ಗಡಿಯಲ್ಲಿ ಚೀನಾದ ಜೊತೆ ಬಿಕ್ಕಟ್ಟು ಸೃಷ್ಟಿಆಗಿರುವಾಗಲೇ ಕ್ಷಿಪಣಿಯ ಸಂಪೂರ್ಣ ಸಾಮರ್ಥ್ಯ ಪ್ರದರ್ಶನ| ಈ ತಿಂಗಳ ಅಂತ್ಯದಲ್ಲಿ ಬ್ರಹ್ಮೋಸ್‌ ಕ್ಷಿಪಣಿ ಸಾಲು ಸಾಲು ಪರೀಕ್ಷೆ

ನವದೆಹಲಿ(ನ.16): ಗಡಿಯಲ್ಲಿ ಚೀನಾದ ಜೊತೆ ಬಿಕ್ಕಟ್ಟು ಸೃಷ್ಟಿಆಗಿರುವಾಗಲೇ, ಬ್ರಹ್ಮೋಸ್‌ ಕ್ಷಿಪಣಿಯ ಸಂಪೂರ್ಣ ಸಾಮರ್ಥ್ಯ ಪ್ರದರ್ಶನಕ್ಕೆ ಭಾರತ ಮುಂದಾಗಿದೆ.

ನವೆಂಬರ್‌ ಕೊನೆಯ ವಾರದಲ್ಲಿ ಭಾರತೀಯ ಸಮುದ್ರ ಪ್ರದೇಶದಲ್ಲಿ ಬ್ರಹ್ಮೋಸ್‌ ಕ್ಷಿಪಣಿಯ ಬಹುವಿಧ ಉಡಾವಣೆ ನಡೆಯಲಿದೆ.

ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್‌ ಕ್ಷಿಪಣಿ ಶಬ್ದಾತೀತ ವೇಗದಲ್ಲಿ ಚಲಸಬಲ್ಲ ಹಾಗೂ ವಿಶ್ವದ ಅತಿ ವೇಗದ ಕ್ಷಿಪಣಿ ವ್ಯವಸ್ಥೆ ಆಗಿದೆ. ಈ ಕ್ಷಿಪಣಿಯ ಗರಿಷ್ಠ ಸಾಮರ್ಥ್ಯವನ್ನು 298 ಕಿ.ಮೀ.ಯಿಂದ 450 ಕಿ.ಮೀ.ಗೆ ವಿಸ್ತರಿಸಲಾಗಿದೆ.

ನವೆಂಬರ್‌ ಕೊನೆಯ ವಾರದಲ್ಲಿ ವಿವಿಧ ಗುರಿಗಳ ಮೇಲೆ ಕ್ಷಿಪಣಿಯ ಬಹುವಿಧ ಪರೀಕ್ಷಾರ್ಥ ಪ್ರಯೋಗವನ್ನು ಸೇನೆ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.