ ರೈಲುಗಳನ್ನು ರದ್ದು ಮಾಡಿದೆ.
ಕಳೆದ ವರ್ಷ ರೈಲ್ವೇಸ್ ಮೂಲಕ 347 ಕಲ್ಲಿದ್ದಲು ರಾಕ್ ಗಳನ್ನು ವಿವಿಧ ರಾಜ್ಯಗಳ ಉಷ್ಣ ವಿದ್ಯುತ್ ಸ್ಥಾವರಗಳಿಗೆ ತಲುಪಿಸಲಾಗಿತ್ತು. ಈ ವರ್ಷ ಇದರ ಸಂಖ್ಯೆ 400 ರಾಕ್ ಗಳಿಗೆ (Coal Rakes) ಏರಿದ್ದು, ಸಾರ್ವಕಾಲಿಕ ಗರಿಷ್ಠ ಎಂದು ರೈಲ್ವೇಸ್ ನ ಮೂಲಗಳು ತಿಳಿಸಿವೆ.
ಉತ್ತರ ಭಾರತದ ರಾಜಸ್ಥಾನ (Rajasthan), ಮಧ್ಯಪ್ರದೇಶ ಹಾಗೂ ಪಂಜಾಬ್ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗ್ಲೆಹೊಟ್, ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ವಿಪರೀತವಾಗಿರುವುದಾಗಿ ಹೇಳಿದೆ. ಇದರಿಂದಾಗಿ ರಾಜ್ಯದಲ್ಲಿರುವ ಪ್ರಮುಖ ಕಾರ್ಖಾನೆಗಳಲ್ಲಿ ದಿನಕ್ಕೆ ನಾಲ್ಕು ಗಂಟೆಗಳ ವಿದ್ಯುತ್ ಕಡಿತ ಮಾಡುವುದಾಗಿ ರಾಜಸ್ಥಾನ ಘೋಷಣೆ ಮಾಡಿದೆ. ಇನ್ನು ದೇಶದ 16 ರಾಜ್ಯಗಳಲ್ಲಿ ತಾಪಮಾನ ವಿಪರೀತವಾಗಿ ಏರಿಕೆಯಾಗಿದ್ದು, ವಿದ್ಯುತ್ ಗೆ ಬೇಡಿಕೆಯೂ ಹೆಚ್ಚಿದೆ. ಆದರೆ, ರಾಜ್ಯಗಳ ಅಗತ್ಯಕ್ಕೆ ತಕ್ಕಂತೆ ಕಲ್ಲಿದ್ದಲು ಪೂರೈಕೆ ಸಾಧ್ಯವಾಗುತ್ತಿಲ್ಲ, ಇದು ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಒಟ್ಟಾರೆ, ರಾಜ್ಯದ ಪರಿಸ್ಥಿತಿ ರಾಷ್ಟ್ರೀಯ ಬಿಕ್ಕಟ್ಟು ಎಂದೂ ಗ್ಲೆಹೊಟ್ ಹೇಳಿದ್ದರು.
ರಾಜ್ಯದ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ನಿಗದಿತ ಪ್ರಮಾಣದಲ್ಲಿ ಪೂರೈಕೆಯಾಗದೇ ಹೋದಲ್ಲಿ ಆಸ್ಪತ್ರೆಗಳು ಹಾಗೂ ಕಾರ್ಖಾನೆಗಳು, ಬೃಹತ್ ಕಟ್ಟಡಗಳು ಕೂಡ ವಿದ್ಯುತ್ ಕಡಿತ ಎದುರಿಸಬೇಕಾಗಬಹುದು ಎಂದು ದೆಹಲಿಯ ಇಂಧನ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.ಈ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಟ್ವೀಟ್ ಮಾಡಿದ್ದಾರೆ. "ದೇಶದಲ್ಲಿ ಬೃಹತ್ ಪ್ರಮಾಣದ ವಿದ್ಯುತ್ ವ್ಯತ್ಯಯ ತಲೆದೋರಿದೆ. ಇಲ್ಲಿಯವರೆಗೂ ದೆಹಲಿಯಲ್ಲಿ ನಾವು ಹೇಗೋ ಪರಿಸ್ಥಿತಿಯನ್ನು ಸಂಭಾಳಿಸಿದ್ದೆವು. ಆದರೆ, ಇಡೀ ಭಾರತದಲ್ಲಿ ಪರಿಸ್ಥಿತಿ ಇನ್ನ ಕೆಟ್ಟದಾಗಿದೆ. ಒಟ್ಟಾಗಿ ನಾವು ಒಂದು ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಈ ಕುರಿತಾಗಿ ತುರ್ತಾಗಿ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕಾದ ಅವಶ್ಯಕತೆ ಇದೆ' ಎಂದು ಟ್ವೀಟ್ ಮಾಡಿದ್ದರು.
ಇನ್ನೂ ರಾಜ್ಯದಲ್ಲೂ ಕಲ್ಲಿದ್ದಲು ಕೊರತೆ ಉಂಟಾಗಿದೆ. ಕಲ್ಲಿದ್ದಲು ಕೊರತೆಯಿಂದ ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ ಮುಂದುವರೆದಿದೆ. ಕೆಪಿಟಿಸಿಎಲ್ ಅಧಿಕೃತ ಮಾಹಿತಿ ಪ್ರಕಾರ ಕಳೆದ ಬುಧವಾರ ಆರ್‌ಟಿಪಿಎಸ್‌ನ 6 ಹಾಗೂ 7ನೇ ಘಟಕ ಸೇರಿ 4 ಘಟಕಗಳು ಕಲ್ಲಿದ್ದಲು ಕೊರತೆಯಿಂದಾಗಿಯೇ ಸ್ಥಗಿತಗೊಂಡಿದೆ. ಪರಿಣಾಮ ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯ ಮುಂದುವರೆದಿದೆ. ಏ.16ರಿಂದ ರಾಜ್ಯದಲ್ಲಿ ಕಲ್ಲಿದ್ದಲಿಗೆ ತೀವ್ರ ಅಭಾವ ಸೃಷ್ಟಿಯಾಗಿದ್ದು ಕಲ್ಲಿದ್ದಲು ಕೊರತೆಯಿಂದ ಬರೋಬ್ಬರಿ ಆರು ಶಾಖೋತ್ಪನ್ನ ವಿದ್ಯುತ್ ಘಟಕಗಳು ಸ್ಥಗಿತಗೊಂಡಿದ್ದವು. ಇದೀಗ ಬುಧವಾರ ಪೂರೈಕೆಯ ತುಸು ಹೆಚ್ಚಾಗಿದ್ದರೂ ಕೊರತೆ ಮುಂದುವರೆದಿದೆ. ಪರಿಣಾಮ ನಾಲ್ಕು ಘಟಕಗಳು ಸ್ಥಗಿತಗೊಂಡಿದ್ದವು.
ಬೃಹತ್ ವಿಷ ಸರ್ಪವನ್ನು ಬರಿಗೈಲಿ ಹಿಡಿದ ಬಹದ್ದೂರ್ ಹೆಣ್ಣು: ವಿಡಿಯೋ ವೈರಲ್
ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಘಟಕದ (ಆರ್‌ಟಿಪಿಎಸ್) 6 ಹಾಗೂ 7ನೇ ಘಟಕ ಕಲ್ಲಿದ್ದಲು ಕೊರತೆ ಕಾರಣಕ್ಕಾಗಿಯೇ ಬುಧವಾರ ಸ್ಥಗಿತಗೊಳಿಸಲಾಗಿದೆ. ಇನ್ನು ಉಡುಪಿಯ ಯುಪಿಸಿಎಲ್ ಘಟಕ ಕಲ್ಲಿದ್ದಲು ಕೊರತೆಯಿಂದ ಏ.16ರಿಂದ (ಏ.20ರಂದು ಸೇರಿ) ಸ್ಥಗಿತ ಸ್ಥಿತಿಯಲ್ಲೇ ಮುಂದುವರೆದಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ್ದಾರೆ.
ವಧುವಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಭಗ್ನಪ್ರೇಮಿ
ಪರಿಣಾಮ ಬೇಸಿಗೆ ನಡುವೆಯೇ ರಾಜ್ಯದಲ್ಲಿ ಸರಾಸರಿ ವಿದ್ಯುತ್ ಪೂರೈಕೆಗಿಂತಲೂ ಕಡಿಮೆ ವಿದ್ಯುತ್ ಬುಧವಾರ ಪೂರೈಕೆಯಾಗಿದೆ. ಸರಾಸರಿ 13,500 ಮೆ.ವ್ಯಾಟ್‌ನಿಂದ 14 ಸಾವಿರ ಮೆ.ವ್ಯಾಟ್ ವಿದ್ಯುತ್ ಬಳಕೆಯಾಗುವ ರಾಜ್ಯದಲ್ಲಿ ಗುರುವಾರ ಗರಿಷ್ಠ 10,484 ಮೆ.ವ್ಯಾಟ್, ಕನಿಷ್ಠ 6,565 ಮೆ.ವ್ಯಾಟ್ ವಿದ್ಯುತ್ ಪೂರೈಕೆಯಾಗಿದೆ.