Asianet Suvarna News Asianet Suvarna News

ಜಿಂಬಾಬ್ವೆಯಲ್ಲಿ ವಿಮಾನ ಪತನ, ಭಾರತದ ಬಿಲಿಯನೇರ್ ಚಿನ್ನದ ಗಣಿ ಉದ್ಯಮಿ, ಪುತ್ರ ಸೇರಿ 6 ಮಂದಿ ಸಾವು

ಖಾಸಗಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪತನಗೊಂಡ ಪರಿಣಾಮ ಭಾರತ ಮೂಲದ ಗಣಿ ಉದ್ಯಮಿ ಹರ್ಪಾಲ್‌ ರಾಂಧವ ಮತ್ತು ಅವರ ಪುತ್ರ ಸೇರಿ ಆರು ಮಂದಿ ಸಾವನ್ನಪ್ಪಿದ ಘಟನೆ ಜಿಂಬಾಬ್ವೆಯಲ್ಲಿ ನಡೆದಿದೆ.

Indian mining tycoon  harpal singh randhawa and son among six killed in plane crash in Zimbabwe  gow
Author
First Published Oct 3, 2023, 9:23 AM IST

ಹರಾರೆ (ಅ.3): ಖಾಸಗಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪತನಗೊಂಡ ಪರಿಣಾಮ ಭಾರತ ಮೂಲದ ಗಣಿ ಉದ್ಯಮಿ ಹರ್ಪಾಲ್‌ ಸಿಂಗ್ ರಾಂಧವ ಸೇರಿ ಆರು ಮಂದಿ ಸಾವನ್ನಪ್ಪಿದ ಘಟನೆ ಜಿಂಬಾಬ್ವೆಯಲ್ಲಿ ನಡೆದಿದೆ. ಹರ್ಪಾಲ್‌, ಅವರ ಪುತ್ರ ಸೇರಿ ಆರು ಜನರು ಸೆಸ್ನಾ ವಿಮಾನದಲ್ಲಿ ಇಲ್ಲಿನ ಝ್ವಾಮಹಂಡೆ ಬಳಿ ಇರುವ ವಜ್ರದ ಗಣಿ ಬಳಿ ಶನಿವಾರ ಬೆಳಗ್ಗೆ 7:30ರಿಂದ 8 ಗಂಟೆ ಸಮಯದಲ್ಲಿ ಪತನಗೊಂಡಿದೆ. ಪರಿಣಾಮ ಸ್ಥಳದಲ್ಲೇ ಆರೂ ಜನರು ಮೃತಪಟ್ಟಿದ್ದಾರೆ. ಹರ್ಪಾಲ್‌ ಅವರು ರಿಯೋಜಿಮ್‌ ಎಂಬ ಕಂಪನಿಯ ಮಾಲೀಕರಾಗಿದ್ದು, ಚಿನ್ನ, ವಜ್ರ, ತಾಮ್ರ ಸೇರಿ ಹಲವು ಗಣಿ ಉದ್ಯಮಗಳನ್ನು ನಡೆಸುತ್ತಿದ್ದರು. ವಿಮಾನದ ಪತನಗೊಂಡ ಗಣಿಯೂ ಭಾಗಶಃ ಇವರ ಮಾಲಿಕತ್ವದಲ್ಲಿತ್ತು.

ಮುಂಬೈನ ವಠಾರ ಜೀವನದಿಂದ ದುಬೈಗೆ ಹಾರಿ ಸಾಮ್ರಾಜ್ಯ ಕಟ್ಟಿ

ಗಣಿ ಉದ್ಯಮಿ  ಅವರ 22 ವರ್ಷದ ಮಗ ಅಮೇರ್ ಸೇರಿದಂತೆ ಆರು ಮಂದಿ RioZim ಖಾಸಗಿ ಒಡೆತನದ ಸೆಸ್ನಾ 206 ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅವರು ಹರಾರೆಯಿಂದ ಮುರೋವಾ ವಜ್ರದ ಗಣಿ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ರಿಯೊಝಿಮ್‌ನ ಭಾಗಶಃ ಒಡೆತನದಲ್ಲಿರುವ ಮುರೊವಾ ಡೈಮಂಡ್ಸ್ ಗಣಿ ಬಳಿ ಸಿಂಗಲ್ ಇಂಜಿನ್ ವಿಮಾನವು ಪತನಗೊಂಡಿದೆ. ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಮುಖೇಶ್ ಅಂಬಾನಿಯನ್ನು ಮೀರಿ ಬೆಳೆದು ಜಗತ್ತಿನ 6ನೇ

ಶ್ರೀ ರಾಂಧವಾ ಅವರ ಸ್ನೇಹಿತ, ಚಲನಚಿತ್ರ ನಿರ್ಮಾಪಕ ಹೋಪ್‌ವೆಲ್ ಚಿನೊನೊ ಅವರು ಟ್ವಿಟ್ಟರ್‌ ನಲ್ಲಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಹೀಗೆ ಬರೆದಿದ್ದಾರೆ, ಝ್ವಿಶಾವಾನೆಯಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ರಿಯೊ ಝಿಮ್‌ನ ಮಾಲೀಕ ಹರ್ಪಾಲ್ ರಾಂಧವಾ ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಪೈಲಟ್ ಆಗಿದ್ದ ಅವರ ಮಗ ಸೇರಿದಂತೆ ಇತರ 5 ಜನರು, ವಿಮಾನದಲ್ಲಿದ್ದ ಒಬ್ಬ ಪ್ರಯಾಣಿಕ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

 

Follow Us:
Download App:
  • android
  • ios