ನವದೆಹಲಿ(ಏ.18): ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ಮೇಲೆ ಉಂಟಾಗುತ್ತಿರುವ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದ ಕೆಲ ರಿಯಾಯ್ತಿಗಳನ್ನು ಇದೀಗ ಇನ್ನಷ್ಟುಕ್ಷೇತ್ರಕ್ಕೆ ವಿಸ್ತರಿಸಲಾಗಿದೆ. ಮುಖ್ಯವಾಗಿ ನಿರ್ಮಾಣ ಕಾರ್ಮಿಕರು, ಕೃಷಿ ಮತ್ತು ಹಣಕಾಸು ವಲಯಗಳನ್ನು ಇದೀಗ ವಿನಾಯ್ತಿ ವ್ಯಾಪ್ತಿಗೆ ತರಲಾಗಿದೆ. ಈ ವಿನಾಯ್ತಿಗಳು ಏ.20ರ ಬಳಿಕ ಜಾರಿಯಾಗಲಿದೆ.

ಕೃಷಿ ವಲಯ

ಬಿದಿರು, ತೆಂಗಿನಕಾಯಿ, ಅಡಕೆ, ಮಸಾಲೆ ಪದಾರ್ಥಗಳ ಕೃಷಿ, ಪ್ಲಾಂಟೇಷನ್‌, ಸಂಸ್ಕರಣೆ, ಪ್ಯಾಕೇಜಿಂಗ್‌, ಮಾರಾಟ ಹಾಗೂ ಮಾರ್ಕೆಟಿಂಗ್‌. ಸಣ್ಣ ಪ್ರಮಾಣದ ಅರಣ್ಯ ಉತ್ಪನ್ನಗಳ ಸಂಸ್ಕರಣೆ, ಟಿಂಬರ್‌ ರಹಿತ ಅರಣ್ಯ ಉತ್ಪನ್ನಗಳ ಸಂಸ್ಕರಣೆಗೆ ಹಾಗೂ ಅರಣ್ಯ ವಾಸಿಗಳ ಚಟುವಟಿಕೆ.

ಕೇರಳದಲ್ಲಿ ಮಗನ ಅಂತ್ಯಕ್ರಿಯೆ; ದುಬೈನಲ್ಲಿ ಪೋಷಕರ ಕಣ್ಣೀರು!

ಹಣಕಾಸು:

ದೇಶಾದ್ಯಂತ ಹೌಸಿಂಗ್‌ ಫೈನಾನ್ಸ್‌ ಕಂಪನಿ, ಮೈಕ್ರೋ ಫೈನಾನ್ಸ್‌ ಕಂಪನಿ, ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕೆಲಸ ಮಾಡಬಹುದು ಎಂದು ಸರ್ಕಾರ ತಿಳಿಸಿದೆ.

ನಗರದಲ್ಲಿ ಕೊರೋನಾ 3ನೇ ಹಂತಕ್ಕೆ ಹರಡಿಲ್ಲ!

ಕಾರ್ಮಿಕ:

ಗ್ರಾಮೀಣ ಭಾಗದಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆ, ನೀರು ಪೂರೈಕೆ, ನೈರ್ಮಲ್ಯ ಕೆಲಸಗಳು, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್‌ ಲೈನ್‌ಗಳನ್ನು ಹಾಕುವುದು, ಟೆಲಿಕಾಂ ಆಪ್ಟಿಕಲ್‌ ಫೈಬರ್‌ ಕೇಬಲ್‌ ಹಾಕುವುದಕ್ಕೆ ಅನುಮತಿ ನೀಡಲಾಗಿದೆ.