ಗಡಿ ಬಿಕ್ಕಟ್ಟು: ನಾಡಿದ್ದು ಭಾರತ, ಚೀನಾ ಸಭೆ| ಮಧ್ಯಸ್ಥಿಕೆ ಬೇಡ- ಚೀನಾ| ಲೆಫ್ಟಿನೆಂಟ್ ಜನರಲ್‌ಗಳ ಮಟ್ಟದ ಸಭೆ
ನವದೆಹಲಿ/ಬೀಜಿಂಗ್(ಜೂ.04): ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟು ಇತ್ಯರ್ಥಕ್ಕೆ ಜೂನ್ 6ರಂದು ಸೇನಾಧಿಕಾರಿಗಳ ಮಟ್ಟದ ಸಭೆ ನಡೆಯಲಿದೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.
ಜೂನ್ 6ರ ಸಭೆ ಲೆಫ್ಟಿನೆಂಟ್ ಜನರಲ್‌ಗಳ ಮಟ್ಟದ ಸಭೆಯಾಗಿದೆ. ಮಾತುಕತೆ ವೇಳೆ ಉತ್ತರ ಸೇನಾ ಕಮಾಂಡ್ ಮುಖ್ಯಸ್ಥ ಲೆ.ಜ. ವೈ.ಕೆ. ಜೋಶಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮಧ್ಯಸ್ಥಿಕೆ ಬೇಡ- ಚೀನಾ:
ಈ ನಡುವೆ ಗಡಿ ಬಿಕ್ಕಟ್ಟಿನಲ್ಲಿ ಮೂರನೇ ವ್ಯಕ್ತಿಗಳ ಮಧ್ಯಸ್ಥಿಕೆ ಬೇಡ ಎಂದು ಚೀನಾ ವಿದೇಶಾಂಗ ವಕ್ತಾರ ಝಾವೋ ಲಿಜಿಯಾನ್ ಪುನರುಚ್ಚರಿಸಿದ್ದು, ಉಭಯ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುತ್ತವೆ ಎಂದಿದ್ದಾರೆ.
"
