'ಗಡಿಯಲ್ಲಿ ಏನಾಗ್ತಿದೆ, ಶಸ್ತ್ರಾಸ್ತ್ರ ಇದ್ದರೂ ಕಲ್ಲುಗಳಿಂದೇಕೆ ಹೊಡೆದಾಡಿದ್ರು?'
ಭಾರತ-ಚೀನಾ ಗಡಿ ಸಂಘರ್ಷ/ ಶಸ್ತ್ರಾಸ್ತ್ರಗಳಿದ್ದರೂ ದೊಣ್ಣೆಗಳಿಂದ ಯಾಕೆ ಬಡಿದಾಡಿದರು? / ನಿವೃತ್ತ ಸೈನ್ಯಾಧಿಕಾರಿ ಮೇಜರ್ ಜನರಲ್ ಜಿಡಿ ಭಕ್ಷಿ ಪ್ರಶ್ನೆ/ ಸೇನೆಗೆ ವಾರ್ಷಿಕವಾಗಿ ತೆಗೆದಿಡುವ ಹಣ ಎಷ್ಟು?
ನವದೆಹಲಿ ( ಜೂ. 17) ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ನಡೆಯುತ್ತಿರುವುದು ಆತಂಕ ತಂದಿಟ್ಟಿದೆ. ನಮ್ಮ ದೇಶದ 20 ಯೋಧರು ಬಲಿದಾನ ಮಾಡಿದ್ದಾರೆ.
ಗಡಿಯಲ್ಲಿ ಏನಾಗುತ್ತಿದೆ, ನಮ್ಮ ದೇಶದ ಒಬ್ಬ ಕರ್ನಲ್ ಸೇರಿದಂತೆ 20 ಯೋಧರನ್ನು ಕಳೆದುಕೊಂಡಿದ್ದೇವೆ. ನಾವು ವಾರ್ಷಿಕವಾಗಿ ಸೇನೆಗೆಂದು 71 ಬಿಲಿಯನ್ ಡಾಲರ್ ಹಣ ಖರ್ಚು ಮಾಡುತ್ತೇವೆ. ಆದರೂ ಗಡಿ ಘರ್ಷಣೆ ವೇಳೆ ನಮ್ಮ ಸೈನಿಕರು ಕಲ್ಲು ಹಾಗೂ ದೊಣ್ಣೆಗಳಿಂದ ಏಕೆ ಬಡಿದಾಡಿದರು ಎಂದು ನಿವೃತ್ತ ಸೈನ್ಯಾಧಿಕಾರಿ ಮೇಜರ್ ಜನರಲ್ ಜಿಡಿ ಭಕ್ಷಿ ಆಕ್ರೋಶದ ಪ್ರಶ್ನೆ ಮಾಡಿದ್ದಾರೆ.
ಬಲಿದಾನ ವ್ಯರ್ಥವಾಗಲು ಬಿಡಲ್ಲ; ಗುಡುಗಿದ ರಾಜನಾಥ ಸಿಂಗ್
ಗಡಿಯಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಸ್ಪಷ್ಟನೆ ಯಾರಿಗೂ ಇಲ್ಲ. ನಮ್ಮ ಸೈನಿಕರ ಕೈಯಲ್ಲಿ ಶಸ್ತ್ರಗಳೇ ಇರಲಿಲ್ಲ ಎಂದಾದರೆ ಅದಕ್ಕಿಂತ ಘೋರ ಇನ್ನೇನು ತಾನೆ ಇರಲು ಸಾಧ್ಯ ಎಂದು ಟ್ವಿಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.
ಭಾರತೀಯ ಯೋಧರೆ ಮೊದಲು ತಗಾದೆ ತೆಗೆದರು ಎಂದು ಸುಳ್ಳು ಆರೋಪ ಮಾಡುತ್ತಿರುವ ಚೀನಾ ತಾನು ಎಷ್ಟು ಸೈನಿಕರನ್ನು ಕಳೆದುಕೊಂಡಿದ್ದೇನೆ ಎಂದು ಎಲ್ಲಿಯೂ ಹೇಳಿಲ್ಲ.